ವೋಟರ್ ಐಡಿ ಮಾಡಿಸುವುದು ಈಗ ಮತ್ತಷ್ಟು ಸುಲಭ..! ಹೇಗೆ ಅಂತೀರಾ..? ಇದನ್ನೊಮ್ಮೆ ಓದಿ..

30 Aug 2018 5:57 PM | General
444 Report

ಸಾಮಾನ್ಯವಾಗಿ ಎಲೆಕ್ಷನ್ ಟೈಮ್ ನಲ್ಲಿ ಆತುರ ಆತುರವಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವಾಗ ಏನಾದರೂ ತಪ್ಪು ಆಗಿರುತ್ತದೆ ಅಥವಾ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕಿದ್ದರೆ ನೀವೀಗ ಚುನಾವಣಾ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಈ ಕೆಲಸವನ್ನು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಸುಲಭವಾಗಿ ಮಾಡಬಹುದು… ಹೇಗೆ ಅಂತಾ ಯೋಚನೆ ಮಾಡಿತ್ತಿದ್ದಿರಾ.. ಮುಂದೆ ಓದಿ

ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಲಾಗ್-ಆನ್ ಆಗಿ ಅಲ್ಲಿರುವ ನಿಗದಿತ ಫಾರ್ಮ್‌ನಲ್ಲಿ ವಿವರಗಳನ್ನು ತುಂಬಿ ಹೊಸ ಹೆಸರಿನ ಸೇರ್ಪಡೆಗೆ ಅಥವಾ ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಬೇಕು. ಯಾವಾಗಲೂ ಪ್ರತಿ ಚುನಾವಣೆಗೂ ಮೊದಲೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೊದಲೆ ಮತದಾರರು ಆನ್‌ಲೈನ್ ಅಪ್ಡೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಚುನಾವಣಾ ಆಯೋಗದ ವೆಬ್‌ಸೈಟ್ http://www.nvsp.in ಗೆ ಭೇಟಿ ನೀಡಿ ಹಾಗೂ ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ.  ಅಗತ್ಯವಿರುವ ದಾಖಲೆಗಳು ಈಕೆಳಕಂಡಂತಿವೆ,

  • ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಗುರುತಿನ ಪುರಾವೆ
  • ಜನನ ಪ್ರಮಾಣಪತ್ರ,
  • ಪಾಸ್‌ಪೋರ್ಟ್,
  • ವಾಹನ ಚಾಲನಾ ಪರವಾನಿಗೆ,
  • ಪಾನ್ ಕಾರ್ಡ್
  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
  • ಪಡಿತರ ಚೀಟಿ ಪಾಸ್‌ಪೋರ್ಟ್,ವಾಹನ ಚಾಲನಾ ಪರವಾನಗಿ,ಫೋನ್ ಅಥವಾ ವಿದ್ಯುತ್ ಬಿಲ್

ವೆಬ್‌ಸೈಟ್‌ನಲ್ಲಿರುವ ಅರ್ಜಿ ನಮೂನೆಯಲ್ಲಿ ಎಲ್ಲ ಅಗತ್ಯ ಮಾಹಿತಿಗಳನ್ನು ತುಂಬಿ ಸಲ್ಲಿಸಿದರೆ ಅಪ್ಡೇಷನ್‌ನ ವಿವರಗಳು ಮತ್ತು ಅರ್ಜಿಯ ಐಡಿಯನ್ನೊಳಗೊಂಡ ಇ-ಮೇಲ್ ನಿಮ್ಮ ಮೇಲ್‌ಬಾಕ್ಸ್‌ಗೆ ಬರುತ್ತದೆ. ಅರ್ಜಿಯ ಐಡಿ ಮೂಲಕ ನೀವು ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಒಂದು ತಿಂಗಳ ಅವಧಿಯೊಳಗೆ ನಿಮ್ಮ ವೋಟರ್‌ಐಡಿ ಬಿಡುಗಡೆಯಾಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಕೂಡ ಷೇರ್ ಮಾಡಿ

Edited By

Manjula M

Reported By

Manjula M

Comments