ನೆರೆ ಪರಿಹಾರ ಕೇಂದ್ರಗಳಿಗೆ ಸೇರಬೇಕಾದ ಆಹಾರ ಸೇರುತ್ತಿರೋದು ಎಲ್ಲಿಗೆ..!?

21 Aug 2018 2:19 PM | General
634 Report

ನೆರೆ ಸಂತ್ರಸ್ತರಿಗಾಗಿ ರಾಜ್ಯದ ಎಲ್ಲ ಕಡೆಗಳಿಂದಲೂ ಕೂಡ ಸಾರ್ವಜನಿಕರು ಕಳುಹಿಸುತ್ತಿರುವ ಆಹಾರ ಪದಾರ್ಥಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೆ ಇದೆ.ಕೆಲ ಸಂಘ ಸಂಸ್ಥೆಗಳು ಹಣವನ್ನು ಸಂಗ್ರಹ ಮಾಡಿ ತಮಗೆ ಬೇಕಾದ ರೀತಿಯಲ್ಲಿ ದುಂದುವೆಚ್ಚಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಕೆಂಗೇರಿಯಿಂದ ನೆರೆ ಸಂತ್ರಸ್ತರ ಸಂಗ್ರಹಕ್ಕಾಗಿ ದವಸ, ಧಾನ್ಯ ಸೇರಿದಂತೆ ಮತ್ತಿತ್ತರ ಆಹಾರಗಳನ್ನು ಕೊಡಗಿಗೆ ತೆಗೆದುಕೊಂಡು  ಹೋಗುತ್ತಿದ್ದಂತಹ  ಲಾರಿಯನ್ನು ಸ್ಥಳೀಯ ಹೋಟೆಲ್ ನ ಸಿಬ್ಬಂದಿಯೊಬ್ಬರು ಯಾಮರಿಸಿ ತಮ್ಮ ಹೋಟೆಲ್ ಗೆ ಹಾಕಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ, ಈ ವಿಷಯದ ಬಗ್ಗೆ ಸ್ಥಳೀಯ ಜಿಲ್ಲಾಡಳಿತ ಸೂಕ್ತ ಕ್ರಮ ಮತ್ತು ಅದರ ಬಗ್ಗೆ ತನಿಖೆ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ..

Edited By

Manjula M

Reported By

Manjula M

Comments