ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನಲೆ: 270 ಕ್ಕೂ ಅಧಿಕ ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ಪ್ರಧಾನ

16 Aug 2018 10:50 AM | General
416 Report

ಬಹಳ ದಿನಗಳಿಂದ ನಾಡ ಪ್ರಭು ಕೆಂಪೇಗೌಡ ದಿನಾಚರಣೆಯನ್ನುಆಚರಿಸಬೇಕೆಂದು ಅಂದುಕೊಂಡಿದ್ದರು. ಆದರೆ ನಾನಾ ಕಾರಣಗಳಿಂದ ಮುಂದೂಡಲಾಗುತ್ತಿತ್ತು. ಆದರೆ  ಇಂದು ರಾಜ್ಯದಲ್ಲೆಡೆ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ  ಸೇವೆ ಸಲ್ಲಿಸಿದ 270 ಕ್ಕೂ ಅಧಿಕ ಗಣ್ಯರಿಗೆ ಬಿಬಿಎಂಪಿ ವತಿಯಿಂದ ಕೆಂಪೇಗೌಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಬಿಬಿಎಂಪಿ ಕಚೇರಿಯಲ್ಲಿ ನಡೆಯುವ ಕೆಂಪೇಗೌಡ ಜಯಂತಿಯ ಹಿನ್ನೆಲೆಯಲ್ಲಿ ಇಂದು ಸಂಜೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕೆಂಪೇಗೌಡ ಪ್ರಶಸ್ತಿಗಳನ್ನು ಹಲವು ಗಣ್ಯರಿಗೆ ಪ್ರದಾನ ಮಾಡಲಿದ್ದಾರೆ. ಮಧ್ಯಾಹ್ನ ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಉತ್ತಮ ಅಧಿಕಾರಿ ಮತ್ತಿತರ ನೌಕರರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕೃಷಿ ತಜ್ಞ ಮಹದೇವಪ್ಪ, ಚಿತ್ರ ನಟರಾದ ದರ್ಶನ್, ಸುದೀಪ್, ರಮೇಶ್ ಅರವಿಂದ್, ಸೃಜನ್ ಲೋಕೇಶ್, ನಿರ್ದೇಶಕರಾದ ಟಿ.ಎನ್ ಸೀತಾರಾಂ. ಬಿ. ಸುರೇಶ್, ವಿಮರ್ಶಕಿ ಎಂ.ಎಸ್. ಆಶಾದೇವಿ, ನಿರೂಪಕಿ ಅನುಶ್ರೀ ಸೇರಿದಂತೆ, ಧಾರ್ಮಿಕ , ಮಾಧ್ಯಮ,ಚಲನಚಿತ್ರ, ಕ್ರೀಡೆ, ಸಾಹಿತ್ಯ, ಶಿಕ್ಷಣ, ರಂಗಭೂಮಿ, ಸಂಗೀತ, ಯೋಗ ಮುಂತಾದ ಕ್ಷೇತ್ರಗಳ ಸುಮಾರು 270 ಕ್ಕೂ ಹೆಚ್ಚು ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿಯನ್ನು ಸಿಎಂ ಕುಮಾರಸ್ವಾಮಿಯವರು ವಿತರಿಸಲಿದ್ದಾರೆ.

Edited By

Manjula M

Reported By

Manjula M

Comments