ಅಟಲ್‌ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ ; ಸ್ಮೃತಿ ಸ್ಥಳದಲ್ಲಿ ವ್ಯಾಪಕ ಬಿಗಿ ಭದ್ರತೆ..! ಇಲ್ಲಿದೆ ವಿಡೀಯೊ

17 Aug 2018 4:44 PM | General
295 Report

ದೇಶ ಕಂಡ ಅತ್ಯದ್ಬುತ ರಾಜಕಾರಣಿ, ಮಾಜಿ ಪ್ರಧಾನಿ , ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಅಂತ್ಯಕ್ರಿಯೆ ನಡೆಯುವ ಸ್ಮೃತಿ ಸ್ಥಳದಲ್ಲಿ ಲಕ್ಷಾಂತರ ಜನರು, ಜಾತಿ ಮತ, ಧರ್ಮ, ಪಕ್ಷ ಭೇದ ಮರೆತು ಅಗಲಿದ ಮಹಾನ್‌ ಚೇತತನನಿಗೆ ಗೌರವವನ್ನು ಅರ್ಪಿಸುತ್ತಿದ್ದಾರೆ.

ವಾಜುಪೇಯಿಯವರ ಪಾರ್ಥೀವ ಶರೀರದ ಮೆರವಣಿಗೆ ಸಮಯದಲ್ಲಿ ರಸ್ತೆಯ ಇಕ್ಕೆಲದಲ್ಲಿ ನಿಂತಿರುವ ಸಾವಿರಾರು ಮಂದಿ ಅಂತಿಮ ನಮನವನ್ನು ಸಲ್ಲಿಸಿದರು.  ಅಂತಿಮ ಕ್ರಿಯೆ ನಡೆಯುವ ಸ್ಥಳದಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು , ಸೇನಾಪಡೆಗಳ ತುಕಡಿಗಳು, 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಂತ್ಯಕ್ರಿಯೆ ವೇಳೆ ಪಾಕ್‌ ಸಚಿವ, ಭೂತಾನ್‌ ದೊರೆ ಸೇರಿ ನೆರೆ ರಾಷ್ಟ್ರಗಳ ಗಣ್ಯರೂ ಉಪಸ್ಥಿತರಿದ್ದು ಅಂತಿಮ ನಮನ ಸಲ್ಲಿಸಲಿದ್ದಾರೆ.

Edited By

Manjula M

Reported By

Manjula M

Comments