ಕೂದಲ ಸಮಸ್ಯೆಗೆ ಮನೆಮದ್ದು ಇಲ್ಲಿದೆ ನೋಡಿ

24 Sep 2018 2:40 PM | General
361 Report

ಸಾಮಾನ್ಯವಾಗಿ ಎಲ್ಲ ಮಹಿಳೆಯರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತೀಕ್ಷ್ಣವಾದ ಪ್ರೊಟೀನ್ ಚಿಕಿತ್ಸೆ ನೀಡಿದರೆ ಮಾತ್ರ ಕೂದಲಿನ ಸಮಸ್ಯೆ ತಡೆಯಬಹುದು. ಮೊಟ್ಟೆಯ ಒಳ ಭಾಗದ ಹಳದಿ ದ್ರವವು ಫ್ಯಾಟಿ ಆಸಿಡ್, ಪ್ರೊಟೀನ್ ಮತ್ತು ವಿಟಾಮಿನ್‌ಗಳಾದ ಎ, ಡಿ ಮತ್ತು ಇ ಯನ್ನು ಹೊಂದಿದೆ. ಇದು ಕೂದಲ ಬೆಳವಣಿಗೆಗೆ ನೆರವಾಗುವುದರ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದನ್ನು ಅಲೀವ್ ಎಣ್ಣೆಯ ಜೊತೆ ಮಿಶ್ರಣ ಮಾಡಿ ಹಚ್ಚಿದರೆ ಕೂದಲು ಇನ್ನಷ್ಟು ಸದೃಢವಾಗುವುದರ ಜೊತೆಗೆ ಕೂದಲು ಮೃದುವಾಗುತ್ತದೆ. ಅಕಾಲಿಕ ನರೆಯಿಂದ ಕೂಡ ಇದು ರಕ್ಷಣೆ ನೀಡುತ್ತದೆ.

ಎರಡು ಮೊಟ್ಟೆಗಳ ಹಳದಿ ಭಾಗವನ್ನು ಒಂದು ಕಪ್ ನೀರಿನಲ್ಲಿ ಹಾಕಿ ಅದಕ್ಕೆ 2 ಚಮಚ ಅಲಿವ್ ಎಣ್ಣೆ ಸೇರಿಸಿ. ಇದನ್ನು ತಲೆಗೆ ಎರಡು ಬೆರಳುಗಳ ಸಹಾಯದಿಂದ ಹಚ್ಚಿಕೊಳ್ಳಿಬಳಿಕ ಪ್ಲಾಸ್ಟಿಕ್ ಕ್ಯಾಪ್ ಹಾಕಿಕೊಂಡು 20 ನಿಮಿಷ ಒಣಗಲು ಬಿಡಿ. ಬಳಿಕ ತಲೆ ತೊಳೆಯಿರಿ. ಎಣ್ಣೆಗೂದಲ ಮಹಿಳೆಯರಿಗೆ ಮೊಟ್ಟೆಯ ಬಿಳಿ ಭಾಗದ ಮಾಸ್ಕ್ ಅತ್ಯಂತ ಉಪಯುಕ್ತ. ತಲೆಯಲ್ಲಿ ಜಿನುಗುವ ಹೆಚ್ಚುವರಿ ಎಣ್ಣೆಯಿಂದ ಚರ್ಮದ ತೂತುಗಳು ಮುಚ್ಚಿಕೊಂಡು ಸೋಂಕು ಮತ್ತು ಮೊಡವೆಗೆ ಕಾರಣವಾಗುತ್ತವೆ. ಇದರಿಂದ ಕೂದಲು ಉದುರುವಿಕೆ ಆರಂಭವಾಗುತ್ತದೆ. ಇದಕ್ಕೆ ಮೊಟ್ಟೆಯ ಬಿಳಿ ಪ್ರೊಟೀನ್ ಅತ್ಯುತ್ತಮ ಔಷಧ. ಇದನ್ನು ಜೇನು ಮತ್ತು ಆಲೀವ್ ಎಣ್ಣೆಯ ಜೊತೆ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಮಿಶ್ರಣವನ್ನು 15 ರಿಂದ 20 ನಿಮಿಷ ಬಿಟ್ಟು ತಲೆಗೆ ಹಚ್ಚಿಕೊಳ್ಳಿ. ಮೊಟ್ಟೆ ಆರೋಗ್ಯಕ್ಕೆ ಮಾತ್ರವಲ್ಲ ತಲೆ ಕೂದಲಿಗೂ ಒಳ್ಳೆಯದು .

keywords: Hair fall, Hair fall best medicine,Hair fall, Hair fall control ayurvedic treatment, Hair fall control home remedies.

Edited By

Manjula M

Reported By

Manjula M

Comments