ಧಾರವಾಡ ಕೃಷಿ ವಿವಿಯಲ್ಲಿ ಉದ್ಯೋಗಾವಕಾಶ,ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..

13 Aug 2018 2:55 PM | General
476 Report

ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯವು  ಅರ್ಜಿಯನ್ನು ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ - 07 
ಹುದ್ದೆಗಳ ವಿವರ 

ಫಾರ್ಮ್ ಮ್ಯಾನೇಜರ್
ಪ್ರೋಗ್ರಾಂ ಅಸಿಸ್ಟೆಂಟ್ (ಕಂಪ್ಯೂಟರ್)
ಪ್ರೋಗ್ರಾಂ ಅಸಿಸ್ಟೆಂಟ್ (ಲ್ಯಾಬ್ ಟೆಕ್)

ಅಸಿಸ್ಟೆಂಟ್
ಬೆರಳಚ್ಚುಗಾರ
ಚಾಲಕ

ವಿದ್ಯಾಭ್ಯಾಸ : ಫಾರ್ಮ್ ಮ್ಯಾನೇಜರ್ ಹುದ್ದೆಗೆ ಕೃಷಿ ಅಥವಾ ತೋಟಗಾರಿಕೆ ವಿಷಯದಲ್ಲಿ ಪದವಿ, ಪ್ರೋಗ್ರಾಂ ಅಸಿಸ್ಟೆಂಟ್ (ಕಂಪ್ಯೂಟರ್) ಹುದ್ದೆಗೆ ಬಿಎಸ್ಸಿ (ಸಿಎಸ್), ಬಿಸಿಎ, ಬಿಎಸ್ಸಿ ಜೊತೆ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್, ಪ್ರೋಗ್ರಾಂ ಅಸಿಸ್ಟೆಂಟ್ (ಲ್ಯಾಬ್ ಟೆಕ್) ಹುದ್ದೆಗೆ ಕೃಷಿ ಅಥವಾ ತೋಟಗಾರಿಕೆ ವಿಷಯದಲ್ಲಿ ಪದವಿ, ಅಸಿಸ್ಟೆಂಟ್ ಹುದ್ದೆಗೆ ಪದವಿ, ಬೆರಳಚ್ಚುಗಾರ ಹುದ್ದೆಗೆ ಪದವಿ, ಚಾಲಕ ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತಿರ್ಣವಾಗಿರಬೇಕು. 
ಸಂದರ್ಶನ ದಿನಾಂಕ : 28-08-2018 ರಂದು ಬೆಳಿಗ್ಗೆ 11 ಗಂಟೆಗೆ ಸಂದರ್ಶನ ಆರಂಭವಾಗಲಿದೆ.
ಸಂದರ್ಶನ ನಡೆಯುವ ಸ್ಥಳ : ವಿಸ್ತರಣಾ ನಿರ್ದೇಶನಾಲಯ, ಕೃಷಿ ಮಹಾವಿದ್ಯಾಲಯ, ಧಾರವಾಡ – 580005. ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ವಿಳಾಸ www.uasd.edu ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.

Edited By

Manjula M

Reported By

Manjula M

Comments