ಭೂ ಗರ್ಭದಲ್ಲಿದೆ ಬೆಚ್ಚಿ ಬೀಳಿಸುವ ಮ್ಯೂಸಿಯಂ..!

07 Aug 2018 6:01 PM | General
440 Report

ಪ್ರಪಂಚದಲ್ಲಿ ಯಾವ ಯಾವ ರೀತಿಯ ಮ್ಯೂಸಿಯಂಗಳಿವೆ ಎಂಬುದನ್ನು ನಾವು ನೀವೆಲ್ಲಾ ನೋಡೆ ಇರ್ತಿವಿ. ಕೆಲವೊಂದು ವಿಭಿನ್ನ ರೀತಿಯ ಮ್ಯೂಸಿಯಂಗಳು ಇರುತ್ತವೆ. ಪ್ಯಾರಿಸ್ ಕ್ಯಾಟಕೊಂಬ್ಸ್, ಇದು ಪ್ರಾನ್ಸ್‍ನಲ್ಲಿರುವ ಭೂಗರ್ಭದ ವಸ್ತುಸಂಗ್ರಹಾಲಯವಾಗಿದೆ. ಸಾಮಾನ್ಯವಾಗಿ ಎಲ್ಲರೂ ಕೂಡ ಭೂಮಿಯ ಮೇಲಿರುವ ವಸ್ತು ಸಂಗ್ರಹಾಲಯಗಳನ್ನು ನೋಡಿರುತ್ತೇವೆ.

