ನಿಮ್ಮ ಬಳಿ BPL ಕಾರ್ಡ್ ಇದಿಯಾ..? ಹಾಗಾದ್ರೆ ಸಿಕ್ತು ಅನ್ಕೊಳ್ಳಿ ರಾಜ್ಯ ಸರ್ಕಾರದಿಂದ ಕಾರ್ ಭಾಗ್ಯ..!! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

20 Sep 2018 1:24 PM | General
8428 Report

ಸರ್ಕಾರವು ಬಿಪಿಎಲ್ ಕಾರ್ಡುದಾರರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ದೇಶದಲ್ಲಿ ಅದೆಷ್ಟೋ ನಿರುದ್ಯೋಗಿಗಳಿದ್ದಾರೆ. ಅಂತಹ ಯುವಕ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 3500 ಮಂದಿಗೆ ಕಾರು ಖರೀದಿಸಲು 3 ಲಕ್ಷ ರೂ ವರೆಗೆ ಸಬ್ಸಿಡಿ ನೀಡಲು ನಿರ್ಧರ ಮಾಡಿದೆ.

ಈ ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಹೌದು, ಡಾ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಈ ಸಂಬಂಧ ವಿಶೇಷ ಯೋಜನೆಯನ್ನು ರೂಪಿಸಿದೆ. ರಾಜ್ಯ ಸರ್ಕಾರ ಈ ಯೋಜನೆಗಾಗಿ 105 ಕೋಟಿ ರೂ ಅನುದಾನವನ್ನೂ ಬಿಡುಗಡೆ ಮಾಡಿದೆ. ವಾಲ್ಮೀಕಿ, ಬೋವಿ, ದೇವರಾಜ ಅರಸು ಅಭಿವೃದ್ಧಿ ನಿಗಮಗಳ ಮೂಲಕ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಯೋಜನೆಗೆ ಬೆಂಗಳೂರಿನಲ್ಲಿ ಈಗಾಗಲೇ ಚಾಲನೆ ದೊರೆತಿದ್ದು ಆರಂಭಿಕವಾಗಿ 1000 ಅಭ್ಯರ್ಥಿಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸುಮಾರು 3500 ಟ್ಯಾಕ್ಸಿ ಕಾರುಗಳ ವಿತರಣೆ ಮಾಡಲಾಗುತ್ತಿದೆ. ಆಯ್ಕೆಯಾದ ಫಲಾನುಭವಿಗಳಿಗೆ ಒಂದು ಟ್ಯಾಕ್ಸಿಗೆ 3 ಲಕ್ಷ ರೂ ವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಅವರಿಗೆ ಬ್ಯಾಂಕ್’ಗಳಿಂದ ಸಾಲ ದೊರೆಯುವಂತೆ ಮಾಡುವುದು. ಓಲಾ ಹಾಗೂ ಊಬರ್ ಕಂಪನಿಗಳ ಜೊತೆ ಟೈಅಪ್ ಮಾಡಿಕೊಂಡು ಬಿಜಿನೆಸ್ ಕೊಡಿಸುವುದು, ಗಳಿಸಿದ ಆದಾಯದಲ್ಲಿ ಸಾಲ ಮರುಪಾವತಿಯಾಗುವಂತೆ ನೋಡಿಕೊಳ್ಳುವುದು ಮುಂತಾದ ಜವಬ್ದಾರಿಯನ್ನು ನಿಗಮವೇ ನೋಡಿಕೊಳ್ಳುತ್ತದೆ. ಅಭ್ಯರ್ಥಿ ಬಳಿ ಹಳದಿ ಬ್ಯಾಡ್ಜ್ ಇರಬೇಕು, ನಿರುದ್ಯೋಗಿಯಾಗಿರಬೇಕು,ಕುಟುಂಬದಲ್ಲಿ ಯಾರು ಸರ್ಕಾರಿ ನೌಕರಿ ಹೊಂದಿರಬಾರದು, ಬಿಪಿಎಲ್ ಕಾರ್ಡ್ ಹೊಂದಿರಬೇಕು. ವರ್ಷಕ್ಕೆ 12000 ರೂ ಆದಾಯ ಮೀರಿರಬಾರದು. ಮುಂತಾದ ಕಂಡೀಷನ್’ಗಳಿವೆ.

ಆಯಾ ಜಿಲ್ಲೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅರ್ಜಿಗಳನ್ನು ಪಡೆದು ಸ್ವವಿವರಗಳನ್ನು ಭರ್ತಿ ಮಾಡಿ ಕೊಡಬೇಕು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ,ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ. ಫಲಾನುಭವಿಯು 6 ರಿಂದ 8 ಲಕ್ಷ ರೂ ವರೆಗಿನ ಹುಂಡೈ ಕಂಪನಿಯ ಎಸ್ಸೆಂಟ್ ಕಾರು, ಟಯೋಟಾ, ಈಟಿಯಾಸ್, ಮಾರುತಿ ಸ್ವಿಫ್ಟ್ ಡಿಸೈರ್ ಕಾರುಗಳನ್ನು ಖರೀದಿಸಬೇಕಾಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಶೇರ್ ಮಾಡಿ.

Edited By

Manjula M

Reported By

Manjula M

Comments