ಕೋಟ್ಯಾಂತರ ಭಾರತೀಯರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ..! ಅಷ್ಟಕ್ಕೂ ಪ್ರಶ್ನೆ ಏನು..!!?

04 Sep 2018 11:25 AM | General
469 Report

ನಮ್ಮ ತಾತ ಮುತ್ತಾತನ ಕಾಲದಿಂದಲೂ ಕೂಡ ನಾವು ಭಾರತ ಮುಂದುವರೆಯುತ್ತಿರುವ ದೇಶ ಎಂದು ಕೇಳಿಕೊಂಡು ಬಂದಿದ್ದೆವು, ನಮ್ಮ ಮಕ್ಕಳ ಕಾಲಕ್ಕೂ ಅದು ಮುಂದುವರೆದ ದೇಶವಾಗಿಯೇ ಉಳಿಯಲಿದೆಯೇ..? ಅಥವಾ ಮುಂದುವರೆದ ದೇಶವಾಗುತ್ತದೆಯೇ ಎನ್ನುವ ಕೋಟ್ಯಾಂತರ ಭಾರತೀಯರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ.

ಭಾರತ ಇನ್ನು ಕೇವಲ ಹತ್ತು ವರ್ಷಗಳಲ್ಲಿ ಪ್ರಪಂಚದ ಮುಂದುವರೆದ ದೇಶಗಳ ಪಟ್ಟಿಗೆ ಸೇರ್ಪಡೆಯಾಗಲಿದೆ. ಆದರೆ ಅದಕ್ಕಾಗಿ ನಮ್ಮ ದೇಶ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಬೇಕು ಹಾಗಾದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಲಿದೆ. ಆದರೆ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡದೇ ಇದ್ದರೆ ನಮ್ಮ ಭಾರತ ಯಾವತ್ತು ಕೂಡ ಅಭಿವೃದ್ದಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ವರದಿಯೊಂದು ಹೇಳಿದೆ.ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದ ಸಂಶೋಧನ ವಿಭಾಗವು ಮಾಡಿರುವ ಅಧ್ಯಯನದ ಪ್ರಕಾರ ಭಾರತದಲ್ಲಿ ಇರುವ ಯುವ ಸಮೂಹದ ಬಗ್ಗೆ ಸರ್ಕಾರಗಳು ಗಮನ ನೀಡಿ ಅವರಿಗೆ ಉತ್ತಮ ಶಿಕ್ಷಣ ನೀಡಿ ದೇಶದಲ್ಲಿ ಉತ್ತಮ ಪ್ರಜೆಯಾಗಿ ರೂಪಿಸಿಬೇಕು. ಮತ್ತು ಸರ್ಕಾರಗಳು ಈ ಯುವಜನತೆಯನ್ನೇ ದೇಶದ ಬಂಡವಾಳವನ್ನಾಗಿ ಮಾಡಿಕೊಳ್ಳಬೇಕು ಹಾಗಾದಾಗ 2030ರ ವೇಳೆಗೆ ಭಾರತದಲ್ಲಿನ ಮಾನವ ಸಂಪನ್ಮೂಲವೇ ದೊಡ್ಡ ಬಂಡವಾಳವಾಗಲಿದೆ ಈ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕಾಗಿದೆ. ಒಂದು ವೇಳೆ ನಮ್ಮ ಜನ ಸಮುದಾಯವನ್ನು ಒಳ್ಳೆಯ ದಾರಿಗೆ ತರುವಲ್ಲಿ ಸರ್ಕಾರಗಳು ಎಡವಿದ್ದಲ್ಲಿ ಅದೇ ದೇಶಕ್ಕೆ ಮಾರಕವೂ ಆಗಲಿದೆ ಎಂದು ವರದಿ ಹೇಳಿದೆ.


ಕಳೆದ ಕೆಲವು ದಶಕಗಳಿಂದ ದೇಶದ ಕೆಲವು ರಾಜ್ಯಗಳಲ್ಲಿ ಗಣನೀಯವಾಗಿ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಇದಕ್ಕೆ ಕಾರಣ ಕಡಿಮೇ ಮಕ್ಕಳನ್ನು ಪಡೆದು ಅವರಿಗೆ ಒಳ್ಳೆ ಗುಣಮಟ್ಟದ ಶಿಕ್ಷಣ ಕೊಡಿಸುವುದಕ್ಕಾಗಿ ಪೋಷಕರು ಶ್ರಮಿಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು ಸರ್ಕಾರಗಳು ಸರ್ಕಾರಿ ಶಾಲೆ ಕಾಲೇಜುಗಳನ್ನು ಉಳಿಸುವ ಕಾಯಕಕ್ಕೆ ಕೈ ಹಾಕಬೇಕಿದೆ. ಈಗಿರುವ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ, ಮೌಲ್ಯಯುತ ಶಿಕ್ಷಣಗಳನ್ನು ನೀಡುವ ಅವಶ್ಯಕತೆ ಇದೆ ಎಂದು ಇದೇ ವರದಿ ಹೇಳಿದೆ. ಒಟ್ಟಿನಲ್ಲಿ ಈ ದೇಶದ ಭವಿಷ್ಯ ನಮ್ಮ ದೇಶದ ಯುವ ಸಮುದಾಯದ ಕೈಯಲ್ಲಿದೆ. ನಮ್ಮ ಯುವ ಸಮುದಾಯ ಯಾವರೀತಿ ದೇಶಕ್ಕಾಗಿ ದುಡಿಯುತ್ತದೆಯೋ ಅದೇ ರೀತಿ ಪ್ರಪಂಚದ ಮುಂದೆ ದೇಶ ತಲೆ ಎತ್ತಿ ನಿಲ್ಲಲಿದೆ.

Edited By

Manjula M

Reported By

Manjula M

Comments