ಚಿನ್ನದ ಆಭರಣಗಳು ಯಾವಾಗಲೂ ಹೊಳೆಯುವಂತೆ ಮಾಡಲು ಸಿಂಪಲ್ ಟಿಪ್ಸ್

10 Aug 2018 2:10 PM | General
883 Report

ಮೊದಲೆ ನಿಮಗೆಲ್ಲಾ ಗೊತ್ತಿರೋ ಹಾಗೆ ಹೆಣ್ಣು ಮಕ್ಕಳಿಗೆ ಒಡವೆಗಳು ಅಂದ್ರೆ ಪಂಚಪ್ರಾಣ...ಕಂಡಿದೆಲ್ಲಾ ಬೇಕು ನೋಡಿದೆಲ್ಲಾ ಬೇಕು ಅನ್ನೋ ರೀತಿ ನಮ್ಮ ಹೆಣ್ಣು ಮಕ್ಕಳು ಇರ್ತಾರೆ...ಆದ್ರೆ ತಗೊಂಡಿರೋ ವಸ್ತುಗಳನ್ನ ಜೋಪಾನ ಮಾಡೋದು ಮಾತ್ರ ಗೊತ್ತಾಗಲ್ಲ.. ಎಲ್ಲಿ ಅಂದ್ರೆ ಅಲ್ಲಿ ಬಿಸಾಡಿ ಹಾಳ್ ಮಾಡ್ಬಿಡ್ತಾರೆ... ಅದರ ಬೆಲೆ ಎಷ್ಟಾದ್ರೂ ಇರ್ಲಿ...ಹೆಣ್ಣು ಮಕ್ಕಳು ಅದರ ಬಗ್ಗೆ ಯೋಚನೆನೇ ಮಾಡೋದಿಲ್ಲ... ಫ್ಯಾಷನ್ ತಕ್ಕಂತೆ ತಗೋಳೋದು... ಆಮೇಲೆ ಯೂಸ್ ಮಾಡಿಕೊಂಡು ಬಿಸಾಡೋದು ಅಷ್ಟೆ.. ನಮ್ ಫ್ಯಾಷನ್‍ಯುಗದ ಹೆಣ್ಣು ಮಕ್ಕಳು...

