ಬಿಯರ್ ಶಾಂಪು ಬಗ್ಗೆ ನಿಮಗೆಷ್ಟು ಗೊತ್ತು..? ಇದರಿಂದಾಗೋ ಪ್ರಯೋಜನಗಳು ಇಲ್ಲಿವೆ ನೋಡಿ..?

25 Sep 2018 12:48 PM | General
1083 Report

ಬಿಯರ್ ಎಂಬ ಮಾದಕ ಪಾನೀಯಕ್ಕೆ ಕೂದಲ ಆರೈಕೆಯಲ್ಲಿ ಏನು ಕೆಲಸ ಎಂದು ನೀವು ಅಚ್ಚರಿ ಪಡುತ್ತಿರಬಹುದು. ಇದೊಂದು ವಿಶ್ವದ ನೆಚ್ಚಿನ ಮಾದಕ ಪಾನೀಯ ಎಂದೇ ನಾವೆಲ್ಲರೂ ಇದುವರೆಗೆ ತಿಳಿದುಕೊಂಡಿದ್ದೆವು, ಆದರೆ ತಡವಾಗಿಯಾದರೂ ಸರಿ, ಇದು ಕೂದಲ ಆರೈಕೆಯನ್ನೂ ಶಾಂಪೂ ರೂಪದಲ್ಲಿ ಅತ್ಯುತ್ತಮವಾಗಿ ನಿರ್ವಹಿಸುತ್ತದೆ ಎಂಬುದು ಈಗ ಗೊತ್ತಾಗಿದೆ. ಕೂದಲಿಗೆ ಆರೈಕೆ ನೀಡುವುದು ಮಾತ್ರವಲ್ಲ, ಕೂದಲನ್ನು ನುಣುಪುಗೊಳಿಸಿ ರೇಶ್ಮೆಯಂತಾಗಿಸಲೂ ಬಿಯರ್ ಬಳಕೆಯಾಗುತ್ತಿದೆ, ಒಂದರ್ಥದಲ್ಲಿ ಇದು ಕೂದಲನ್ನು ಅದ್ಭುತವಾಗಿಸುವ ಮಾಯಾದ್ರವ್ಯವೇ ಆಗಿದೆ. ಹೌದಾ..? ನಮಗೆ ಇದ್ರ ಬಗ್ಗೆ ಸಂಪೂರ್ಣ ಮಾಹಿತಿ ಬೇಕಲ್ಲಾ.. ಅಂತಾ ಯೋಚಿಸ್ತಿದ್ದೀರಾ..? ಖಂಡಿತ ಹೇಳ್ತೀವಿ

ಅಂದಹಾಗೆ, ಯಾವಾಗ ಬಿಯರ್ ಶಾಂಪೂ ಕೂದಲಿಗೆ ಇಷ್ಟೆಲ್ಲಾ ಪ್ರಯೋಜನಗಳನ್ನು ನೀಡುತ್ತಿದೆ ಎಂದು ನಿಮಗೆ ಅರಿವಾಯ್ತೋ, ಆಗ ಬೇರೆಲ್ಲಾ ಶಾಂಪೂಗಳನ್ನು ಬದಿಗಿರಿಸುವುದು ನಿಮಗೆ ಅನಿವಾರ್ಯವಾಗುತ್ತದೆ. ಏಕೆಂದರೆ ಬಿಯರ್ ಕೂದಲನ್ನು ಸ್ವಚ್ಛಗೊಳಿಸುವ, ಕಾಂತಿಕಾರಕ ಹಾಗೂ ಕಳೆಗುಂದಿದ ಕೂದಲಿಗೆ ಮರುಚೈತನ್ಯ ನೀಡುವ ಗುಣಗಳನ್ನು ಹೊಂದಿದೆ. ಈ ಆರೈಕೆ ಪಡೆದ ಕೂದಲು ಸೊಂಪಾಗಿ, ಮೃದುವಾಗಿ ಹಾಗೂ ಸುಲಭವಾಗಿ ನಿರ್ವಹಿಸುವಂತಹ ಹಾಗೂ ನೀಳವಾಗಿ ಬೆಳವಣಿಗೆ ಪಡೆಯುವಂತಹದ್ದಾಗಿ ಮಾರ್ಪಾಡು ಹೊಂದುತ್ತದೆ. ಒಂದು ವೇಳೆ ಮೇಲಿನ ವಾಕ್ಯದಲ್ಲಿ ಓದಿದ ಪ್ರಯೋಜನಗಳ ಬಗ್ಗೆ ಇನ್ನೂ ನಂಬಿಕೆ ಬರದೇ ಇದ್ದರೆ, ಈ ಕೆಳಗಿನ ಮಾಹಿತಿಗಳು ನಿಮ್ಮ ನಂಬಿಕೆಯನ್ನು ಬದಲಿಸಬಹುದು:

