ನೀವು ಪ್ರತಿನಿತ್ಯ ಕುಡಿಯುತ್ತಿರುವ ಹಾಲಿನಲ್ಲಿ ಸೇರುತ್ತಿದೆ ವಿಷ..!?

16 Aug 2018 10:32 AM | General
411 Report

ಹಾಲು ಅಮೃತಕ್ಕೆ ಸಮಾನ ಅಂತಾರೆ.. ಆದರೆ ಈಗ ಅದೇ ಹಾಲು ವಿಷವಾಗಿ ಪರಿಣಮಿಸುತ್ತಿದೆ. ಹಾಸನ ಹಾಲು ಒಕ್ಕೂಟಕ್ಕೆ ರಾಸಾಯನಿಕ ಮಿಶ್ರಿತವಾದ ಹಾಲು ಪೂರೈಕೆ ಮಾಡಿದ ಹಿನ್ನಲೆಯಲ್ಲಿ ಮೂವರನ್ನು ಅಮಾನತು ಮಾಡಲಾಗಿದೆ ಎಂದು ಕೆಎಂಎಫ್’ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದದಂತಹ ಸಭೆಯಲ್ಲಿ ಹಾಲಿಗೆ ರಾಸಾಯನಿಕ ಮಿಶ್ರಣ ಮಾಡಿ ಪೂರೈಸುತ್ತಿದ್ದ ಪ್ರಕರಣವನ್ನು ಶಾಸಕರಾದ ಸಿ.ಟಿ.ರವಿ ಪ್ರಸ್ತಾಪಿಸಿದಾಗ, ಕೆಎಂಎಫ್ ಎಂಡಿ ಸಭೆಗೆ ಈ ಮಾಹಿತಿ ನೀಡಿದರು. ಹಲವರ ವಿರುದ್ಧ ಇದೀಗ ಕೇಸು ದಾಖಲಾಗಿದೆ. ಇನ್ನೂ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments