ಹಸಿದವರ ಹೊಟ್ಟೆ ತುಂಬಿಸುವ ಈತ ನಿಜಕ್ಕೂ ಅನ್ನದಾತ

24 Sep 2018 4:48 PM | General
732 Report

ಭಾರತೀಯ ಸಂಸ್ಕೃತಿಯಲ್ಲಿ ರೈತರನ್ನಷ್ಟೇ ಅಲ್ಲ.., ಅನ್ನ ಹಾಕುವ ಮಹನೀಯರು ಯಾರೇ ಆಗಿರಲೀ ಅವ್ರನ್ನ ಅನ್ನದಾತ ಎಂದೇ ಕರೆಯುತ್ತೇವೆ. ಹೌದು.., ಸಮಾಜದಲ್ಲಿರುವ ಬಹುತೇಕರು ತಮ್ಮ ಕುಟುಂಬವನ್ನ ತಾವು ಸಲುಹುದೇ ಕಷ್ಟವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಿ ಅವ್ರುಗೆ ಹೊಟ್ಟೆ ತುಂಬಿಸುವುದು ಇದೆಯಲ್ಲಾ ಇದು ನಿಜಕ್ಕೂ ದೊಡ್ಡತನವೇ ಸರಿ.

ಸಮಾಜದಲ್ಲಿ ಈ ರೀತಿಯ ದೊಡ್ಡತನದ ದಿಟ್ಟ ವ್ಯಕ್ತಿಗಳು ಸಿಗುವುದು ವಿರಳ. ಅಂತಹ ಕೆಲವರಲ್ಲಿ ಹೈದ್ರಾಬಾದ್‍ನ ಅಜರ್ ಕೂಡ ಒಬ್ಬರು. ಇವರು ಬಡವರ ಪಾಲಿನ ಭಾಗ್ಯದಾತರು.., ಹಸಿದವರ ಪಾಲಿನ ಅನ್ನದಾತರು. ಒಂದು ಕಾಲದಲ್ಲಿ ಅವ್ರಿಗೆ ಊಟವಿಲ್ಲದಿದ್ದರು ಬೇರೆಯವ್ರ ಹೊಟ್ಟೆ ತುಂಬಿಸುವ ಪುಣ್ಯದ ಕೆಲಸ ಮಾಡುತ್ತಿರುವವರು.ಹೌದು.., ಭಾರತದಲ್ಲಿ ಬಡವರ ಸಂಖ್ಯೆಗೇನೂ ಕಮ್ಮಿಯಿಲ್ಲ.., ಇಲ್ಲಿ ಊಟಕ್ಕೆ ಗತಿಯಿಲ್ಲದೇ ದಿನಂಪ್ರತಿ ನೂರಾರು ಜನರು ಸಾವಿಗೀಡಾಗುತ್ತಿದ್ದಾರೆ. ಕಡುಬಡವರಿಗೆಂದೇ ಸರ್ಕಾರದಿಂದ ನೂರಾರು ಯೋಜನೆಗಳೇನು ಜಾರಿಗೆ ಬರ್ತೀವೆ ಆದ್ರೆ ಅವು ಸೂಕ್ತ ಫಲಾನುಭಾವಿಗಳನ್ನು ತಲುಪಿತ್ತಿಲ್ಲ ಎನ್ನುವುದೇ ವಿಪರ್ಯಾಸ.ತಿಂದವನಿಗೆ ಗೊತ್ತಂತೆ ಬೆಲ್ಲದ ರುಚಿ ಏನು ಎಂದು.., ಹಾಗೇ ಹಸಿದವನಿಗೆ ಗೊತ್ತಂತೆ ಅನ್ನದ ಬೆಲೆ ಏನು ಎಂದು. ಈ ರೀತಿ ಅನ್ನದ ಬೆಲೆ ತಿಳಿದ ಅಜಾರ್‍ಗೆ ಹಸಿವಿನ ಬೆಲೆಯೂ ಗೊತ್ತಿತ್ತು. ಹಾಗಾಗಿಯೇ ಅವ್ರು ಹಸಿದವರಿಗೆ ಹೊಟ್ಟೆ ತುಂಬಿಸುವ ಕಾಯಕದಲ್ಲಿ ನಿರತರಾದ್ರು. ಬಡವರು ಹೊಟ್ಟೆ ತುಂಬಿದ ಮಾತುಗಳಿಗೆ ಮೌನಿಯಾದರು. ಇದೇ ಜೀವನದ ನಿಜವಾದ ಸಾರ್ಥಕತೆ ಎಂದು ತಿಳಿದು ಅದನ್ನು ಮುಂದುವರೆಸಿಕೊಂಡು ಬಂದರು.

