ಬಂಗಾರದ ಆಭರಣಗಳನ್ನು ಕೊಳ್ಳುವಾಗ ಕಡ್ಡಾಯವಾಗಿ ನೀವು ತಿಳಿದಿರಲೇ ಬೇಕಾದ ಅಂಶಗಳು

22 Sep 2018 12:34 PM | General
701 Report

ಭಾರತೀಯರಿಗೆ ಬಂಗಾರದ ಮೇಲೆ ಎಲ್ಲಿಲ್ಲದ ಮೋಹ, ಹೆಣ್ಣುಮಕ್ಕಳಂತು ಕೆಜಿ ಬಂಗಾರವಿದ್ದರೂ ಮತ್ತಷ್ಟು ಕೊಳ್ಳಬೇಕೆನ್ನುವ ಆಸೆ. ಆದರೆ ಬಂಗಾರ ಕೊಳ್ಳುವಾಗ ನಮೆಗೆ ಬಂಗಾರದ ಗುಣಮಟ್ಟವನ್ನು ತಿಳಿದುಕೊಳ್ಳಲು ಕೆಲವು ಮಾನದಂಡಗಳು ಗೊತ್ತಿರಲೇ ಬೇಕು. ಆ ಅಂಶಗಳು ನಮಗೆ ಗೊತ್ತಿರದೇ ಇದ್ದರೆ ಅಂಗಡಿಯವನು ನಮಗೆ ಟೋಪಿ ಹಾಕುವುದಂತು ಸತ್ಯ.

ನಮಗೆ 24 ಕ್ಯಾರೆಟ್​ ಬಂಗಾರದಿಂದ 8 ಕ್ಯಾರೆಟ್​ ಬಂಗಾರದವರೆಗೆ ಸಿಗುತ್ತದೆ ಈ ಬಂಗಾರಗಳಲ್ಲಿ ಕೆಲವು ಒಡವೆ ಮಾಡುವುದಕ್ಕೆ ಬಳಸಿದರೆ ಮತ್ತೆ ಕೆಲವನ್ನು ಬೇರೆ ಬೇರೆ ಕಾರಣಗಳಿಗೆ ಬಳಸುತ್ತಾರೆ. ಯಾವ ಅಕ್ಕಸಾಲಿಗ ಕೂಡ 24 ಕ್ಯಾರೆಟ್​ ಬಂಗಾರದಲ್ಲಿ ಒಡವೆ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಬಂಗಾರದ ಗುಣಮಟ್ಟವನ್ನು ಅಳೆಯುವ ಕೆಲವು ವಿಷಯಗಳ ಬಗ್ಗೆ ನಿಮಗೆ ಮಾಹಿತಿ ಕಡ್ಡಾಯವಾಗಿ ತಿಳಿದುಕೊಂಡರೆ ನಿಮಗೇ ಒಳ್ಳೆಯದು.

ಪ್ಯೂರಿಟಿ ಗ್ರೇಡ್​…!!!

ಬಹಳಷ್ಟು ಮಂದಿ, ನಾವು ಶುದ್ಧವಾದ ಚಿನ್ನದ ಆಭರಣಗಳನ್ನು ಖರೀದಿಸಿದ್ದೇವೆಂದು ಹೇಳುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ಶುದ್ಧ ಚಿನ್ನ ಎಂದರೇನೆಂದು ಬಹಳ ಜನಕ್ಕೆ ತಿಳಿದಿಲ್ಲ. 24 ಕ್ಯಾರೆಟ್ ಅಥವಾ 999 ಚಿನ್ಹೆ ಇದ್ದಲ್ಲಿ ಅದು ಶುದ್ಧ ಚಿನ್ನವೆಂದು ತಿಳಿಯಬೇಕು. ಇದರ ಬೆಲೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ನಮಗೆ ಇಂತಹ ಚಿನ್ನವನ್ನು ಯಾರೂ ಮಾರುವುದಿಲ್ಲ ಏಕೆಂದರೆ ಶುದ್ಧ ಚಿನ್ನ ಮೃದುವಾಗಿರುತ್ತದೆ. ಇದಕ್ಕೆ ನಿಗದಿತ ಪ್ರಮಾಣದಲ್ಲಿ ತಾಮ್ರ, ಬೆಳ್ಳಿ ಬೆರೆಸಿದರೆ ಮಾತ್ರ ಗಟ್ಟಿತನ ಪಡೆಯತ್ತದೆ. ಇದರಿಂದ ತಯಾರಿಸಿದ ಆಭರಣಗಳು ಮಾತ್ರ ಹೆಚ್ಚು ಕಾಲ ಬಾಳಿಕೆಬರುತ್ತವೆ. 23 ಕ್ಯಾರೆಟ್ ಅಥವ 22 ಕ್ಯಾರೆಟ್ ಅಂದರೆ 958 ಅಥವ 916 ಮುದ್ರೆಯುಳ್ಳ ಚಿನ್ನದ ಆಭರಣಗಳನ್ನು ಮಾತ್ರ ನಾವು ಉಪಯೋಗಿಸಬಹುದು. ಆದುದರಿಂದ ಈ ಗುರುತುಗಳುಳ್ಳ ಆಭರಣಗಳನ್ನು ಮಾತ್ರ ನಾವು ಖರೀದಿಸಬೇಕಾಗುತ್ತದೆ. ಕ್ಯಾರೆಟ್ ಕಡಿಮೆಯಾದಷ್ಟೂ ಶುದ್ಧತೆ ಕಡಿಮೆಯಾಗಿರುತ್ತದೆ. ಅಂದರೆ 22 ಕ್ಯಾರೆಟ್ ಚಿನ್ನಕ್ಕಿಂತ 8 ಕ್ಯಾರೆಟ್ ಚಿನ್ನದ ಶುದ್ಧತೆ ಕಡಿಮೆ. 21, 18, 17, 14, 10, 9, 8 ಕ್ಯಾರೆಟ್ ಆಗಿದ್ದರೆ ಕ್ರಮವಾಗಿ875, 750, 708, 585, 417, 375, 333 ಮುದ್ರೆಯಿರುತ್ತದೆ. ಈ ಮುದ್ರೆಗಳ ಮೂಲಕ ಚಿನ್ನದ ಶುದ್ಧತೆಯನ್ನು ತಿಳಿದುಕೊಳ್ಳಬಹುದು.

