ಕಣ್ತುಂಬಾ ನಿದ್ದೆ ಬರಬೇಕು ಅಂದ್ರೆ ಮಲಗುವ ಕೊಠಡಿಯಲ್ಲಿರಬೇಕಾದ ಸಸ್ಯ ಸಂಕುಲಗಳು..!

09 Aug 2018 4:23 PM | General
463 Report

ಚಿಂತೆ ಇಲ್ಲದವನಿಗೆ ಸಂತೆಲೂ ನಿದ್ದೆ ಎಂಬ ಗಾದೆ ಮಾತನ್ನು ನೀವೆಲ್ಲ ಕೇಳೆ ಇರ್ತೀರಾ.. ಆದ್ರೆ ಮನೆಯಲ್ಲಿ ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ಕೆಲವೊಂದು ಗಿಡಗಳು ಇರಬೇಕು.. ಯಾವ್ ಗಿಡ ಅಂತಿರಾ ಇದನ್ನೊಮ್ಮೆ ಓದಿ

ಅಲಂಕಾರಕ್ಕೆಂದೆ ನಾವು ಮನೆಯೊಳಗೆ ಸಾಕಷ್ಟು ಗಿಡಗಳನ್ನಿಡುತ್ತೇವೆ. ಮನೆಯೊಳಗಿನ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಕೆಲವೊಂದು ಗಿಡಗಳೂ ಅವುಗಳು ಸೂಸುವ ಸುವಾಸನೆ ಮತ್ತು ಅರಳಿಸುವ ಹೂವುಗಳಿಂದ ಮನಸ್ಸಿಗೆ ಮುದ ಹಾಗೂ ನೆಮ್ಮದಿಯನ್ನು ನೀಡುತ್ತವೆ.. ಇಂತಹ ಕೆಲವೊಂದು ಗಿಡಗಳು ಗಾಳಿಯನ್ನು ಶುದ್ಧಿಕರಿಸುತ್ತದೆ ಮತ್ತು ಮನೆಗೆ ಬೇಕಾದ ಆಮ್ಲಜನಕವನ್ನೂ ನೀಡುತ್ತವೆ. ಇಲ್ಲಿ ನಾವು ನಾವು ಗಮನಿಸಬೇಕಾದ ಮುಖ್ಯವಾದ ವಿಷಯವೆಂದರೆ ಮಲಗುವ ಕೋಣೆಯಲ್ಲಿ ನಾವು ನಾವು ಗಿಡಗಳು ಯಾವುವು ಎಂಬುದು..ಹೌದು ಮಲಗುವ ರೂಮ್ಗೆ ಸೂಕ್ತವಾದ ಗಿಡಗಳನ್ನು ಆಯ್ಕೆ ಮಾಡುವುದರಿಂದ ಸರಿಯಾಗಿ ನಿದ್ರೆ ಹಾಗೂ ಶಾಂತಿ ಪಡೆಯಲು ಸಾಧ್ಯ ಹಲವಾರು ಜಾತಿಯ ಗಿಡಗಳನ್ನು ಇದಕೋಸ್ಕರ ಆಯ್ಕೆ ಮಾಡಿಕೊಳ್ಳಬಹುದು. ನಾವು ಹೇಳುವ ಐದು ಗಿಡಗಳನ್ನು ನಿಮ್ಮ ಮನೆಯಲ್ಲಿಟ್ಟರೆ ನಿಮ್ಮ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಅಷ್ಟೆ ಉತ್ತಮ ನಿದ್ದೆ ಪಡೆಯಲು ನೆರವಾಗುತ್ತದೆ..

