ರಾಜಕಾರಣದ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿ ವಾಜಪೇಯಿ:ಎಚ್ ಡಿಡಿ

17 Aug 2018 11:54 AM | General
1146 Report

ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಾಜಪೇಯಿಯವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. ಅಟಲ್ ಬಿಹಾರ್ ವಾಜಪೇಯಿಯವರು ರಾಜಕಾರಣದ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿಯೆಂದು ಕೊಂಡಾಡಿದ್ದಾರೆ. 4 ದಶಕಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಹೊಂದಿ ಇಂದು ತಮ್ಮ ಪಯಣವನ್ನು ಮುಕ್ತಗೊಳಿಸಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು  ಹಳೆಯ ನೆನಪನ್ನು ನೆನೆದು ಅವರೊಬ್ಬ ಶ್ರೇಷ್ಠ ನಾಯಕರು. ಅವರ ಭಾಷಣ ಕೇಳಲು ವಿರೋಧ ಪಕ್ಷದಲ್ಲಿದ್ದ ನಾನು ಸ್ವತಃ ತೆರಳುತ್ತಿದ್ದೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ.ನಾನು ಪ್ರಧಾನಿಯಾಗಿದ್ದಾಗ ಲೋಕಸಭಾ ಕಾರ್ಯಕಲಾಪಕ್ಕೆ ಎಂದಿಗೂ ಅಡ್ಡಿಪಡಿಸಿರಲಿಲ್ಲ. ದೇಶದ ವಿಷಯ ಬಂದಾಗ ಪಕ್ಷವನ್ನು ನೋಡದೆ ಮೊದಲು ದೇಶ ನಂತರ ಪಕ್ಷ ಎಂದು ಎಳುತ್ತಿದ್ದವರು,  ಯುದ್ಧ ಸಾಮಗ್ರಿ ಖರೀದಿ ವೇಳೇ ನನ್ನ ಸರ್ಕಾರದ ಪರ ನಿಂತಿದ್ದರು.  ಅಲ್ಲದೇ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಸಂಬಂಧ ಉತ್ತಮ ಪಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು ಆದರೆ ಅವರ ಎಲ್ಲ ಪ್ರಯತ್ನವು ವಿಫಲವಾದವು. ಪಾಕಿಸ್ತಾನ ತನ್ನ ಕುತಂತ್ರದಿಂದ ಯುದ್ಧ ಮಾಡಿತು. ಆದರೆ ನಮ್ಮ ಶಕ್ತಿ ಏನೆಂದು ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ತೋರಿಸಿ ಕೊಟ್ಟಂತಹ ಮಹಾನ್ ವಕ್ತಿ, ಅಲ್ಲದೇ ನಾನು ರಾಜೀನಾಮೆ ಕೊಡುವ ಸಮಯ ಬಂದಾಗ, ನೀವು ನಿಶ್ಚಂತೆಯಿಂದಿರಿ ನಾನು ನಿಮ್ಮ ಸ್ಥಾನವನ್ನು ಉಳಿಸಿಕೊಡುತ್ತೇನೆಂದು ಪಕ್ಷದ ಮುಖಂಡರ ಮನವೊಲಿಸಿದ.

ಅಟಲ್ ಬಿಹಾರಿ ವಾಜಪೇಯಿಯವರ ಕೊಡುಗೆ ದೇಶಕ್ಕೆ ಅಪಾರ, ಅವರು ಜಾತಿ, ಧರ್ಮ ಎನ್ನದೇ ಕೇವಲ ಭಾರತೀಯರ ಅಭಿವೃದ್ಧಿಗೆ ಶ್ರಮಿಸಿದ್ದರು. ಯಾರ ಮನಸ್ಸನ್ನು ನೋಯಿಸಬಾರದು ಅನ್ನುವುದು ಅವರ ಆಶಾವಾದವಾಗಿತ್ತು. ನನ್ನ ಸರ್ಕಾರವನ್ನು ಉಳಿಸಲು ಕೊನೆ ಕ್ಷಣದವರೆಗೂ ಪ್ರಯತ್ನ ಪಟ್ಟವರು ಅಟಲ್ ಜೀ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ಅಗಲಿಕೆ ತುಂಬುವ ಶಕ್ತಿ ನೀಡಲಿ, ನಾನು ಸಹ ದೆಹಲಿಗೆ ಪ್ರಯಾಣ ಬೆಳೆಸಿ, ಅವರ ಅಂತಿಮ ದರ್ಶನ ಮಾಡಿಕೊಳ್ಳುತ್ತೇನೆಂದು ಹೇಳಿದರು.

Edited By

venki swamy

Reported By

venki swamy

Comments