* ಬಿಯರ್ ನಲ್ಲಿ ವಿಟಮಿನ್ ಗಳು, ಖನಿಜಗಳು ಹಾಗೂ ಇತರ ಅವಶ್ಯಕ ಪೋಷಕಾಂಶಗಳು ಸಮೃದ್ದವಾಗಿದ್ದು ಕೂದಲ ಬೆಳವಣಿಗೆಗೆ ನೆರವಾಗುತ್ತವೆ. ವಿಶೇಷವಾಗಿ ಇದರಲ್ಲಿ ಸಿಲಿಕಾ ಎಂಬ ಖನಿಜ ಉತ್ತಮ ಪ್ರಮಾಣದಲ್ಲಿದೆ. ಇದರೊಂದಿಗೆ ತಾಮ್ರ, ಗಂಧಕ, ಕಬ್ಬಿಣ, ಮೆಗ್ನೇಶಿಯಂ ಹಾಗೂ ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿದ್ದು ಇವೆಲ್ಲವೂ ಕೂದಲ ಬೆಳವಣಿಗೆಗೆ ನೆರವಾಗುತ್ತವೆ.ತಲೆ ಕೂದಲಿಗೆ ಬಿಯರ್‌ನಿಂದ ಆರೈಕೆ ಮಾಡಿದರೆ, ಕೂದಲು ಬೆಳೆಯುತ್ತದೆ! ತುರಿಕೆ ಹಾಗೂ ತಲೆಹೊಟ್ಟನ್ನು ನಿವಾರಿಸಲೂ ನೆರವಾಗುತ್ತದೆ

* ಬಿಯರ್ ಕೂದಲಿಗೆ ಅತ್ಯುತ್ತಮವಾದ ಕಂಡೀಶನರ್ ಆಗಿದ್ದು ಕೂದಲನ್ನು ರೇಶ್ಮೆಯಂತೆ ನುಣುಪಾಗಿಸಲು ಹಾಗೂ ಇನ್ನಷ್ಟು ಸೊಂಪಗಾಗಿಸಲು ನೆರವಾಗುತ್ತದೆ. ಬಿಯರ್ ನಲ್ಲಿರುವ ಸಿಲಿಕಾ ಎಂಬ ಧಾತು ಈ ಗುಣಕ್ಕೆ ನೇರವಾದ ಪಾತ್ರ ವಹಿಸುತ್ತದೆ. ತನ್ಮೂಲಕ ಕೇವಲ ಕಾಂತಿ ಮಾತ್ರವಲ್ಲ, ಕೂದಲ ಗುಣಮಟ್ಟವನ್ನೂ ಹೆಚ್ಚಿಸುತ್ತದೆ.

* ಬಿಯರ್ ಹೆಚ್ಚುವರಿ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಏಕೆಂದರೆ ಇದು ಕೊಂಚವೇ ಆಮ್ಲೀಯವಾಗಿದ್ದು ತ್ವಚೆಯಲ್ಲಿರುವ ಹೆಚ್ಚುವರಿ ಎಣ್ಣೆಯಂಹ, ಕೂದಲಿಗೆ ಅಂಟಿಕೊಂಡಿದ್ದ ಜಿಡ್ಡಿನ ಅಂಶಗಳನ್ನು ಸಡಿಲಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚನ ಮಹಿಳೆಯರು ಬಯಸುವ ಹಗುರ ಮತ್ತು ಗಾಳಿಗೆ ಹಾರಾಡುವ ಕೂದಲು ಪಡೆಯಲು ಈ ಗುಣ ನೆರವಾಗುತ್ತದೆ.