ಹೌದು.., ಈ 36 ವರ್ಷ ವಯಸ್ಸಿನ ಅಜರ್ ಮಕ್ಸುಸಿ ಹೈದ್ರಾಬಾದ್ ಮೂಲದವರು. ಇವ್ರು ಪ್ರತಿನಿತ್ಯ 100 ರಿಂದ 150 ಮಂದಿ ಪುರುಷರು, ಮಹಿಳೆಯರು, ಮಕ್ಕಳಿಗೆ ಊಟ ಹಾಕುತ್ತಾರೆ. ಹಾಗಂತ ಇವರೇನು ಶ್ರೀಮಂತರಲ್ಲ. ಬಡವರು ಅದರಲ್ಲೂ ಅನ್ನದ ಬೆಲೆ ತಿಳಿದವರು ಸಧ್ಯ ಹಸಿದವರ ಪಾಲಿಗೆ ಅನ್ನದಾತರಾಗಿರುವ ಅಜರ್.., ಓಲ್ಡ್ ಹೈದ್ರಾಬಾದ್ನ ದಬೀಪುರ ಫ್ಲೈ ಓವರ್ ಅಡಿಯಲ್ಲಿ ಕಳೆದ 3 ವರ್ಷಗಳಿಂದ ನಿರಾಶ್ರಿತರ ಹಸಿದ ಹೊಟ್ಟೆ ತುಂಬಿಸುತ್ತಿದ್ದಾರೆ. ‘‘ ಸ್ವತಃ ನನಗೆ ಹಸಿವು ಏನೆಂಬುದು ತಿಳಿದಿದೆ, ಯಾರು ಕೂಡ ಅಂತಹ ಪರಿಸ್ಥಿತಿಯನ್ನ ಎದುರಿಸಬಾರದೆಂಬುದು ನನ್ನ ಗುರಿ.’’ ಇದೇ ನನ್ನ ಈ ಸಾಧನೆಗೆ ಸ್ಫೂರ್ತಿ ಎನ್ನುತ್ತಾರೆ ಅಜರ್.ಸಧ್ಯ ಪ್ಲಾಸ್ಟರ್ ಆಫ್ ಪ್ಯಾರಿಸ್ ಇಂಟೀರಿಯಲ್ ಬ್ಯುಸಿನೆಸ್ ಮಾಡುತ್ತಿರುವ ಅಜರ್, ಕೆಲ ವರ್ಷದ ಹಿಂದೆ ರೈಲ್ವೇ ಸ್ಟೇಷನ್ ಬಳಿ ವಿಕಲಚೇತನ ಮಹಿಳೆ ಲಕ್ಷ್ಮೀ, ಎಂಬುವರನ್ನ ನೋಡಿದಾಗಿನಿಂದ ಬಡವರಿಗೆ ಊಟ ಹಾಕಲು ಪ್ರಾರಂಭಿಸಿದರಂತೆ. ಆ ಮಹಿಳೆ ಅನ್ನ ಸೇವಿಸಿ ದಿನಗಳೇ ಕಳೆದು ಹೋಗಿದ್ದವು. ಅದು ನನ್ನ ಮನಸ್ಸಿಗೆ ತುಂಬಾನೇ ಕಾಡಿತು. ಅಷ್ಟೇ ಅಲ್ಲದೇ ಅದೇ ನನಗೆ ಸ್ಫೂರ್ತಿಯಾಯಿತು ಎನ್ನುತ್ತಾರೆ ಅಜರ್.

