ಬೆಳಗೆದ್ದ ಕೂಡಲೇ ಏನು ಮಾಡಬೇಕು..? ಏನನ್ನು ಮಾಡಬಾರದು..? ತಿಳಿದುಕೊಳ್ಳಬೇಕಾ..? ಹಾಗಾದ್ರೆ ಇದನ್ನೊಮ್ಮೆ ಓದಿ

29 Aug 2018 6:02 PM | General
589 Report

ಬೆಳಗ್ಗೆ ಎದ್ದ ತಕ್ಷಣ ಕೆಲವನ್ನು ನೋಡಿದರೆ ಕೆಟ್ಟದಾಗುತ್ತದೆ ಹಾಗಾಗಿ ನಮ್ಮ ಹಿರಿಯರು ಬೆಳಗ್ಗೆ ಎದ್ದ ಕೂಡಲೇ ದೇವರ ಫೋಟೋವನ್ನ ಇಲ್ಲವೇ ತಮ್ಮ ಎರಡು ಕೈಗಳ ಅಂಗೈಯನ್ನ ನೋಡುವಂತೆ ಹೇಳುತ್ತಾರೆ. ಇನ್ನು ನಮ್ಮ ಸನಾತನ ಧರ್ಮದಲ್ಲಿ ನಿತ್ಯ ಕರ್ಮಗಳು ಹೇಗಿರಬೇಕು ಯಾವ ಯಾವ ನಿಯಮಗಳನ್ನು ಪಾಲಿಸಬೇಕು ಎಂದು ಈಗಾಗಲೇ ನಮ್ಮ ಪೂರ್ವಜರು ಬರೆದಿದ್ದಾರೆ.  ಹಾಗಾದರೆ ಬೆಳಗ್ಗೆ ಎದ್ದ ಕೂಡಲೇ ನಾವು ಏನನ್ನು ನೋಡಿದರೆ ಓಳ್ಳೆಯದಾಗುತ್ತದೆ ಎಂದು ತಿಳಿದುಕೊಳ್ಳಬೇಕಾ..?

ಬೆಳಗ್ಗೆ ಎದ್ದ ತಕ್ಷಣ ನಾವು ಸೂರ್ಯ, ತೆಂಗಿನ ಮರ, ಬಂಗಾರ, ದೀಪ, ಕಮಲದ ಹೂ, ಹೊಲ, ಸಮುದ್ರ, ಶ್ರೀ ಗಂಧ, ಹಸು, ಕರುವಿನೊಂದಿಗ ಇರುವ ಹಸು ಆದರೆ ಇನ್ನು ಒಳ್ಳೆಯದು, ಬಲಗೈ, ಮೃದಂಗ, ಮೋಡಗಳಿಂದ ಸುತ್ತುವರೆದ ಪರ್ವತ, ಅಚ್ಚ ಹಸಿರಿನ ತಳಿರು ತೋರಣ, ಹಳದಿ ಬಳೆಗಳು, ಮಂಗಳಸೂತ್ರ, ತುಳಸಿ ಗಿಡ, ಹೂವಿನ ಗಿಡಗಳು.ಹೌದು… ಈ ಮೇಲಿನ ವಸ್ತುಗಳನ್ನು ದಿನ ಬೆಳಗ್ಗೆ ಎದ್ದು ನೋಡಿದರೆ ನಿಮಗೆ ಶುಭವಾಗಲಿದೆ. ಹಾಗಾಗಿ ಹಿಂದಿನ ಕಾಲದಲ್ಲಿ ಏನು ಈಗಲು ಹಳ್ಳಿಗಳ ಕಡೆ ನಮ್ಮ ಜನ ಇವುಗಳನ್ನೆ ನೋಡುತ್ತಾರೆ. ಎದ್ದ ತಕ್ಷ ಣ ಹೊರ ಬಂದವರೇ ಸೂರ್ಯನಿಗೆ ನಮಸ್ಕಾರ ಮಾಡಿ ನಂತರ ಹಸು ಗಳಿಗೆ ನಮಸ್ಕರಿಸಿ, ಪ್ರಕೃತಿಗೆ ನಮಸ್ಕರಿಸಿ ತಮ್ಮ ದಿನ ನಿತ್ಯದ ಕೆಲಸಗಳನ್ನು ಪ್ರಾರಂಭಿಸುತ್ತಾರೆ.ಬೆಳಗೆದ್ದ ಕೂಡಲೆ ಕೆಲವು ಕೆಲಸಗಳನ್ನು ಮಾಡಬಾರದು, ಕೆಲವರನ್ನು ನೋಡಿದ ದಿನ, ಕೆಲವು ವಸ್ಥುಗಳನ್ನು ನೋಡಿದ ದಿನ ಕೆಟ್ಟದಾಗಿರುವ ಅನುಭವಗಳು ನಿಮ್ಮ ನಿತ್ಯ ಬದುಕಿನಲ್ಲಿ ನಿಮಗೆ ತಿಳಿದಿರುತ್ತದ್ದೆ.

