ನಮ್ಮ ರಾಷ್ಟ್ರ ಧ್ವಜ ತಯಾರಾಗುವುದು ಹೇಗೆ ಎಂಬುದನ್ನು ನೋಡಿ..!

13 Aug 2018 12:04 PM | General
2540 Report

ನಮ್ಮ ದೇಶ ಭಾರತ…ಭಾರತ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಪ್ರಜೆಯು ಕೂಡ ಪುಣ್ಯವಂತರು. ನಮ್ಮ ರಾಷ್ಟ್ರ ಧ್ವಜ ನಮ್ಮ ಹೆಮ್ಮೆ. ಕೇಸರಿ ಬಿಳಿ ಹಸಿರು ಬಣ್ಣ ಹಾಗೆಯೇ ಅದರ ಮಧ್ಯದಲ್ಲಿರುವ ಅಶೋಕ ಚಕ್ರ ಎಲ್ಲವೂ ಕೂಡ ಪ್ರತಿಯೊಬ್ಬರಲ್ಲೂ ದೇಶ ಪ್ರೇಮ, ಗೌರವ ಬರುವಂತೆ ಮಾಡುತ್ತದೆ..

ರಾಷ್ಟ್ರಧ್ವಜ ತಯಾರಿಸುವ ಹಕ್ಕನ್ನು ಭಾರತ ಸರ್ಕಾರ ಕೇವಲ ಒಂದು ಸಂಸ್ಥೆಗೆ ಮಾತ್ರ ನೀಡಿದೆ. ಆ ಹಕ್ಕನ್ನು ಕರ್ನಾಟಕದ ಗರಗ ಗ್ರಾಮ ಪಡೆದಿದೆ. ರಾಷ್ಟ್ರ ಧ್ವಜವನ್ನು ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು ೫೨ ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿಕೊಂಡಿವೆ.. ಖಾದಿ ಅಭಿವೃದ್ದಿ ಹಾಗೂ ಗ್ರಾಮೋದ್ಯೋಗ ಆಯೋಗ ಸಂಸ್ಥೆಯು ಈ ಅಧಿಕೃತ ಸಂಸ್ಥೆಯಾಗಿದ್ದು ಸ್ಥಳೀಯವಾಗಿ ಧ್ವಜ ತಯಾರಿಸುವ ಅನುಮತಿಯನ್ನು ಇತರ ಸಂಸ್ಥೆಗಳಿಗೆ ನೀಡುವ ಅಧಿಕಾರವನ್ನು ಕೂಡ ಈ ಆಯೋಗವು ಹೊಂದಿದೆ.. ಕರಗ ಗ್ರಾಮಕ್ಕೆ ರಾಷ್ಟ್ರಧ್ವಜ ತಯಾರಿಸುವ ಪರವಾನಗಿ ಸಿಕ್ಕಿತು. ಕೈಮಗ್ಗದಲ್ಲಿ ತಯಾರಿಸಿದಂತ ದೇಶದ ಏಕೈಕ ತಾಣ ಧಾರವಾಡ ಜಿಲ್ಲೆಯ ಗರಗ ಗ್ರಾಮವಾಗಿದೆ. ಅಷ್ಟಕ್ಕೂ ಈ ಗ್ರಾಮ ನಮ್ಮ ರಾಜ್ಯದಲ್ಲಿಯೇ ಇದೆ ಎಂಬುದು ಹೆಮ್ಮೆಯ ವಿಷಯ.

Edited By

Manjula M

Reported By

Manjula M

Comments