ಆದರೆ ಭೂ ಗರ್ಭದಲ್ಲಿರುವ ವಸ್ತು ಸಂಗ್ರಹಾಲಯ ಸ್ವಲ್ಪ ಡಿಫರೆಂಟ್ ಆಗಿರುತ್ತದೆ ಅನ್ನುವ ಫೀಲ್ ನಮಗೆಲ್ಲಾ ಬಂದೆ ಬರುತ್ತದೆ. ಹೇಗಿದೆ ಅದು ಅಂತ ಒಂದು ಸಲ ನೋಡಬೇಕು ಅನಿಸುತ್ತದೆ. ಯಾಕಂದ್ರೆ ಅಷ್ಟೊಂದು ಕ್ಯೂರ್ಯಾಸಿಟಿಯನ್ನು ಕ್ರಿಯೇಟ್ ಮಾಡುತ್ತೆ ಈ ಭೂ ಗರ್ಭ ವಸ್ತು ಸಂಗ್ರಹಾಲಯ.ಆದರೆ ಇದರ ಒಳಗೆ ಹೋಗೋಕೆ ಸ್ವಲ್ಪ ಭಯ ಆಗೋದಂತು ಗ್ಯಾರೆಂಟಿ. ಅಷ್ಟು ಭಯಾನಕವಾಗಿದೆ ಈ ವಸ್ತು ಸಂಗ್ರಹಾಲಯ.. ಈ ವಸ್ತು ಸಂಗ್ರಹಾಲಯದಲ್ಲಿ ಸಾಕಷ್ಟು ಸುರಂಗಗಳಿವೆ. ಪ್ಯಾರೀಸ್‍ನ ಪ್ರಾಚೀನ ಕಲ್ಲುಗಳಿಂದ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ಈ ಜಾಗದಲ್ಲಿ ಮೊದಲು ಸ್ಮಶಾನಗಳು ಇದ್ದವು. ಅದನ್ನು ತೊಡೆದುಹಾಕುವ ಸಲುವಾಗಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದರು.1774ರ ಭಯಾನಕ ಸೇಂಟ್ ಇನ್ನೊಸೆಂಟ್ಸ್ ಸ್ಮಶಾನದ ನೆಲಮಾಳಿಗೆಯಲ್ಲಿ ಇದನ್ನು ನಿರ್ಮಿಸಲಾಯಿತು. ನಂತರ 1786ರಿಂದ ಪ್ಯಾರಿಸ್‍ನ ಸ್ಮಶಾನಗಳಿಂದ ಬಹುತೇಕ ಅವಶೇಷಗಳನ್ನು ವರ್ಗಾವಣೆ ಮಾಡಲಾಯಿತು.19 ನೇ ಶತಮಾನದ ಆರಂಭದಲ್ಲಿ ಈ ವಸ್ತು ಸಂಗ್ರಹಾಲಯವು ಪ್ರಾರಂಭವಾಯಿತಾದರೂ ಅದನ್ನು ಮತ್ತಷ್ಟು ನವೀಕರಣ ಪಡಿಸುವ ಸಲುವಾಗಿ ಅದಕ್ಕೆ ಮತ್ತಷ್ಟು ಪ್ರದೇಶವನ್ನು ಸೇರಿಸಲಾಯಿತು. ತದನಂತರ 1874 ರಿಂದ ಸಾರ್ವಜನಿಕ ಪ್ರದರ್ಶನಕ್ಕಾಗಿ ಈ ವಸ್ತು ಸಂಗ್ರಹಾಲಯವನ್ನು ತೆರೆಯಲಾಯಿತು.ಪ್ಯಾರಿಸ್‍ನಲ್ಲಿರುವ 14 ಸಿಟಿ ಆಫ್ ಪ್ಯಾರಿಸ್ ವಸ್ತು ಸಂಗ್ರಹಾಲಯಗಳ ಪೈಕಿ ಕ್ಯಾಟಕೊಂಬ್ಸ್ ಈ ವಸ್ತು ಸಂಗ್ರಹಾಲಯವು ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಈ ಸುರಂಗದ ಒಳಗೆ ಒಮ್ಮೆ ಹೊಕ್ಕರೆ ನೀವು ಭಯಬೀತರಾಗುವುದು ನಿಜ. ಅಷ್ಟು ಭಯಾನಕವಾಗಿದೆ ಈ ಈ ವಸ್ತು ಸಂಗ್ರಹಾಲಯ. ಅಷ್ಟೆ ಅಲ್ಲದೆ ಈ ವಸ್ತು ಸಂಗ್ರಹಾಲಯದಲ್ಲಿ ಸಾಕಷ್ಟು ತಲೆಬುರುಡೆಗಳಿದ್ದು ಸಂಗ್ರಹಾಲಯವನ್ನು ನೋಡಲು ಹೋದವರನ್ನು ಭಯಭೀತಗೊಳಿಸುತ್ತದೆ. ಇದು ತುಂಬಾ ಪ್ರಾಚೀನ ವಸ್ತು ಸಂಗ್ರಹಾಲಯವಾಗಿದ್ದರಿಂದ ಇಲ್ಲಿ ಹೋಗಲು ಸ್ವಲ್ಪ ಭಯವಾಗುವುದಂತು ಖಂಡಿತ. ಒಮ್ಮೆ ಈ ಸುರಂಗದ ಒಳಗೆ ಹೋದರೆ ಹೊರ ಬರಲು ತುಂಬಾ ಕಷ್ಟ. ಆಕಸ್ಮಾತ್ ತಪ್ಪಿಸಿಕೊಂಡರೆ ಮುಗಿತು ಕಥೆ. ಮತ್ತೆ ಹೊರಬರಲು ಹರಸಾಹಸನೆ ಪಡಬೇಕು. ಒಮ್ಮೆ ಅದರ ಒಳಗೆ ಹೋಗಿ ದಾರಿಯನ್ನು ಮರೆತರೆ ನೀವು ಮತ್ತೆ ಜೀವಂತವಾಗಿ ಹೊರಬರುವುದು ಡೌಂಟೇ ಅಷ್ಟು ನಿಗೂಢವಾಗಿದೆ ಈ ವಸ್ತು ಸಂಗ್ರಹಾಲಯ. ನಿಜಕ್ಕೂ ನಮಗೆಲ್ಲಾ ಅನಿಸದೇ ಇರದು ಈ ವಸ್ತು ಸಂಗ್ರಹಾಲಯ ಇಷ್ಟೊಂದು ನಿಗೂಢವಾಗಿದೆಯ ಎಂದು. ನೀವು ಪ್ಯಾರೀಸ್‍ಗೆ ಏನಾದ್ರು ಹೋದ್ರೆ ಈ ವಸ್ತು ಸಂಗ್ರಹಾಲಯಕ್ಕೆ ಬೇಟಿ ಕೊಡೋದನ್ನ ಮರಿಬೇಡಿ.

Edited By

Manjula M

Reported By

Manjula M

Comments