ಅದಕ್ಕಾಗಿಯೇ ಏನಾದರೈ ಕೆಟ್ಟದ್ದು ಆದರೆ ಆಗ ‘‘ಬೆಳಗೆದ್ದು ಯಾರ ಮುಖ ನೋಡಿದೆ’’ ಎದ್ದ ಕೂಡಲೇ ಯಾರ ಮುಖವನ್ನು ಮೊದಲು ನೋಡಬಾರದು. ಏಕೆಂದರೆ ಅಂದು ಏನಾದರೂ ಕೆಟ್ಟದ್ದು ಆದರೆ ಅದಕ್ಕೆ ಅವರ ಮುಖ ನೋಡಿದ್ದಕ್ಕೆ ಆಯಿತು ಎಂಬ ಭಾವನೆ ನಮ್ಮ ಮನಸಿನಲ್ಲಿ ಉಳಿಯುತ್ತದೆ.ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಬೆಡ್​ ಕಾಫಿ ಕುಡಿಯಬಾರದು, ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಕೆಟ್ಟದ್ದು, ಎದ್ದು ಮುಖ ತೊಳೆದು ನಿತ್ಯ ಕರ್ಮಗಳನ್ನು ಮುಗಿಸಿ ಒಂದು ಲೋಟ ಬಿಸಿ ನೀರನ್ನು ಕುಡಿದ ಮೇಲೆ ಕಾಫಿ, ಟೀ, ಕುಡಿಯುವುದು ಉತ್ತಮ. ಬೆಡ್​ ಕಾಫಿ ಕುಡಿಯುವುದು ದರಿದ್ರವನ್ನು ಆಹ್ವಾನಿಸಿದಂತೆ.ಎದ್ದ ಕೂಡಲೇ ಒಣಗಿದ ಗಿಡ, ಮರಗಳನ್ನು ನೋಡಬಾರದು, ಇತ್ತೀಚಿನ ದಿಗಳಲ್ಲಿ ಮೊಬೈಲ್​ ಬಳಕೆ ಹೆಚ್ಚಾಗಿದ್ದು ಎದ್ದ ಕೂಡಲೇ ಅದರ ಮುಖವನ್ನು ನೋಡುವುದೇ ಹೆಚ್ಚು, ಯಾವುದೇ ಕಾರಣಕ್ಕೂ ವಾಟ್ಸಾಪ್​, ಫೇಸ್​ ಬುಕ್​ಗಳನ್ನ ನೋಡಬಾರದು. ಇಂತಹ ಅಭ್ಯಾಸಗಳಿಂದ ದೂರವಿದ್ದರೆ ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳು ಸಲೀಸಾಗಿ ನಡೆಯುತ್ತವೆ. ನೆಗೆಟಿವ್​ ಎನರ್ಜಿ ಹೋಗಿ ನಮ್ಮಲ್ಲಿ ಪಾಸಿಟಿವ್​ ಎನರ್ಜಿ ಹೆಚ್ಚಾಗ್ಗಿ ಮಾಡುವ ಕೆಲಸಗಳು ಕೈ ಹತ್ತುತ್ತವೆ ಎಂದು ಹಿರಿಯರು ಹೇಳುತ್ತಾರೆ.

Edited By

Manjula M

Reported By

Manjula M

Comments