ಟೆಲಿಫೋನ್ ನಿಗಮದಲ್ಲಿ ಹಲವು ಹುದ್ದೆಗಳ ನೇಮಕಾತಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಎಂಟಿಎನ್'ಎಲ್ (ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್) ನ ಮಾನವ ಸಂಪನ್ಮೂಲ, ಮಾರುಕಟ್ಟೆ ಮತ್ತು ಹಣಕಾಸು ವಿಭಾಗಗಳಿಗೆ ಸಹಾಯಕ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ - 38
ಹುದ್ದೆಗಳ ವಿವರ
ಮಾನವ ಸಂಪನ್ಮೂಲ ವಿಭಾಗ (ಹೆಚ್'ಆರ್) - 06
ಮಾರುಕಟ್ಟೆ ವಿಭಾಗ - 15
ಹಣಕಾಸು ವಿಭಾಗ - 17
ವಿದ್ಯಾರ್ಹತೆ : ಮಾನವ ಸಂಪನ್ಮೂಲ ವಿಭಾಗ (ಹೆಚ್'ಆರ್) ಹುದ್ದೆಗೆ ಎಂಬಿಎ / ಎಂಎಸ್'ಡಬ್ಲ್ಯೂ / ಎಂಎ ಮಾರುಕಟ್ಟೆ ವಿಭಾಗ ಹುದ್ದೆಗೆ ಎಂಬಿಎ, ಹಣಕಾಸು ವಿಭಾಗ ಹುದ್ದೆಗೆ ಸಿಎ, ಐಸಿಡಬ್ಲ್ಯೂಎ / ವಾಣಿಜ್ಯ ಪದವಿ ಜೊತೆ ಸಿಎ ಕೋರ್ಸ ಮುಗಿಸಿರಬೇಕು.
ವಯೋಮಿತಿ : ಮಾನವ ಸಂಪನ್ಮೂಲ ವಿಭಾಗ (ಹೆಚ್'ಆರ್) ಮತ್ತು ಮಾರುಕಟ್ಟೆ ವಿಭಾಗ ಹುದ್ದೆಗೆ ಕನಿಷ್ಠ 23 ಗರಿಷ್ಠ 30 ವರ್ಷ, ಹಣಕಾಸು ವಿಭಾಗ ಹುದ್ದೆಗೆ ಕನಿಷ್ಠ 20 ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಪಡಿಸ ಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ಕೊಡಲಾಗಿದೆ
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 1000 ರೂ, ಪ.ಜಾ, ಪ.ಪಂ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 500 ರೂ, ಶುಲ್ಕ ಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-08-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವಬ್ ಸೈಟ್ ವಿಳಾಸ www.mtnl.net.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.
Comments