ಲವಂಗದ ಜಬರ್ದಸ್ ಪವರ್'ಗೆ ಎಲ್ಲರೂ ಫಿದಾ..!

09 Aug 2018 1:04 PM | General
311 Report

ಬರಿ ಸಾಂಬಾರು ಪದಾರ್ಥವಾಗಿರುವ ಲವಂಗ ಹೆಚ್ಚಿನ ಸೌಂದರ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ..ಅಷ್ಟೆ ಅಲ್ಲದೆ ಹೆಚ್ಚಿನ ಸೌಂದರ್ಯ ಅಂಶಗಳನ್ನು ಮೈಗೂಡಿಸಿಕೊಂಡಿರುವುದು ಇದರ ಒಂದು ಹೆಗ್ಗಳಿಕೆಯ ವಿಷಯವಾಗಿದೆ...ಇತ್ತಿಚಿಗೆ ನೀವು ಯಾವುದೆ ಟೂಥ್‍ಪೇಸ್ಟ್‍ನ ಬಳಸಬೇಕಾದರೆ ಒಮ್ಮೆ ಅದರ ಕವರ್‍ನ ನೋಡಿ ಲವಂಗದ ಚಿತ್ರ ನಿಮಗೆ ಕಾಣಸಿಗುತ್ತದೆ.ಏಕೆಂದರೆ ಅದರಲ್ಲಿ ಲವಂಗದ ಎಣ್ಣೆಯನ್ನು ಬಳಕೆಯಾಗಿರುತ್ತದೆ.

ಲವಂಗವು ಸಾಂಬಾರು ಪದಾರ್ಥಗಳಲ್ಲಿ ಅಗ್ರಸ್ಥಾನದಲ್ಲಿರುವ ಪದಾರ್ಥವಾಗಿದೆ. ಇದು ನಮ್ಮ ಸೌಂದರ್ಯವನ್ನು ಹಿಮ್ಮಡಿಗೊಳಿಸುತ್ತದೆ.. ಬರಿ ಸಾಂಬಾರು ಪದಾರ್ಥಗಳಲ್ಲಿ ಈ ಲವಂಗ ತನ್ನ ಛಾಪನ್ನು ಮೂಡಿಸಿದೆ..ಈ ಲವಂಗದಲ್ಲಿ ಆರ್ಯುವೇದ ಗುಣಗಳು ಹೆಚ್ಚಾಗಿ ಇರುತ್ತವೆ. ಹಲ್ಲುನೋವು,ಕಫ,ಅಸ್ತಮಾ ಮತ್ತು ಅಜೀರ್ಣ ಒತ್ತಡದಂತಹ ಸಮಸ್ಯೆಗಳಿಗೆ ಲವಂಗವೂ ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಇದರ ಸುವಾಸನೆಯೂ ಕೂಡ ತುಂಬಾ ಚೆನ್ನಾಗಿರುತ್ತದೆ…ನಿಮ್ಮ ಅಡಿಗೆ ಮನೆಯ ದಾದಿ ಎಂಬ ಈ ಲವಂಗ ಎಂದರೆ ತಪ್ಪಾಗಲಾದರು.ಈ ಲವಂಗವು ಮನೆ ಮದ್ದಿನಂತೆ ಕೆಲಸ ನಿರ್ವಹಿಸುತ್ತದೆ..ಕೆಲವೊಂದು ವೈನ್‍ಗಳಲ್ಲಿ ಕೂಡ ಲವಂಗವನ್ನು ಬಳಸುತ್ತಾರೆ.ಲವಂಗವೂ ಯಾವೆಲ್ಲ ರೀತಿಯಲ್ಲಿ ತ್ವಚೆಯನ್ನು ಆರೈಕೆ ಮಾಡುತ್ತದೆ ಎಂಬುದನ್ನು ನೋಡುವುದಾದರೆ ಲವಂಗದಲ್ಲಿ ನಾನಾ ರೀತಿಯ ಔಷಧೀಯ ಗುಣಗಳಿವೆ...ಮೊಡವೆ ನಿವಾರಣೆ ಮಾಡುವಲ್ಲಿ ಲವಂಗವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಲವಂಗವು ತುಂಬಾ ಘಾಟನ್ನು ಹೊಂದಿರುವ ಕಾರಣ ಆಲಿವ್ ತೈಲ ಅಥವಾ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕೊಂಡು ಬಳಸಿದರೆ ಒಳ್ಳೆಯದು.. ಕಲೆಗಳ ನಿವಾರಣೆಯಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.ಮೃದು ಮತ್ತು ಕಾಂತಿಯುತ ಚರ್ಮವು ನಿಮ್ಮದಾಗುತ್ತದೆ.

ಚರ್ಮಕ್ಕೆ ವಯಸ್ಸಾಗುವ ಲಕ್ಷಣಗಳನ್ನು ಲವಂಗವು ನಿವಾರಣೆ ಮಾಡುತ್ತವೆ. ಲವಂಗದ ಎಣ್ಣೆಯನ್ನು ಇತರ ಯಾವುದೇ ಸಾರಭೂತ ತೈಲದೊಂದಿಗೆ ಮಿಶ್ರಣ ಮಾಡಿಕೊಂಡು ಬಳಸುವುದರಿಂದ ಯೌವನಯುವ ತ್ವಚೆಯು ನಿಮ್ಮದಾಗುತ್ತದೆ. ತಾಜಾ ಹಾಗೂ ಆರೋಗ್ಯಕರ ಚರ್ಮಕ್ಕಾಗಿ ಲವಂಗದ ಎಣ್ಣೆಯನ್ನು ಬಳಸುವುದು ಸೂಕ್ತ.. ಈ ನೈಸರ್ಗಿಕ ಎಣ್ಣೆಯು ಪುನರುಜ್ಜೀವನ ನೀಡುವುದು ಮಾತ್ರವಲ್ಲದೆ ಇದರಲ್ಲಿ ಇರುವಂತಹ ಉತ್ತೇಜನಕಾರಿ ಗುಣಗಳು ಚರ್ಮವು ತಾಜಾ ಹಾಗೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಲವಂಗದ ಎಣ್ಣೆಯು ರಕ್ತವನ್ನು ಶುದ್ಧಿಕರಿಸುತ್ತದೆ ಮತ್ತು ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಸುಂದರ ಹಾಗೂ ಒಳ್ಳೆ ಚರ್ಮವನ್ನು ನೀಡುತ್ತದೆ.. ನಿಯಮಿತವಾಗಿ ಲವಂಗದ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕರ ಚರ್ಮವನ್ನು ನಿಮ್ಮದಾಗಿಸಿಕೊಳ್ಳಿ.. ಅಷ್ಟೆ ಅಲ್ಲದೆ ಲವಂಗದ ಎಣ್ಣೆಯಿಂದ ಮಸಾಜ್ ಮಾಡಿದರೆ ಮೈ ಕೈ ನೋವು ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಲೋಷನ್ ಹಾಗೂ ಕಾಸ್ಮೆಟಿಕ್ ಕ್ರೀಮ್‍ಗಳಲ್ಲಿ ಲವಂಗದ ಎಣ್ಣೆಯು ಇರುತ್ತದೆ. ಇಂತಹ ಕ್ರೀಮ್ ಅಥವಾ ಲೋಷನ್ ಹಚ್ಚಿಕೊಂಡರೆ ದೇಹದ ನೋವು ನಿವಾರಣೆಯಾಗುತ್ತದೆ..

Edited By

Manjula M

Reported By

Manjula M

Comments