ಬಿ ಎಸ್ (BII) ಆಲ್ಮಾರ್ಕ್…!!!

ಆಭರಣಗಳ ಗುಣಮಟ್ಟ ಅದರಲ್ಲೂ ಬಂಗಾರದ ಗುಣಮಟ್ಟ ತಿಳಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಎನ್ನುವುದು ಇಂಡಿಯನ್ ಸ್ಟ್ಯಾಂಡರ್ಡ್ಸ್ ಇದೆ, ಈ ಆಲ್​ ಮಾರ್ಕ್​ ಬಂಗಾರದ ಗುಣಮಟ್ಟದ ಬಗ್ಗೆ ನೀಡುವ ಸರ್ಟಿಫಿಕೆಟ್. ಆದುದರಿಂದ ಆಭರಣಗಳನ್ನು ಕೊಳ್ಳುವಾಗ ಆದರ ಮೇಲೆ ಈ ಗುರುತು ಇದೆಯೇ ಎಂದು ಪರೀಕ್ಷಿಸಬೇಕು.

ಆಭರಣ ತಯಾರಾದ ವರ್ಷ …!!!

ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ಖರೀದಿಸುವ ಇತರೆ ವಸ್ತುಗಳಿಗೆ ಇರುವ ಹಾಗೆ ಬಂಗಾರದ ಆಭರಣಗಳ ಮೇಲೂ ಅವುಗಳನ್ನು ತಯಾರಿಸಿದ ವರ್ಷವನ್ನು ಮುದ್ರಿಸಿರುತ್ತಾರೆ. ಆಭರಣವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಆಭರಣದ ಮೇಲೆ ಆಂಗ್ಲ ಭಾಷೆಯ A ಗುರುತು ಇದ್ದಲ್ಲಿ ಅದು 2000 ಇಸವಿಯಲ್ಲಿ ತಯಾರಾಗಿರುತ್ತದೆ. ಅದೇ ರೀತಿ J ಇದ್ದಲ್ಲಿ 2008, N ಇದ್ದಲ್ಲಿ 2011, P ಇದ್ದಲ್ಲಿ 2012 ರಲ್ಲಿ ಆ ಆಭರಣವನ್ನು ತಯಾರಿಸಲಾಗಿದೆಯೆಂದು ತಿಳಿಯಬೇಕು. ಈ ಆಂಗ್ಲ ಭಾಷೆಯ ಅಕ್ಷರಗಳನ್ನುBIS ನಿರ್ಧರಿಸುತ್ತದೆ.

ಹಾಲ್ ಮಾರ್ಕ್ ಮುದ್ರೆ…!

ಚಿನ್ನದ ಶುದ್ಧತೆಯನ್ನು ತಿಳಿಸುವುದಕ್ಕಾಗಿ BIS ಪ್ರಮಾಣಪತ್ರ ಇರುವ ಹಾಗೆ ಹಾಲ್ ಮಾರ್ಕ್ ಸಹ. ಇದಕ್ಕೆ BIS ಆಥರೈಸೇಷನ್ ನೀಡುತ್ತದೆ. ಹಾಲ್ ಮಾರ್ಕ್ ಗುರುತು ಇರುವ ಆಭರಣಗಳನ್ನು ಶುದ್ಧವಾದ ಆಭರಣಗಳೆಂದು ಖರೀದಿಸಬಹುದು.

ಮಾರಟಗಾರರ ಗುರುತು…!

ಚಿನ್ನವನ್ನು ಕೊಳ್ಳುವಾಗ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಈ ಆಭರಣವನ್ನು ಮಾರಾಟ ಮಾಡುತ್ತಿರುವವರು ಯಾರು ಮತ್ತು ಇದರ ತಯಾರಕರು ಯಾರು ಎಂಬುದು ಅದೂ ಕೂಡ ಆಭರಣದ ಮೇಲೆ ಇರುತ್ತದೆ. ಇಲ್ಲದ್ದರೆ ನಾಳೆ ನಾವು ಆಭರಣದಲ್ಲಿ ಡ್ಯಾಮೇಜ್​ ಬಂದಾಗ ಅವರ ಬಳಿ ತೆಗೆದುಕೊಂಡು ಹೋದರೆ ಇದು ನಮ್ಮದಲ್ಲ ಎಂದು ಹೇಳುವ ಅವಕಾಶಗಳಿರುತ್ತವೆ.

ಹೀಗಾಗಿ ಯಾರೇ ಚಿನ್ನಾಭರಣ ಖರೀದಿಮಾಡಬೇಕೆಂದುಕೊಂಡರೆ ಈ ಮೇಲಿನ ಅಂಶಗಳ ಬಗ್ಗೆ ತಪ್ಪದೇ ಎಚ್ಚರ ವಹಿಸಬೇಕು.

Edited By

Manjula M

Reported By

Manjula M

Comments