ಮಲ್ಲಿಗೆ:- ಮಲ್ಲಿಗೆ ಎಂದರೆ ಎಲ್ಲರಿಗೆ ತುಂಬಾ ಪ್ರಿಯ. ಅದರ ಸುವಾಸನೆಯೂ ಕೂಡ ಅಷ್ಟೆ ಎಂತವರನ್ನು ಮರಳು ಮಾಡುವ ಸುಗಂಧವನ್ನು ಹೊಂದಿದೆ.. ಮಲ್ಲಿಗೆ ಯಲ್ಲಿ ನಾನಾ ರೀತಿಯ ವಿಧಗಳಿವೆ.. ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಮೈಸೂರು ಮಲ್ಲಿಗೆ ಹೀಗೆ ಇನ್ನೂ ಹಲವಾರು ವಿಧಗಳಿವೆ. ಹಾಲಿನಷ್ಟೆ ಬಿಳಿಯ ಬಣ್ಣ ಇರುವ ಈ ಮಲ್ಲಿಗೆ ನೋಡಲು ಸುಂದರ ಮಲ್ಲಿಗೆಯಲ್ಲಿ ನೈಸರ್ಗಿಕವಾಗಿ ಉತ್ತಮ ನಿದ್ರೆ ಕೊಡುವ ಗುಣವಿದೆ ಎಂದು ವೀಲಿಂಗ್ ಜೆಸ್ಯೂಟ್ ಯೂನಿವರ್ಸಿಟಿಯ ಅಧ್ಯಯನವು ಹೇಳಿದೆ. ಇದರಲ್ಲಿನ ಧನಾತ್ಮಕ ಪರಿಣಾಮಗಳೆಂದರೆ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ ಒತ್ತಡ ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಲ್ಯಾವೆಂಡರ್:- ಲ್ಯಾವೆಂಡರ್ ಎಂಬುದು ಒಂದು ಜಾತಿಯ ಹೂ.. ಇದನ್ನು ಸೋಪ್ ಶಾಂಪೂ ಮತ್ತು ಸುಗಂಧ ದ್ರವ್ಯಗಳನ್ನು ಮಾಡುವುದಕ್ಕೆ ಬಳಸುತ್ತಾರೆ. ಇದು ಸ್ವಚ್ಚ ಮಾಡುವಂತಹ ಗುಣವನ್ನು ಹೊಂದಿದೆ. ಇದರ ಗುಣ ಇಷ್ಟೆ ಅಲ್ಲ.. ಇದು ನಿದ್ರಾ ಹೀನತೆಯನ್ನು ಕಡಿಮೆ ಮಾಡುತ್ತದೆ.. ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ. ಲ್ಯಾವೆಂಡರ್ ಗಿಡದಿಂದ ಬರುವಂತಹ ಸುವಾಸನೆಯನ್ನು ತೆಗೆದುಕೊಂಡರೆ ಹಿತ ಅನಿಸುತ್ತದೆ.

ಗಾರ್ಡೆನಿಯಾ:- ಗಾರ್ಡೆನಿಯಾ ಜಾಸ್ಮಿನೊಡೆಸ್‍ನ್ನು ಯಾವಾಗಲೂ ಬೆಟ್ಟದ ಮಲ್ಲಿಗೆ ಎಂದು ಕರೆಯಲಾಗುತ್ತದೆ. ಇದರಲ್ಲಿ ನಿದ್ರೆಯ ಮಾತ್ರೆಯಷ್ಟೆ ನಿದ್ರೆ ಮಾಡಿಸುವ ಶಕ್ತಿ ಇದೆ. ಜರ್ಮನಿಯಲ್ಲಿ ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ ಹೊರಬಿದ್ದ ಅಂಶವೆಂದರೆ ಈ ಗಿಡಗಳು ಗಾಬಾ ಎಂದು ಕರೆಯಲ್ಪಡುವ ನ್ಯೂರೋಟ್ರಾನ್ಸ್ ಮೀಟರ್‍ನಷ್ಟೆ ಪ್ರಭಾವವನ್ನು ಹೊಂದಿದೆ. ಅತೀ ಹೆಚ್ಚು ಸುವಾಸನೆಯನ್ನು ಹರಡಿ ಮತ್ತು ಬರುವಂತೆ ಮಾಡಿ ಮನುಷ್ಯನನ್ನು ನಿದ್ದೆಗೆ ಜಾರುವಂತೆ ಮಾಡುತ್ತವೆ.

ಸ್ನೇಕ್ ಪ್ಲಾಂಟ್:- ಇದನ್ನ ಅತ್ತೆಯ ನಾಲಿಗೆ ಅಂತಲೂ ಕರೆಯುತ್ತಾರೆ. ಈ ಸ್ನೇಕ್ ಪ್ಲಾಂಟ್ ಮನೆಯಲ್ಲಿ ಆಮ್ಲಜನಕವನ್ನು ಶುದ್ದಿಕರಿಸಲು ತುಂಬಾ ನೆರವಾಗುತ್ತದೆ. ಇದರ ನಿರ್ವಹಣೆ ಮತ್ತು ವೆಚ್ಚ ಕಡಿಮೆ ಇರುವುದರಿಂದ ಮಲಗುವ ಕೋಣೆಗೆ ಇದು ಹೇಳಿ ಮಾಡಿಸಿದ ಗಿಡ. ನಾಸಾ ಕೈಗೊಂಡ ಅಧ್ಯಯನದಲ್ಲಿ ಗಾಳಿಯನ್ನು ಶುದ್ಧಿಕರಿಸುವ 12 ಗಿಡಗಳಲ್ಲಿ ಈ ಸ್ನೇಕ್ ಪ್ಲಾಂಟ್ ಕೂಡ ಒಂದು. ವಿಜ್ಞಾನವೂ ಎಲ್ಲವನ್ನೂ ತಿಳಿಸುತ್ತದೆ ಅಂದ ಮೇಲೆ ನಾಸ ಹೇಳಿರುವ ಪ್ರಕಾರ ಈ ಗಿಡವನ್ನು ನಿಮ್ಮ ಮನೆಯ ರೂಮಿನಲ್ಲಿ ಇಟ್ಟುಕೊಂಡರೆ ಸುಖಕರ ನಿದ್ದೆ ಬರುವುದರಲ್ಲಿ ಸಂಶಯವೆ ಇಲ್ಲ..

Edited By

Manjula M

Reported By

Manjula M

Comments