ಅಂಚೆ ಕಚೇರಿಗಳಲ್ಲೂ ಜಾರಿಗೆ ಬರಲಿದೆ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥೆ..!

30 Aug 2018 1:33 PM | General
285 Report

ಭಾರತೀಯ ಅಂಚೆ ಇಲಾಖೆಯಲ್ಲಿ ಸೆಪ್ಟೆಂಬರ್ 1 ರಿಂದ ಹೊಸ ವ್ಯವಸ್ಥೆಯು ಜಾರಿಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿರುವ 1 ಲಕ್ಷದ 55 ಸಾವಿರ ಅಂಚೆ ಕಚೇರಿಗಳು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ವ್ಯವಸ್ಥೆಗೆ ಒಳಪಡಲಿವೆ ಎಂದು ಹೇಳಲಾಗಿದೆ.

ಡಿಸೆಂಬರ್ 31 ರ ಒಳಗೆ ದೇಶದ ಎಲ್ಲಾ ಅಂಚೆ ಕಚೇರಿಗಳು ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ತಮ್ಮ ಅಂಚೆ ಕಚೇರಿಯನ್ನು ಲಿಂಕ್ ಮಾಡಿಸಬೇಕಾಗಿದೆ. ಸೆಪ್ಟೆಂಬರ್ 1ರಂದು 650 ಬ್ರ್ಯಾಂಚ್ ಗಳಲ್ಲಿನ 3250 ಆಕ್ಸಸ್ ಪಾಯಿಂಟ್ ಗಳನ್ನ ಪ್ರಾರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಆಕ್ಸಸ್ ಪಾಯಿಂಟ್ ಗಳ ಸಂಖ್ಯೆಯನ್ನ 1 ಲಕ್ಷ 30 ಸಾವಿರಕ್ಕೆ ಹೆಚ್ಚು ಮಾಡಲು ನಿರ್ಧರಿಸಿದೆ. ಪ್ರಸ್ತುತ ಅಂಚೆ ಕಚೇರಿಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ಈ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Edited By

Manjula M

Reported By

Manjula M

Comments