ಕೊಂಕಣಿ ರೈಲ್ವೇ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗಾವಕಾಶ

21 Aug 2018 11:25 AM | General
481 Report

ಕೊಂಕಣ ರೈಲ್ವೆ ಯೋಜನೆಗಳಿಗಾಗಿ ಭೂಮಿ ನೀಡಿದವರಿಗೆ  ಗ್ರೂಪ್‌ ಡಿ ಹುದ್ದೆಗೆ ನಿಗಮ ನೇಮಕಾತಿಯನ್ನು ನಡೆಸಲಿದೆ. ಈ ಪರೀಕ್ಷೆಯನ್ನು ಕನ್ನಡ, ಕೊಂಕಣಿ ಸೇರಿ 3 ಭಾಷೆಗಳಲ್ಲಿ ಬರೆಯಲು ಈಗಾಗಲೇ ಅನುಮತಿ ದೊರೆತಿದೆ.

ಟ್ರಾಕ್‌ ಮ್ಯಾನ್‌, ಅಸಿಸ್ಟೆಂಟ್‌ ಪಾಯಿಂಟ್ಸ್‌ ಮ್ಯಾನ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೊಂಕಣ ರೈಲ್ವೆ ಯೋಜನೆಗಳಿಗೆ ಭೂಮಿ ನೀಡಿದಂತಹವರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು.  ವಯಸ್ಸು 18ರಿಂದ 33ರ ಒಳಗೆ ಇರಬೇಕು. ರೋಹಾ(ಮಹಾರಾಷ್ಟ್ರ)ದಿಂದ ತೋಕುರ್‌(ಕರ್ನಾಟಕ) ನಡುವಿನ ಕೊಂಕಣ ರೈಲು ಮಾರ್ಗಕ್ಕಾಗಿ ನಿಗಮಕ್ಕೆ ಭೂಮಿಯನ್ನು ನೀಡಿರಬೇಕು. ಭೂಮಿ ಮಾಲೀಕನ ಪತ್ನಿ, ಮಗ, ಮದುವೆಯಾಗದ ಮಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Edited By

Manjula M

Reported By

Manjula M

Comments