ಹೆಣ್ಣು ಮಕ್ಕಳಿರುವ ಮನೆಗೆ ಸಿಗ್ತಿದೆ 10,000 ರೂ ಚೆಕ್…!? ಇಂತದೊಂದು ಸುದ್ದಿ..!

10 Aug 2018 5:55 PM | General
5269 Report

ಈಗಾಗಲೇ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.. ಇದೀಗ ಆ ಯೋಜನೆಗಳಿಗೆ ಹೊಸದೊಂದು ಯೋಜನೆ ಸೇರಿಕೊಳ್ಳುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಹೆಣ್ಣುಮಕ್ಕಳ ಜೀವನ ಸುಧಾರಣೆ ಯೋಜನೆ-2018 ಅನ್ನು ಜಾರಿಗೊಳಿಸಿದ್ದಾರೆ. 1-18 ವರ್ಷದೊಳಗಿನ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ 10 ಸಾವಿರ ರು. ಚೆಕ್‌ ಅನ್ನು ನೀಡುತ್ತಿದೆ. ಆಗಸ್ಟ್‌ 15, 2018ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂಬಂತಹ ಸಂದೇಶವು ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜವಾಗಲೂ ಪ್ರಧಾನಿ ನರೇಂದ್ರ ಮೋದಿ ಹೆಣ್ಣು ಮಕ್ಕಳ ಜೀವನ ಸುಧಾರಣೆಗಾಗಿ ಈ ಯೋಜನೆಯನ್ನು ರೂಪಿಸಿದ್ದಾರೆಯೇ ಎಂದು ಹುಡುಕಿದಾಗ ಈ ಮಾಹಿತಿ ಸುಳ್ಳು ಎಂಬುದು ತಿಳಿದುಬಂದಿದೆ. ದಯವಿಟ್ಟು ಇದರಿಂದ ಯಾರು ಮೋಸ ಹೋಗಬೇಡಿ..

Edited By

Manjula M

Reported By

Manjula M

Comments