‘‘ಒಂದು ದಿನ ನನ್ನ ಪತ್ನಿ ಸುಮಾರು 15 ಜನರಿಗೆ ಆಗುವಷ್ಟು ಆಹಾರ ತಯಾರಿಸಿದ್ದಳು, ಆ ಊಟವನ್ನ ನಾನು ಫ್ಲೈ ಓವರ್ ಕೆಳಗೆ ವಾಸಿಸುವ ನಿರಾಶ್ರಿತರಿಗೆ ಹಂಚಿದೆ.’’ ಅದು ನನಗೆ ಇನ್ನಿಲ್ಲದ ಮನೋಲ್ಲೋಸವನ್ನ ನೀಡಿತು. ನಂತರ ಕೆಲವೇ ದಿನಗಳಲ್ಲಿ ಅಜರ್ ಪ್ರತಿನಿತ್ಯ ನಿರಾಶ್ರಿತರ ಹಸಿವನ್ನ ಇಂಗಿಸಲು ಪ್ರಾರಂಭಿಸಿದ್ರು. ಇಂದು ಅವರು ಪ್ರತಿನಿತ್ಯ 1500 ರಿಂದ 1700 ರಷ್ಟು ಹಣವನ್ನ ಅನ್ನದಾನಕ್ಕಾಗಿ ಖರ್ಚು ಮಾಡುತ್ತಾರೆ. ಬಹುತೇಕ ಹಣ ಅವರ ಜೇಬಿನಿಂದಲೇ ಖರ್ಚಾಗುತ್ತಿದ್ದು, 25 ಕೆಜಿ ಅಕ್ಕಿ, 2 ಕೆಜಿ ಧಾನ್ಯಗಳು, 1 ಲೀಟರ್ ಆಯಿಲ್ ಮತ್ತು ಸಾಂಬಾರು ಪದಾರ್ಥಗಳನ್ನ ಖರೀದಿಸಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಅಜರ್ ಈ ಸಾಮಾಜಿಕ ಸೇವೆಗೆ ಸ್ನೇಹಿತರು ಕೈ ಜೋಡಿಸಿರೋದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ. ‘‘ಅನೇಕ ಜನರು ನನಗೆ ಕೈ ಜೋಡಿಸಿದ್ರು ಮತ್ತು ನನಗೆ ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ರು, ಆದ್ರೆ ಹಣದ ಮೂಲಕ ಸಹಾಯ ಮಾಡುವವರನ್ನ ನಿರಾಕರಿಸಿದೆ.’’ ಯಾಕಂದ್ರೆ ನಿರಾಶ್ರಿತ ಜನರು ಊಟವಿಲ್ಲದೆ, ಬಟ್ಟೆಯಿಲ್ಲದೆ ಪರದಾಡುತ್ತಿರುತ್ತಾರೆ, ಅಂತವರಿಗೆ ಹಣ ನೀಡುವುದು ಸರಿಯಲ್ಲ. ಹಣ ನೀಡಿದ್ದೇ ಆದಲ್ಲಿ ಕುಡಿತದ ಚಟಕ್ಕೆ ಬಳಸುತ್ತಾರೆ. ಹೀಗಾಗಿಯೇ ಅಜರ್ ನಿರಾಶ್ರಿತ ಜನರಿಗೆ ಪ್ರತಿನಿತ್ಯವೂ ಅನ್ನ ಸಂತರ್ಪಣೆ ಮುಂದಾಗಿದ್ದಾರೆ. ಮತ್ತು ಅವರ ಬಳಿ ಯಾರೇ ಹಸಿವು ಅಂತಾ ಬಂದರು ಒಂದು ಹೊತ್ತಿನ ಊಟವನ್ನಾದ್ರು ಕೊಟ್ಟು ಕಳುಹಿಸುತ್ತಾರೆ. ವಿಭಿನ್ನವಾಗಿ ಯೋಚಿಸುವ ಅಜರ್ ಮಕ್ಸುಸಿರ ಈ ಸಾಮಾಜಿಕ ಸೇವೆ ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ಬಡವರಿಗೆ, ನಿರಾಶ್ರಿತರಿಗೆ ನೆರವು ಒದಗಿಸಿ ಸಮಾಜಸೇವೆ ಮಾಡುತ್ತಿರುವ ಇವರು ಇಡೀ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ.

Edited By

Manjula M

Reported By

Manjula M

Comments