ಇಂದು ಮಹದಾಯಿ ಅಂತಿಮ ತೀರ್ಪು..! ಕರ್ನಾಟಕಕ್ಕೆ ಗುಡ್ ನ್ಯೂಸ್..?

14 Aug 2018 3:48 PM | General
753 Report

ಮಹದಾಯಿ ಅಂತಿಮ ತೀರ್ಪು ಇಂದು ಸಂಜೆ  ಪ್ರಕಟವಾಗಿದೆ.. ಕೋಟ್ಯಾಂತರ ಕನ್ನಡಿಗರ ಮನಸ್ಸು ಇದೀಗ ಸುಪ್ರಿಂಕೋರ್ಟ್ ನತ್ತವೇ ಇತ್ತು. ಅಂದುಕೊಂಡಂತೆ ಕರ್ನಾಟಕಕ್ಕೆ ಸಿಹಿ ಸುದ್ದಿ ಸಿಕ್ಕಿದೆ.

ಇನ್ನು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಗೆ ನ್ಯಾಯಪೀಠ ಈ ತೀರ್ಪಿನ ಪ್ರತಿಯನ್ನು ನೀಡುವುದು ಎನ್ನಲಾಗಿದ್ದು, ರಾಜ್ಯದ 4 ಜಿಲ್ಲೆ 11 ತಾಲೂಕುಗಳ ಭವಿಷ್ಯವನ್ನು ನ್ಯಾ.ಜೆ.ಎಸ್.ಪಾಂಚಾಲ್ ನೇತೃತ್ವದ ನ್ಯಾಯಮಂಡಳಿಯು ನಿರ್ಧಾರ ಮಾಡಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಇಂದು ಸಂಜೆ ತೀರ್ಪು ಬಂದಿದೆ. ಪ್ರತಿಯನ್ನು ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಳುಹಿಸಿ ಕೊಡಲಿದೆ ಎಂದು ಹೇಳಲಾಗುತ್ತಿದೆ.ರಾಜ್ಯಕ್ಕೆ ಒಟ್ಟು 13.5 ಟಿಎಂಸಿ ನೀರನ್ನು ಮಹದಾಯಿ ನದಿ ನೀರು ಹಂಚಿಕೆಯನ್ನು ನ್ಯಾಯಾಧಿಕರಣ ಮಾಡಿದೆ. ಇದರ ಪೈಕಿ ಮಲಪ್ರಭಾ ಡ್ಯಾಂಗೆ 4 ಟಿಎಂಸಿ. ಜಲವಿದ್ಯುತ್ ಉತ್ಪಾದನೆಗೆ 8.02 ಟಿಎಂಸಿ ಹಂಚಿಕೆ ಮಾಡಲಾಗಿದ್ದು, ಮಹಾದಾಯಿ ವ್ಯಾಪ್ತಿಯಲ್ಲಿ 1.5 ಟಿಎಂಸಿಯಷ್ಟು ಬಳಕೆ ಮಾಡಲು ಅವಕಾಶ ನೀಡಿದೆ. ಇದಲ್ಲದೇ ಮಹದಾಯಿ ಜಲವಿದ್ಯುತ್ ಯೋಜನೆಗೆ ಒಪ್ಪಿಗೆಯನ್ನು ನೀಡಿದೆ. ಮಹದಾಯಿ ವಿವಾದವನ್ನು ಕಳೆದ ಐದು ವರ್ಷದಲ್ಲಿ 105 ದಿನಗಳು ಒಟ್ಟು ವಿಚಾರಣೆ ನಡೆದಿದ್ದು, ಹನ್ನೊಂದು ದಿನಗಳ ಕಾಲ ಅಂತಿಮ ವಿಚಾರಣೆ ನಡೆಸಲಾಗಿದೆ. ಕರ್ನಾಟಕ ಪರ ವಕೀಲ ಅಶೋಕ್ ದೇಸಾಯಿ, ಮೋಹನ್ ಕಾತರಕಿ, ಇಂದಿರಾ ಜೈಸಿಂಗ್ ಹಾಗೂ ಗೋವಾ ಪರ ಆತ್ಮರಾಮ್ ನಾಡಕರ್ಣಿ ವಾದವನ್ನು ಮಂಡಿಸಿದ್ದರು.

Edited By

Manjula M

Reported By

Manjula M

Comments