ಆರ್ಟಿಫಿಷಿಯಲ್ ಆಭರಣಗಳಾದ್ರೆ ಅದರ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಳ್ಳಲ್ಲ… ಆದ್ರೆ ಚಿನ್ನದ ಒಡವೆಗಳಾದ್ರೆ ಏನ್ ಮಾಡೋದು ಹೇಳಿ ಅದನ್ನ ಜೋಪಾನ ಮಾಡೋದು ಕೂಡ ತುಂಬಾನೆ ಇರ್ಪಾಟೆಂಟ್.. ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ತುಂಬಾ ಜೋಪಾನ ಮಾಡಬೇಕಾಗಿದೆ.. ಚಿನ್ನ ಮತ್ತು ಬೆಳ್ಳಿ ಒಡವೆಯ ಸ್ವಚ್ಚತೆಯು ಕೂಡ ತುಂಬಾನೇ ಮುಖ್ಯವಾಗುತ್ತದೆ.. ಬೆಳ್ಳಿ ಬಂಗಾರದ ಆಭರಣಗಳ ಸ್ವಚ್ಛತೆಗೆ ಸಿಂಪಲ್ ಟಿಪ್ಸ್ ಅನ್ನು ಹೇಳ್ತೀವಿ .. ನೀವು ಅದೇ ರೀತಿ ಮಾಡಿ ನಿಮ್ಮ ಆಭರಣಗಳ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ.. ನಮ್ಮ ಭಾರತ ದೇಶದಲ್ಲಿ ಚಿನ್ನದ ಆಭರಣಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ಅದಕ್ಕೆ ನೀಡುವಷ್ಟು ಪ್ರಾಶಸ್ತ್ಯವನ್ನು ಬೇರೆ ಯಾವುದೆ ಲೋಹಗಳಿಗೂ ನೋಡುವುದಿಲ್ಲ..ಹಳದಿ ಲೋಹವನ್ನು ತುಂಬಾ ಪವಿತ್ರತೆಯಿಂದ ಕಾಣುತ್ತಾರೆ. ಯಾವುದೆ ಶುಭ ಸಮಾರಂಭವಾದರೂ ಕೂಡ ಅಲ್ಲಿ ಹಳದಿ ಲೋಹದ ಪ್ರಾಮುಖ್ಯತೆ ಎಷ್ಟಿದೆ ಎಂಬುದು ನಮಗೆ ತಿಳಿಯುತ್ತದೆ.ಹೆಚ್ಚು ಒಡವೆಗಳನ್ನು ಹೊಂದಿರೋರು ಅದರ ಬಗ್ಗೆ ಗಮನವನ್ನು ಕೊಡೊದೆ ಕಡಿಮೆ.. ಇಂದಿನ ದಿನಗಳಲ್ಲಿ ದಿನಕ್ಕೊಂದು ವಿನ್ಯಾಸದ ಬಂಗಾರದ ಆಭರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ..ಆದರೆ ತಗೊಳೋದು ಮಾತ್ರ ಅಲ್ಲ ಅದರ ನಿರ್ವಹಣೆಯು ಕೂಡ ತುಂಬಾ ಮುಖ್ಯವಾಗುತ್ತದೆ.ಬಂಗಾರ ಒಡವೆಗಳ ಮೇಲೆ ದೂಳು ಕುಳಿತುಕೊಂಡು ಒಡವೆಗಳು ಹೊಳಪನ್ನು ಕಳೆದುಕೊಳ್ಳುವುದು ಕಾಮನ್..ಆದ್ರೆ ಅದನ್ನು ತೆಗೆಯುವುದು ತುಂಬಾ ಸುಲಭ.. ಎಲ್ಲರ ಮನೆಯಲ್ಲಿ ಪಾತ್ರೆ ತೊಳೆಯಲು ಬಳಸುವ ಲಿಕ್ವಿಡ್‍ಗಳು ಇದ್ದೆ ಇರುತ್ತದೆ.. ಅದನ್ನ ಹಾಕಿ ತೊಳೆದರೆ ಒಡವೆಗಳು ಪಳ ಪಳನೆ ಹೊಳೆಯುತ್ತದೆ... ನೀವು ತಂದಾಗ ನಿಮ್ಮ ಬಂಗಾರ ಹೇಗಿತ್ತೋ ಅದೆ ರೀತಿ ಹೊಸ ಒಡವೆಗಳ ರೀತಿ ನಿಮ್ಮ ಆಭರಣಗಳು ಹೊಳೆಯುತ್ತವೆ. ಅವು ಯಾವಾಗಲೂ ಹಾಗೆ ಹೊಳೆಯಬೇಕು ಅಂದರೆ ಹಲ್ಲುಜ್ಜುವ ಪೇಸ್ಟ್ ಬಂಗಾರದ ಆಭರಣಗಳನ್ನು ಮನೆಯಲ್ಲೇ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ಸ್ವಲ್ಪಗೊಳಿಸುವ ಸುಲಭ ವಿಧಾನವೆಂದರೆ ಹಲ್ಲುಜ್ಜುವ ಪೇಸ್ಟ್. ಸ್ವಲ್ಪ ಹಲ್ಲುಜ್ಜುವ ಪೇಸ್ಟ್ ತೆಗೆದುಕೊಂಡು ಬಂಗಾರದ ಆಭರಣದ ಮೇಲೆ ಹಾಕಿಕೊಂಡು ಬ್ರಶ್ ನಿಂದ ನಿಧಾನವಾಗಿ ಉಜ್ಜಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಐದು ನಿಮಿಷ ಕಾಲ ಆಭರಣಗಳನ್ನು ಹಾಕಿಡಿ. ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಿ

Edited By

Manjula M

Reported By

Manjula M

Comments