ತಲೆದಿಂಬು ಹಾಕಿಕೊಳ್ಳದೆ ಮಲಗಿದರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ..!?

17 Aug 2018 2:19 PM | General
395 Report

ಸಾಮಾನ್ಯವಾಗಿ ಬೆಳಿಗ್ಗೆಯಿಂದ ಕೆಲಸ ಮಾಡಿ ಸುಸ್ತಾಗಿರುತ್ತೇವೆ... ನಿದ್ದೆ ಮಾಡಿದಾಗ ಮಾತ್ರ ನಮಗೆ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಅನಿಸುತ್ತದೆ. ಯಾಕಂದ್ರೆ ನಿದ್ದೆ ಮಾಡುವುದು ನಮ್ಮ ದೇಹಕ್ಕೆ ತುಂಬಾನೇ ಅಗತ್ಯ.

ಯಾಕಂದ್ರೆ ದಣಿದ ದೇಹಕ್ಕೆ ನಿದ್ದೆ ತುಂಬಾ ಅವಶ್ಯಕ… ಆದರೆ ತಲೆದಿಂಬು ಇದ್ರೆ ಕೆಲವರಿಗೆ ನಿದ್ದೆ ಬರೋದು ಅಂತ ಹೇಳ್ತಾರೆ. ಆದರೆ ಇನ್ನೂ ಕೆಲವರಿಗೆ ತಲೆದಿಂಬು ಇದ್ರೆ ನಿದ್ದೆ ಬರಲ್ಲ  ಅಂತ ಹೇಳ್ತಾರೆ ಹೌದು ತಲೆದಿಂಬು ಇಲ್ಲದೆ ಕೆಲವರು ನಿದ್ದೆ ಮಾಡುತ್ತಾರೆ. ಅದರಿಂದ ಸಾಕಷ್ಟು ರೀತಿಯ ಪ್ರಯೋಜನಗಳು ಆಗುತ್ತವೆ. ಆ ಪ್ರಯೋಜನಗಳು ಯಾವುವು ಅನ್ನೋದನ್ನ ಅಂತ ತಿಳಿದುಕೊಳ್ಳಿ..ಹೌದು.. ಹೀಗೆ ಮಾಡುವುದರಿಂದ ಸೊಂಟ ನೋವು ಮತ್ತು ಬೆನ್ನು ನೋವು ನಿವಾರಣೆಯಾಗುತ್ತದೆ. ನೆಲ ಸಮತಟ್ಟಾಗಿ ಇರುವುದರಿಂದ ತಲೆದಿಂಬು ಇಲ್ಲದೆ ಮಲಗಿದರೆ ವಿಶ್ರಾಂತಿ ಸಿಗುತ್ತದೆ. ಮತ್ತು ಆಯಾಸವು ಕಡಿಮೆಯಾಗುತ್ತದೆ. ತಲೆದಿಂಬು ಇಲ್ಲದೆ ಮಲಗಿದರೆ ಒಳ್ಳೆಯ ನಿದ್ರೆ ಬರುತ್ತದೆ.ಅಷ್ಟೆ ಅಲ್ಲದೆ ಜ್ಞಾಪಕಶಕ್ತಿಯು ಕೂಡ ಹೆಚ್ಚಾಗುತ್ತದೆ. ಇನ್ನು ಮೇಲೆ ನೀವು ಕೂಡ ಈ ಪ್ರಯೋಜನಗಳನ್ನ ಪಡೆಯಿರಿ

Edited By

Manjula M

Reported By

Manjula M

Comments