ಭಾರೀ ಮಳೆ ಹಿನ್ನಲೆ: ಪೊಲೀಸ್ ಪೇದೆ ನೇಮಕಾತಿ ಲಿಖಿತ ಪರೀಕ್ಷೆ ಮುಂದೂಡಿಕೆ

17 Aug 2018 12:17 PM | General
951 Report

ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಆ. 19 ರಂದು ಲಿಖಿತ ಪರೀಕ್ಷೆಯನ್ನು ನಿಗದಿ ಪಡಿಸಿಲಾಗಿತ್ತು.  ಭಾರಿ ಮಳೆ ಬಂದ ಕಾರಣಕ್ಕೆ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು  ಪೊಲೀಸ್ ಇಲಾಖೆ ಆದೇಶಿಸಿದೆ.

2,113 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಜೂ. 26 ರಂದು ಅರ್ಜಿಯನ್ನು ಆಹ್ವಾನಿಸಲಾಗಿತ್ತು. ರಾಜ್ಯದ 46 ಪರೀಕ್ಷಾ ಕೇಂದ್ರಗಳಲ್ಲಿ 35,740 ಅಭ್ಯರ್ಥಿಗಳು ಇದೇ ಭಾನುವಾರ ಪರೀಕ್ಷೆ ಬರೆಯಬೇಕಿತ್ತು. ರಾಜ್ಯದ ವಿವಿಧೆಡೆ ಭಾರಿ ಮಳೆ ಬರುತ್ತಿದ್ದು ಪ್ರವಾಹ ಹಿನ್ನೆಲೆಯಲ್ಲಿ  ಪರೀಕ್ಷೆಯನ್ನು ಮುಂದೂಡಲಾಗಿದೆ. ಮುಂದಿನ ಪರೀಕ್ಷೆ ದಿನಾಂಕವನ್ನು ತಿಳಿಸಲಾಗುವುದು ಎಂದು ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿ ರಾಘವೇಂದ್ರ ಔರಾದ್ಕರ್ ಮಾಹಿತಿಯನ್ನು ನೀಡಿದ್ದಾರೆ.

Edited By

Manjula M

Reported By

Manjula M

Comments