ನಿಮ್ಮ ಮಕ್ಕಳು ಬುದ್ಧಿವಂತರಾಗಲು ಮನೆಯಲ್ಲಿ ಈ ಬದಲಾವಣೆಗಳನ್ನ ಮಾಡಿದರೆ ಸಾಕು…!

21 Sep 2018 4:11 PM | General
376 Report

ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು, ಹಾಗೆಯೆ ಬುದ್ದಿವಂತರಾಗಬೇಕು ಅಂತ ಎಲ್ಲ ಪೋಷಕರಿಗೂ ಕೂಡ ಇಷ್ಟ ಇರುತ್ತದೆ. ಆದರೆ ಹೇಗೆ ಅನ್ನೋದು ಕೂಡ ಒಂದು ಗೊಂದಲವು ಕೂಡ ಆಗಿರುತ್ತದೆ.

ಅದಕ್ಕಾಗಿ ಅಂತಾನೆ ಪೋಷಕರು ಜೀವನವಿಡಿ ದುಡಿಮೆಯಲ್ಲಿಯೇ ಕಳೆದು ಬಿಡುತ್ತಾರೆ. ಮಕ್ಕಳ ಏಳಿಗೆಗಾಗಿ ಒಳ್ಳೆಯ ಶಾಲೆ ಒಳ್ಳೆಯ ವಾತವರಣ, ಒಳ್ಳೆಯ ಸೌಲಭ್ಯ ಹೀಗೆ ಎಲ್ಲವನ್ನು ಕೂಡ ಆಲೋಚಿಸುತ್ತರೆ ಕೇವಲ ಹೊರಗಿನ ವಾತವರಣ ಅಷ್ಟೆ ಅಲ್ಲ, ಮನೆಯೊಳಗಿನ ವಾತವರಣವನ್ನು ಕೂಡ ಪೋಷಕರು ಬದಲಾಯಿಸಬೇಕು. ಆಗ ಋಣಾತ್ಮಕ ಅಂಶಗಳು ದೂರವಾಗಿ ಧನಾತ್ಮಕ ಅಂಶಗಳು ನೆಲೆಗೊಳ್ಳಲುಸಾಧ್ಯವಾಗುತ್ತದೆ

ಮಕ್ಕಳು ವಿಧ್ಯಾಬ್ಯಾಸದ ಕಡೆಗೆ ಪ್ರೇರೇಪಿತರಾಗಲು ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ಸಾಧ್ಯವಾಗುತ್ತದೆ. ಅವರ ಸಹಜವಾದ ಪ್ರತಿಭೆ ಹೊರಹೊಮ್ಮಲು ಸಹಕಾರಿ ಕೂಡ ಆಗುತ್ತದೆ.ನಿಮ್ಮ ಮನೆಯಲ್ಲಿ ಕೆಲವೊಂದು ಬದಲಾವಣೆಯಿಂದ ನಿಮ್ಮ ಮಕ್ಕಳ ಬುದ್ದಿ ಶಕ್ತಿ ಹೆಚ್ಚುತ್ತದೆ. ವಾಸ್ತು ಆಧಾರದ ಮೇಲೆ ಕೆಲವೊಂದು ಸರಳ ಸೂತ್ರಗಳನ್ನು ಅನುಸರಿಸಿದ ಮೇಲೆ ನಿಮ್ಮಮಕ್ಕಳಲ್ಲಿ ಆಗುವ ಕೆಲವೊಂದು ಬದಲಾವಣೆಗಳನ್ನು ನೀವು ನೋಡಬಹುದು. ಪರೀಕ್ಷೆ ಇನ್ನೆನು ಬರತ್ತಿದ್ದೆ ಅಂದರೆ ಸಾಕು ಮಕ್ಕಳಲ್ಲಿ ಭಯ ಶುರುವಾಗುತ್ತದೆ.ಪೋಷಕರಲ್ಲೂ ಕೂಡ ಭಯ ಶುರುವಾಗುತ್ತದೆ. ಹಾಗಾಗಿ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ಮತ್ತು ಬುದ್ದಿ ಶಕ್ತಿಯನ್ನು ಹೆಚ್ಚಿಸಲು ಒಂದಿಷ್ಟು ಸರಳ ವಿಧಾನಗಳು.

  • ನೀವು ಅಭ್ಯಾಸ ಮಾಡುವ ಮೇಜು ಯಾವಾಗಲೂ ಶುಚಿಯಾಗಿರಬೇಕು.
  • ನಿದ್ದೆ ಮಾಡುವ ಕೋಣೆಯಲ್ಲಿ ಕನ್ನಡಿಗಳ ಅವಶ್ಯಕತೆ ಇಲ್ಲ.
  • ಓದುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿಕೊಂಡು ಕುಳಿತುಕೊಳ್ಳಬೇಕು
  • ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು
  • ಓದುವ ಜಾಗ ವಿಶಾಲವಾಗಿರಬೇಕು
  • ಓದುವ ಕೋಣೆಯಲ್ಲಿ ಬೆಳಕು ಹೆಚ್ಚಾಗಿರಬೇಕು
  • ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ ಆದರೆ ಯಾವುದೆ ವಿಚಾರದಲ್ಲೂ ಅವರನ್ನೂ ಒತ್ತಾಯಿಸುವುದು ಬೇಡವೇ ಬೇಡ
  • ಮಕ್ಕಳ ಮುಂದೆ ಯಾವುದೆ ರೀತಿಯ ಜಗಳ ಆಡಬೇಡ

Edited By

Manjula M

Reported By

Manjula M

Comments