ರೈತರಿಗೆ ಗುಡ್ ನ್ಯೂಸ್: ಮುಂದಿನ ಗುರುವಾರ ರಾಷ್ಟೀಕೃತ ಬ್ಯಾಂಕ್ ಸಾಲಮನ್ನಾ:- ಸಿಎಂ ಕುಮಾರಸ್ವಾಮಿ

13 Aug 2018 4:14 PM | General
309 Report

ರೈತರ ಸಾಲಮನ್ನಾ ವಿಷಯವಾಗಿ ಸಾಕಷ್ಟು ಊಹಾ ಪೋಹಗಳು ಎದ್ದಿದ್ದವು.. ಇದರ ಬೆನ್ನಲ್ಲೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು  ಸಾಲಮನ್ನಾವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಮುಂದಿನ ಗುರುವಾರ ರಾಷ್ಟೀಕೃತ ಬ್ಯಾಂಕ್ ಗಳ ಸಾಲಮನ್ನಾ ಎಂದು ಘೋಷಣೆ ಮಾಡಲಾಗುವುದು ಅಂತ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಈಗಾಗಲೇ ಕೆಲ ರಾಷ್ಟೀಕೃತ ಬ್ಯಾಂಕ್ ಗಳು ಒಪ್ಪಿಕೊಂಡಿವೆ ಈ ಬಗ್ಗೆ ಸಾಧಕ-ಭಾದಕಗಳನ್ನು ಚರ್ಚೆ ಮಾಡಿ ಗುರುವಾರದಂದು ಈ ಬಗ್ಗೆ ಮಾಹಿತಿ ನೀಡಲಾಗುವುದು ಅಂತ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದರು.

Edited By

Manjula M

Reported By

Manjula M

Comments