ಕರ್ನಾಟಕ ಸರ್ಕಾರದ ಪ್ರಸೂತಿ ಕಾರ್ಯಕ್ರಮದ ಬಗ್ಗೆ ನಿಮಗೆ ಗೊತ್ತಾ..? ಪ್ರತಿಯೊಬ್ಬ ಗರ್ಭಿಣಿಯರಿಗೂ ಈ ಮಾಹಿತಿ ಅವಶ್ಯಕ..! ತಪ್ಪದೆ ಓದಿ

01 Sep 2018 1:48 PM | General
551 Report

ಈಗಾಗಲೇ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನೆಲ್ಲಾ ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರವು ಗರ್ಭಿಣಿ ಸ್ತ್ರೀಯರಿಗೆ ಅನುಕೂಲವಾಗಲೆಂದು ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಪ್ರಮುಖವಾದದ್ದು ಈ ಪ್ರಸೂತಿ ಕಾರ್ಯಕ್ರಮ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸುವುದೇ ಆಗಿದೆ.  ಗರ್ಭಿಣಿ ಸ್ತ್ರೀಯರಲ್ಲಿನ ರಕ್ತಹೀನತೆಯನ್ನು ತಡೆಗಟ್ಟಿ, ಯಾವುದೇ ತೊಂದರೆ ಆಗದ ರೀತಿಯಲ್ಲಿ ಸುರಕ್ಷಿತವಾಗಿ ಹೆರಿಗೆಯಾಗಿ ತಾಯಿ ಮಗು ಇಬ್ಬರು ಆರೋಗ್ಯವಾಗಿರಲೆಂದು ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.

ಆರು ತಿಂಗಳು ತುಂಬಿದ ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ನೀಡಿ ರಕ್ತ ಹೀನತೆಯನ್ನು ತಡೆಯುವುದಕ್ಕಾಗಿ ಪ್ರತಿ ತಿಂಗಳು 1000 ರೂ ಗಳನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡುತ್ತದೆ. ಈ ಹಣದಲ್ಲಿ ಗರ್ಭಿಣಿ ಸ್ತ್ರೀಯರು ಹಣ್ಣು, ತರಕಾರಿ, ಸೊಪ್ಪು, ಹಾಲು, ಮೊಟ್ಟೆ. ಮೀನಿನಂತಹ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಕೋಂಡು ಅವುಗಳನ್ನು ಸೇವಿಸಲಿ ಎಂಬ ಉದ್ದೇಶದಿಂದ ಆರು ತಿಂಗಳ ನಂತರ ಹೆರಿಗೆ ಆಗುವವರೆವಿಗೂ ಅಂದರೆ 9 ನೇ ತಿಂಗಳ ವರೆವೆಗೂ ಪ್ರತಿ ತಿಂಗಳು 1000 ರೂಗಳನ್ನು ನೀಡುತ್ತಾದೆ ಸರ್ಕಾರ. ಈ ಯೋಜನೆಯ ಮುಖ್ಯ ಉದ್ದೇಶವೇ ತಾಯಿ ಮತ್ತು ಮಗುವಿನ ಸಾವನ್ನು ತಡೆಯುವುದಾಗಿದ್ದು ಹೆರಿಗೆ ಸಮಯದಲ್ಲಿ ಹೆಚ್ಚು ರಕ್ತ ಸ್ರಾವದಿಂದ ಯಾವುದೇ ಸಾವು ಸಂಭವಿಸಬಾರದು, ಹಾಗೂ ಯಾವುದೇ ಕಾರಣಕ್ಕೂ ತಾಯಿ ಮತ್ತು ಮಗು ಅಪೌಷ್ಠಿಕಾಂಶದಿಂದ ಅನಾರೋಗ್ಯಕ್ಕೆ ತುತ್ತಾಗಬಾರದು ಎಂಬ ಉದ್ದೇಶವೂ ಇದರ ಹಿಂದಿದೆ. ಹೆರಿಗೆ ನಂತರ ಕಡೆ ಪಕ್ಷ 6 ತಿಂಗಳಾದರೂ ಕೂಡ ತಾಯಿಯ ಎದೆ ಹಾಲು ಮಗುವಿಗೆ ಬೇಕೇ ಬೇಕು. ತಾಯಿಗೆ ಅಪೌಷ್ಠಿಕತೆ ಕಾಡಿದರೆ ಮಗುವಿಗೆ ಸರಿಯಾಗಿ ಹಾಲು ಸಿಗುವುದಿಲ್ಲ ಆದಕ್ಕಾಗಿಯೇ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸಿಗಬೇಕೆಂದು ಹೆರಿಗೆಯಾದ ನಂತರ 300 ಪ್ರಸೂತಿ ಹಾರೈಕೆ ಮತ್ತು 700 ರೂಗಳನ್ನು ಜನನಿ ಸುರಕ್ಷಾ ಯೋಜನೆಯಡಿ ಒಟ್ಟು 1000 ರೂಗಳನ್ನು ಹೆರಿಗೆಯಾದ ನಂತರವೂ ನೀಡುತ್ತದೆ.

Edited By

Manjula M

Reported By

Manjula M

Comments