1616 ಸಿರಿಂಜ್ ಬಳಸಿ ಹುಟ್ಟಿದ 'ಮಿರಾಕಲ್ ಬೇಬಿ'..! ಹೇಗಿದೆ ಆ ಬೇಬಿ ನೀವೆ ನೋಡಿ

18 Aug 2018 5:15 PM | General
346 Report

ಈ ಮಗುವಿನ ಜನ್ಮ ರಹಸ್ಯದ  ಹಿಂದಿನ ಕಥೆಯನ್ನು ಹೇಳುವಾಗ ಕೇಳುಗರ ಮನ ಗೆದ್ದಿದ್ದಾರೆ ಈ ದಂಪತಿ. ಮಗುವಿನ ಹುಟ್ಟಿಗೆ ಇಷ್ಟು ಸಿರಿಂಜ್ ಹೇಗೆ ಕಾರಣವೆಂಬುದನ್ನೂ ವಿವರಿಸಿದ್ದು, ಎಂಥವರ ಕಣ್ಣಲ್ಲೂ ಕೂಡ ಕಂಬನಿ ಬರುವಂತೆ ಮಾಡಿ ಬಿಟ್ಟಿದೆ.

4 ವರ್ಷಗಳ ಪ್ರಯತ್ನಕ್ಕೆ ಬದುಕಿರುವವರೆಗೂ ಸಂತೋಷ ಪಡುವಂಥ ಸಂತಸದಲ್ಲಿದ್ದಾರೆ ಈ ದಂಪತಿಗಳು. 4 ವರ್ಷಗಳಲ್ಲಿ 3 ಬಾರಿ ಗರ್ಭಪಾತವಾಗಿದೆ ಈ ಮಗುವಿನ ತಾಯಿಗೆ. ಆನಂತರ 1616 ಸಿರಿಂಜ್ ಬಳಸಿದ ನಂತರ ಈ ಸುಂದರ ಮಗು ಈ ಜಗತ್ತನ್ನು ನೋಡುವಂತಾಗಿದೆ. 'ವಿಟ್ರೊ ಫರ್ಟೆಲೈಸೇಷನ್' (ಐವಿಫ್) ಹಾಗೂ'ಐಯುಐ' ಚಿಕಿತ್ಸೆ ಮೂಲಕ ಈ ದಂಪತಿಗೆ  ಮುದ್ದಾದ ಮಗು ಜನಿಸಿದೆ , ಆ ಸಮಯದಲ್ಲಿ ಬಳಸಿದ ಸಿರಿಂಜ್‌ಗಳನ್ನು ಮಗುವಿನ ಸುತ್ತ ಹೃದಯ ಆಕಾರದಲ್ಲಿ ಜೋಡಿಸಿ ಫೋಟೋ ತೆಗೆದು ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದೆ.

Edited By

Manjula M

Reported By

Manjula M

Comments