ಒಂದು ವೇಳೆ ಬಿಯರ್ ನ ವಾಸನೆ ಸುಲಭವಾಗಿ ಹೋಗಿಲ್ಲದೇ ಇದ್ದರೆ ಇದರ ಬಳಿಕ ನಿಮ್ಮ ಆಯ್ಕೆಯ ಕೊಂಚ ಕಂಡೀಶನರ್ ಬಳಸಿ ಮತ್ತೊಮ್ಮೆ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಂದು ಬಾರಿ ಪುನರಾವರ್ತಿಸಿ. ಬಿಯರ್ ಬಳಕೆಯಿಂದ ಕೂದಲು ಸ್ವಚ್ಛಗೊಳ್ಳುವುದು ಮಾತ್ರವಲ್ಲ ತಲೆಯ ಚರ್ಮದಲ್ಲಿ ಪಿ ಎಚ್ ಮಟ್ಟವನ್ನು, ಸಮತೋಲನದಲ್ಲಿರಿಸಲು, ಕೂದಲ ಸಾಂದ್ರತೆ ಹೆಚ್ಚಿಸಲು ಹಾಗೂ ಕಾಂತಿ ಹೆಚ್ಚಿಸಲು ಮತ್ತು ಮುಖ್ಯವಾಗಿ ಸಿಕ್ಕುಗಳಿಲ್ಲದಂತೆ ಕೂದಲನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಶಾಂಪೂ ರೂಪದಲ್ಲಿ ಬಳಸಲು ಕೊಂಚ ಬಿಯರ್ ಅನ್ನು ಒಂದು ಪಾತ್ರೆಯಲ್ಲಿ ಸುಮಾರು ಹದಿನೈದು ನಿಮಿಷ ಕುದಿಸಿ. ಈ ಅವಧಿಯಲ್ಲಿ ಬಿಯರ್ ಪ್ರಮಾಣ ಸುಮಾರು ಅರ್ಧದಷ್ಟಾಗುತ್ತದೆ. ಈ ಮೂಲಕ ಬಿಯರ್ ನಲ್ಲಿರುವ ಆಲ್ಕೋಹಾಲ್ ಪ್ರಮಾಣ ಕಡಿಮೆಯಾಗುತ್ತದೆ. ಬಳಿಕ ಉರಿ ಆರಿಸಿ ತಣ್ಣಗಾಗಲು ಬಿಡಿ. ಪೂರ್ಣವಾಗಿ ತಣಿದ ಬಳಿಕ ಇದಕ್ಕೆ ಸುಮಾರು ಒಂದರಿಂದ ಒಂದೂವರೆ ಕಪ್ ನಷ್ಟು ನಿಮ್ಮ ಆಯ್ಕೆಯ ಶಾಂಪೂ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ನಾನದ ಸಮಯದಲ್ಲಿ ತಲೆಗೂದಲನ್ನು ನೆನೆಸಿಕೊಂಡು ಈ ಶಾಂಪೂ ಹಚ್ಚಿ ಚೆನ್ನಾಗಿ ನೊರೆಬರಿಸಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ವಿಧಾನವನ್ನು ವಾರಕ್ಕೆರಡು ಬಾರಿ ಪುನರಾವರ್ತಿಸಿ. ಶಾಂಪೂ ರೂಪದ ಬಳಕೆಯಿಂದ ತ್ವಚೆಯಲ್ಲಿನ ಕಲ್ಮಶಗಳು ನಿವಾರಣೆಯಾಗುತ್ತದೆ ಹಾಗೂ ಕೂದಲಿಗೆ ಕಂಡೀಶನರ್ ನಂತಹ ಆರೈಕೆ ದೊರಕುತ್ತದೆ. ಶಾಂಪೂ ಬಳಕೆಯಿಂದ ತಲೆಯ ಚರ್ಮವೂ ಕಲ್ಮಶರಹಿತ, ಹೊಸ ಕೂದಲು ಹುಟ್ಟಲು ಸೂಕ್ತವಾದ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ.  ಅರ್ಧ ಕಪ್ ಕಪ್ಪು ಬಿಯರ್, ಒಂದು ದೊಡ್ಡಚಮಚ ಜೇನು, ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಮತ್ತು ಒಂದು ಮೊಟ್ಟೆಯ ಹಳದಿ ಭಾಗ, ಇಷ್ಟನ್ನೂ ಚೆನ್ನಾಗಿ ಬೆರೆಸಿ ಈ ಲೇಪವನ್ನು ಕೂದಲ ಬುಡದಿಂದ ಪ್ರಾರಂಭಿಸಿ ತುದಿಯವರೆಗೆ ತಲುಪುವಂತೆ ದಪ್ಪನಾಗಿ ಹಚ್ಚಿಕೊಳ್ಳಿ. ಈಗ ಶವರ್ ಕ್ಯಾಪ್ ಒಂದನ್ನು ಧರಿಸಿ ಸುಮಾರು ಒಂದರಿಂದ ಎರಡು ಘಂಟೆಗಳ ವರೆಗೆ ಹಾಗೇ ಬಿಡಿ. ಬಳಿಕ ಎಂದಿನಂತೆ ಶಾಂಪೂ ಬಳಸಿ ತೊಳೆದುಕೊಳ್ಳಿ, ಬಳಿಕ ಕಂಡೀಶನರ್ ಬಳಸಿ ತೊಳೆದುಕೊಳ್ಳಿ. ಇದನ್ನು ವಾರಕ್ಕೊಮ್ಮೆ ಅನುಸರಿಸಿ. ಈ ವಿಧಾನವನ್ನು, ವಾರಕ್ಕೊಮ್ಮೆ ಅನುಸರಿಸಿ. ಈ ವಿಧಾನ ಒಣ ಮತ್ತು ಸಾಮಾನ್ಯ ಕೂದಲಿಗೆ ಹೆಚ್ಚು ಸೂಕ್ತವಾಗಿದೆ. ಈ ವಿಧಾನದಿಂದ ಕೂದಲಿಗೆ ಹೆಚ್ಚಿನ ಆರೈಕೆ ದೊರಕುತ್ತದೆ ಹಾಗೂ ಕೂದಲಿನ ಆರ್ದತೆ ನಷ್ಟವಾಗುವುದರಿಂದ ತಡೆಯಲ್ಪಡುತ್ತದೆ. ಅಲ್ಲದೇ ತಲೆಯ ತ್ವಚೆಯ ಆರೋಗ್ಯವೂ ಉತ್ತಮಗೊಂಡು ಹೊಸ ಕೂದಲು ಹುಟ್ಟಲು ನೆರವಾಗುತ್ತದೆ.

 

Edited By

Manjula M

Reported By

Manjula M

Comments