ಒತ್ತಡ ಕಡಿಮೆ ಮಾಡೋಕೆ ಏನ್ ಮಾಡ್ಬೇಕು ಅಂತ ಯೋಚನೆ ಮಾಡುತ್ತಿದ್ದೀರಾ..?ಹಾಗಾದ್ರೆ ಇದನ್ನೊಮ್ಮೆ ಓದಿ

24 Aug 2018 4:46 PM | General
422 Report

ಸಾಮಾನ್ಯವಾಗಿ ಕೆಲಸ ಹೆಚ್ಚಾದಷ್ಟು ನಮ್ಮ ಬ್ರೈನ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ ಇಂತಹ ಸಂದರ್ಭದಲ್ಲಿ ನಾವು ಏನು ಮಾಡುತ್ತಿದ್ದೇವೆ ಎನ್ನುವುದನ್ನೆ ಮರೆತು ಹೋಗಿರುತ್ತೇವೆ. ಈ ರೀತಿಯ ಕೆಲಸದ ಒತ್ತಡದ ಕಾರಣದಿಂದ ಆಗುವ ಟೆನ್ಷನ್ ಇಂದ ರಿಲೀಫ್ ಆಗುವುದಕ್ಕೆ ಸಂಶೋಧನೆಯೊಂದು ಉತ್ತಮ ಮಾರ್ಗವನ್ನು ಹೇಳಿದೆ.

ಕೆಲಸ ಹೆಚ್ಚಾದ ಕಾರಣ ಟೆನ್ಷನ್, ಮರೆಗುಳಿತನ, ಒತ್ತಡ ಹೆಚ್ಚಾಗಿದ್ದರೆ ಡಾರ್ಕ್ ಚಾಕಲೆಟ್ ಅನ್ನು ಸೇವಿಸಿಸದರೆ ಈ ಒತ್ತಡ, ಉರಿಯೂತಗಳು ಕಡಿಮೆಯಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮನಸ್ಥಿತಿಯನ್ನು ಕೂಡ ಉತ್ತಮಗೊಳಸಿಸುತ್ತದೆ ಎಂದು ಸಂಶೋಧನ ವರದಿಯೊಂದು ಹೇಳಿದೆ. ಈ ಡಾರ್ಕ್ ಚಾಕೋಲೆಟ್ನಲ್ಲಿ ಕೊಕೊ ಬೀಜದ ಪ್ರಮಾಣ ಹೆಚ್ಚಾಗಿ ಇರುವ ಕಾರಣದಿಂದ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತವನ್ನು ತಡೆಯಬಲ್ಲ ಅಂಶಗಳಿದ್ದು ಇವುಗಳು ನಮ್ಮ ಮೆದುಳು ಹಾಗೂ ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಡಾರ್ಕ್ ಚಾಕೋಲೆಟ್ಗಳ ಮೇಲೆ ಕೆಲವು ವರ್ಷಗಳ ಕಾಲ ಸಂಶೋಧನೆ ಮಾಡಿರುವ ತಂಡ ಚಾಕೋಲೆಟ್ನಲ್ಲಿ ಇರುವ ಸಕ್ಕರೆ ಅಂಶ ಕೂಡ ಮನುಷ್ಯನನ್ನು ಸಂತೋಷವಾಗಿ ಇಡುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.ಮನುಷ್ಯನ ಅನುವಂಶಿಯತೆಯ ಮೇಲೆ ಕೂಡ ಈ ಡಾರ್ಕ್ ಚಾಕೋಲೆಟ್ ತನ್ನದೇ ಆದ ಪ್ರಭಾವವನ್ನು ಬೀರಲಿದೆಯಂತೆ. ಇದು ನರಗಳ ಕಾರ್ಯ ಕ್ಷಮತೆ ಮತ್ತು ಸಂವೇದನಾತ್ಮಕ ಗ್ರಹಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸಂಶೋಧನೆ ಹೇಳಿದೆ.ಕೊಕೊ ಅಂಶ ಡಾರ್ಕ್ ಚಾಕೋಲೆಟ್ಗಳಲ್ಲಿ ಇರುವ ಪರಿಣಾಮ ಸಂವೇದನೆ, ನೆನಪಿನಶಕ್ತಿ, ಮನಸ್ಥಿತಿಯ ಮೇಲೆ ಪಾಸಿಟಿವ್ ಪರಿಣಾಮವನ್ನು ಬೀರುತ್ತದೆ ಎಂದು ಪ್ರಯೋಗಗಳಿಂದ ದೃಡಪಟ್ಟಿದೆ ಎಂದು 2018ರಲ್ಲಿ ಅಮೆರಿಕಾದ ಸಾನ್ ಡಿಯಗೊದ ಎಕ್ಸ್ಪೆರಿಮೆಂಟಲ್ ಬಯಾಲಜಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಹಾಗಾದ್ರೆ ಇನ್ನು ಮುಂದೆ ನಿಮ್ಮ ಕೆಲಸದ ಒತ್ತಡದಿಂದ ತುಂಬಾ ಒತ್ತಡಕ್ಕೆ ಸಿಲುಕಿದಾಗ ನೀವು ಒಂದು ಡಾರ್ಕ್ ಚಾಕೋಲೆಟ್ಅನ್ನ ತಿಂದರೆ ಇಮ್ಮ ಮೇಲಿರುವ ಒತ್ತಡವನ್ನು ಸುಲಭವಾಗಿ ನಿವಾರಸಿ ಮನಸ್ಸು ಮತ್ತು ದೇಹ ಆರಾಮವಾಗಿರುವಂತೆ ನೋಡಿಕೊಳ್ಳಬಹುದಾಗಿದೆ.

Edited By

Manjula M

Reported By

Manjula M

Comments