ಸರ್ಕಾರಿ ಉದ್ಯೋಗ ಪಡೆಯಲು ಇನ್ಮುಂದೆ ಇದು ಕೂಡ ಕಡ್ಡಾಯ..! ಯಾವುದು ಅಂತೀರಾ..? ಇದನ್ನೊಮ್ಮೆ ಓದಿ

24 Sep 2018 11:29 AM | General
540 Report

ಶಿಕ್ಷಣ ಅನ್ನೋದು ಎಲ್ಲರಿಗೂ ಕೂಡ ಮುಖ್ಯ.. ಅದೇ ರೀತಿ ಶಿಕ್ಷಣ ಕಲಿತವರಿಗೆಲ್ಲಾ ಕೆಲಸ ಅನ್ನೋದು ಅಷ್ಟೆ ಮುಖ್ಯ.. ಆದರೆ ಎಲ್ಲರೂ ಕೂಡ ಸರ್ಕಾರಿ ಉದ್ಯೋಗ ಬಯಸೋದು ಕಾಮನ್…ಆದರೆ ಸರ್ಕಾರಿ ಉದ್ಯೋಗ ಸಿಗೋದು ಬೆರಳೆಣಿಕೆ ಜನರಿಗಷ್ಟೆ… ಸರ್ಕಾರಿ ಕೆಲಸ ದೇವರ ಕೆಲಸ ಇದ್ದ ಹಾಗೆ.. ಸರ್ಕಾರಿ ಕೆಲಸ ಸಿಕ್ತು ಅಂದರೆ ಲೈಫ್ ಸೆಟಲ್ ಅನ್ಕೊತ್ತಾರೆ. ಆದರೆ ಸರ್ಕಾರಿ ಕೆಲಸ ತಗೋಳೋದು ಅಂದರೆ ತಮಾಷೆ ಮಾತಲ್ಲ ಬಿಡಿ. ಆದರೆ ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಉದ್ಯೋಗ ತಗೊಳೋದು ಇನ್ನು ಕಷ್ಟವಾಗಿದೆ. ಹೇಗೆ ಅಂತೀರಾ..

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಉದ್ಯೋಗ ಬಯಸುವವರಿಗೆ 5 ವರ್ಷ ಮಿಲಿಟರಿ ತರಬೇತಿಯನ್ನು ಕಡ್ಡಾಯಗೊಳಿಸಬೇಕು ಎಂದು ಸಂಸದೀಯ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಕುರಿತು ಪ್ರಸ್ತಾವನೆಯನ್ನು ಸಿದ್ದಗೊಳಿಸಬೇಕು ಎಂದು ಈ ಶಿಫಾರಸ್ಸಿನಲ್ಲಿ ತಿಳಿಸಿದೆ. ಸಿಬ್ಬಂದಿ ಇಲಾಖೆ ಮತ್ತು ತರಬೇತಿ ಇಲಾಖೆ ನೇರವಾಗಿ ದೇಶದ ಪ್ರಧಾನ ಮಂತ್ರಿಗಳಿಗೆ ಈ ಪ್ರಸ್ತಾವನೆಯನ್ನು ಸಲ್ಲಿಸಲಿದೆ. 5 ವರ್ಷದ ಮಿಲಿಟರಿ ತರಬೇತಿಯನ್ನು ಕಡ್ಡಾಯಗೊಳಿಸದರೆ ರಕ್ಷಣಾ ಪಡೆಗಳು ಎದುರಿಸುತ್ತಿರುವ ಸಿಬ್ಬಂದಿಗಳ ಕೊರತೆಯೂ ನಿವಾರಣೆಯಾಗುತ್ತದೆ ಎಂದು ಸಂಸದೀಯ ಸಮಿತಿ ಅಭಿಪ್ರಾಯ ಪಟ್ಟ್ಟಿರುತ್ತದೆ.ಭಾರತೀಯ ಸೇನೆ ಸುಮಾರು 7000 ಸಿಬ್ಬಂದಿಗಳ ಕೊರತೆಯನ್ನು ಎದುರುಸುತ್ತಿದೆ ಎಂಬ ವರದಿ ಕೆಲವು ದಿನಗಳ ಹಿಂದೆ ಬಂದಿತ್ತು. ಈ ವರದಿ ಬಂದ ಕೆಲವೆ ಕೆಲವು ತಿಂಗಳಲಲ್ಲಿ ಸಂಸದೀಯ ಸಮಿತಿ 5 ವರ್ಷಗಳ ಮಿಲಿಟರಿ ತರಬೇತಿಯನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಹಾಗಾಗಿ ಸರ್ಕಾರಿ ಉದ್ಯೋಗ ಪಡೆಯುವುದು ಇನ್ನು ಮುಂದೆ ಸ್ವಲ್ಪ ಕಷ್ಟವೆ ಸರಿ.

 

keywords: Government Job, Government Job Karnataka, Government job details

Edited By

Manjula M

Reported By

Manjula M

Comments