ಪೆಟ್ರೋಲ್​ ಬಂಕ್​​ನಲ್ಲಿ ಯಾವ ರೀತಿ ಮೋಸ ಮಾಡ್ತಾರೆ ಗೊತ್ತಾ..?

21 Sep 2018 3:28 PM | General
453 Report

ಇತ್ತೀಚಿನ ದಿನಗಳಲ್ಲಿ ಮೋಸ ಮಾಡುವವರು ಹೆಚ್ಚು, ಮೋಸ ಮಾಡಿಸಿಕೊಳ್ಳುವವರು ಹೆಚ್ಚು. ಜತೆಗೆ ಆಧುನೀಕತೆಯ ಬರದಲ್ಲಿ ಸ್ಪರ್ಧಾತ್ಮಕ ಯುಗದಲ್ಲಿರುವ ಜನರು ವಾಹನಗಳ ಖರೀದಿಯು ಹೆಚ್ಚಾಗಿದೆ. ಈಗಾಗಿ ರಸ್ತೆಗಳ ತುಂಬೆಲ್ಲ ವಾಹನಗಳದ್ದೆ ಕಾರುಬಾರು.

ಹೀಗೆ ದಿನೆ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನೆ ಆಧಾರವಾಗಿ ಇಟ್ಟುಕೊಂಡು ಸರ್ಕಾರ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದೆ.  ಜತೆಗೆ ಬಂಕ್​ಗಳಲ್ಲಿ ಮೋಸ ಮಾಡುವುದು ಹೆಚ್ಚಾಗಿದೆ. ಹೇಗೆ ಅಂತೀರಾ ಈ ಸುದ್ದಿ ಓದಿ .

ರೀಡಿಂಗ್ನಲ್ಲಿ ಮೋಸ..

ಸರ್ಕಾರ ಡೀಸೆಲ್, ಪೆಟ್ರೋಲ್ ದರ ಹೆಚ್ಚಿಸಿ ಜನರ ಮೇಲೆ ಬಾರ ಹೊರಿಸುತ್ತದೆ. ಇದರ ಜತೆಗೆ ಪೆಟ್ರೋಲ್ ಬಂಕ್​ಗಳಲ್ಲು ಜನರಿಗೆ ಮೋಸ ಮಾಡುತ್ತಾರೆ. ಹೇಗೆ ಅಂತೀರಾ ಪೆಟ್ರೋಲ್, ಡೀಸೆಲ್ ತುಂಬುವ ಮೊದಲು ರೀಡಿಂಗ್​ಅನ್ನು ಸೊನ್ನೆ ಮಾಡಿರುತ್ತಾರೆ. ಆದರೆ ನಮ್ಮ ಮುಂದೆ ರೀಡಿಂಗ್​ ಸೊನ್ನೆ ಮಾಡಿ ಸ್ವಲ್ಪ ಇಂಧನ ತುಂಬಿಸಿ ನಮ್ಮ ಗಮನವನ್ನು ಬೇರೆಡರ ಸೆಳೆದು ರೀಡಿಂಗ್​ ಅನ್ನು ಬದಲಾಯಿಸುತ್ತಾರೆ. ಜತೆಗೆ ಇಂಧನವನ್ನು ಕಡಿಮೆ ತುಂಬುತ್ತಾರೆ. ಇದರಿಂದ ಎಚ್ಚರಿಕೆಯಿಂದ ನಾವು ನಮ್ಮ ದೃಷ್ಠಿಯನ್ನು ಬೇರೆಕಡೆ ಮಾಡದೆ ರೀಡಿಂಗ್​ ಗಮನಿಸಬೇಕು. ಇಲ್ಲದಿದ್ದರೆ ಮೋಸ ಹೋಗುವುದು ಪಕ್ಕ.

ನಾಜಲ್ ಅನ್ನು ಒತ್ತುವುದು..

ಬಂಕ್​ಗಳಲ್ಲಿ ಇಂಧನ ತುಂಬುವ ವೇಳೆಯಲ್ಲಿ ಪದೇ ಪದೇ ನಾಜಲ್ ಒತ್ತುತ್ತಾರೆ.  ಜನರು ರೀಡಿಂಗ್ ಮೇಲೆ ಗಮನಹರಿಸಿರುವಾಗ ಈ ಕೆಲಸವನ್ನು ಮಾಡುತ್ತಾರೆ. ಈ ನಾಜಲ್ ಒತ್ತುವುದರಿಂದ ಇಂಧನ ಕಡಿಮೆ ಬರುತ್ತದೆ. ದ್ವಿಚಕ್ರ ವಾಹನಗಳಲ್ಲದೆ ಕಾರನ್ನು ಹೊಂದಿರುವವರು ವಾಹನದಿಂದ ಕೆಳಗಿಳಿಯದೆ ಇಂಧನ ತುಂಬಿಸಿಕೊಳ್ಳುತ್ತಾರೆ. ಇದರಿಂದ ಇಂಧನ ತುಂಬುವವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜತೆಗೆ ಹೆಚ್ಚಿನ ಇಂಧನವನ್ನು ಉಳಿಸಿಕೊಳ್ಳಲು ಆವರಿಗೆ ಅವಕಾಶ ಸಿಗುತ್ತದೆ.

ದೊಡ್ಡದಾದ ಪೈಪುಗಳ ಬಳಕೆ..

ಪೆಟ್ರೋಲ್ ಬಂಕ್​ಗಳಲ್ಲಿ ಇಂಧನ ತುಂಬುವ ಪೈಪುಗಳು ದೊಡ್ಡದಾಗಿರುತ್ತವೆ. ವಾಹನವು ಫ್ಯುಯಲ್ ಮೆಷಿನ್​ಗೆ ಹತ್ತಿರವಾಗಿದ್ದರೆ ಪೈಪುಗಳು ಬಾಗುತ್ತವೆ. ಆಗ ಸ್ವಲ್ಪ ಇಂಧನ ಪೈಪಿನಲ್ಲೆ ಉಳಿಯುತ್ತದೆ. ಇದರಿಂದ ನಾವು ಹಾಕಿಸಿದಷ್ಟು ಇಂಧನ ನಮ್ಮ ವಾಹನ ಸೇರುವುದಿಲ್ಲ. ಆದರಿಂದ ಇಂಧನ ಹಾಕಿಸಿಕೊಳ್ಳುವ ಮುನ್ನ ವಾಹನವನ್ನು ಮೇಷಿನ್ ಯಿಂದ  ಸ್ವಲ್ಪ ದೂರ ನಿಲ್ಲಿಸಬೇಕು ಇದರಿಂದ ಪೈಪು ನೇರವಾಗಿ ನಿಲ್ಲುವುದರಿಂದ ಅದರಲ್ಲಿ ಇಂಧನ ಉಳಿಯುವುದಿಲ್ಲ.

Edited By

Manjula M

Reported By

Manjula M

Comments