ಆಕ್ಟೊಪಸ್ ಬಗ್ಗೆ ನಿಮಗೆಷ್ಟು ಗೊತ್ತು..! ಗೊತ್ತಿಲ್ಲದ ಒಂದಿಷ್ಟು ಮಾಹಿತಿಗಳು

02 Aug 2018 5:38 PM | General
747 Report

ಆಕ್ಟೋಪಸ್ ಅನ್ನೋದು ಎಂಟು ಕಾಲುಗಳುಳ್ಳ ನೀರಿನಲ್ಲಿರುವ ಒಂದು ಜಲಚರ ಪ್ರಾಣಿ. ಆಕ್ಟೋಪಸ್‍ಗಳಿಗೆ ಎರಡು ಕಣ್ಣುಗಳು ಮತ್ತು ನಾಲ್ಕು ಜೊತೆ ಬಾಹುಗಳಿವೆ. ಆಕ್ಟೋಪಸ್‍ಗೆ ಗಟ್ಟಿಯಾದ ಕೊಕ್ಕು ಇದ್ದು, ಅದರ ಬಾಯಿ ಬಾಹುಗಳ ಕೇಂದ್ರ ಭಾಗದಲ್ಲಿ ಇರುತ್ತದೆ. ಸಾಮಾನ್ಯವಾಗಿ ಆಕ್ಟೋಪಸ್‍ಗಳಿಗೆ ಹೊರಗಿನ ಅಥವಾ ಹೊಳಗಿನ ಅಸ್ಥಿ ಪಂಜರವಿಲ್ಲದ ಕಾರಣ ಬಹಳ ಕಿರಿದಾದ ಜಾಗಗಳಲ್ಲೂ ಅದು ನುಸುಳಲು ಅನುಕೂಲವಾಗುತ್ತದೆ.

ಆಕ್ಟೋಪಸ್‍ಗಳು ಬಹಳ ಬುದ್ದಿವಂತ ಜಲಚರಗಳು ಪ್ರಾಯಶ: ಅಕಶೇರುಕಗಳಲ್ಲಿಯೇ ಅತ್ಯಂತ ಬುದ್ದಿವುಳ್ಳವು. ಆಕ್ಟೋಪಸ್‍ಗಳು ಸಮುದ್ರದ ವಿವಿಧ ಪ್ರದೇಶಗಳಲ್ಲಿ ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ವಾಸಿಸುತ್ತವೆ. ಆಕ್ರಮಣಕಾರರ ವಿರುದ್ದ ರಕ್ಷಿಸಿಕೊಳ್ಳಲು ತಲೆ ತಪ್ಪಿಸಿಕೊಂಡು ಅಡಗಿಕುಳಿತುಕೊಳ್ಳುತ್ತವೆ. ಈ ಆಕ್ಟೋಪಸ್‍ಗಳು ಆಗಿಂದಾಗೆ ಬಣ್ಣವನ್ನು ಬದಲಾಯಿಸಿಕೊಂಡು ಓಡಾಡುತ್ತಿರುತ್ತವೆ.. ಒಂದು ಆಕ್ಟೋಪಸ್ ಈಜುತ್ತಾ ಹೋದಂತೆ ತನ್ನ ಎಂಟು ತೋಳುಗಳನ್ನು ತನ್ನ ಹಿಂದೆ ಎಳೆದುಕೊಂಡು ಹೋಗುತ್ತದೆ. ಎಲ್ಲಾ ರೀತಿಯ ಆಕ್ಟೋಪಸ್‍ಗಳು ವಿಷಮಯವಾದವುಗಳು. ಆದರೆ ಕೇವಲ ನೀಲಿ ಉಂಗುರದ ಆಕ್ಟೋಪಸ್‍ಗಳು ಮಾನವನಿಗೆ ತುಂಬಾ ಆಘಾತಕಾರಿಯಾದವು..

ಆಕ್ಟೋಪಸ್‍ಗಳಲ್ಲಿ ಸುಮಾರು 300 ರೀತಿಯ ತಳಿಗಳಿವೆ. ಎಂಟು ತೋಳುಗಳಿಂದ ಆಕ್ಟೋಪಸ್ ಅನ್ನು ಗುರುತಿಸಬಹುದು. ಸ್ಪರ್ಶಾಂಗಗಳಿಂದ ಆಕ್ಟೋಪಸ್‍ನ ತೋಳುಗಳಲ್ಲಿ ಆಗಾಗೆ ವ್ಯತ್ಯಾಸವನ್ನು ಕಾಣಬಹುದು. ಆಕ್ಟೋಪಸ್ ದೇಹದಲ್ಲಿ ಅಸ್ಥಿ ಪಂಜರವಿಲ್ಲದ ಕಾರಣ ಅದರ ದೇಹ ಬಹುಮಟ್ಟಿಗೆ ಮೃದುವಾಗಿರುತ್ತದೆ. ಬೇರೆ ಪ್ರಾಣಿಗಳಂತೆ ಆಕ್ಟೋಪಸ್‍ಗಳು ಹೊರ ರಕ್ಷಣ ಚಿಪ್ಪನ್ನಾಗಲಿ, ಅಥವಾ ಕಟಲ್ ಫಿಶ್ ಅಥವಾ ಸ್ಕ್ವಿಡ್‍ಗಳಂತೆ, ಆಂತರಿಕ ಚಿಪ್ಪು ಅಥವಾ ಎಲುಬುಗಳ ಲಕ್ಷಣವನ್ನಾಗಲಿ ಹೊಂದಿಲ್ಲ.  ಗಿಳಿಯ ಕೊಕ್ಕಿನ ತದ್ರೂಪದಂತೆ ಒಂದು ಕೊಕ್ಕು ಇದೆ ಅಷ್ಟೆ. ಆದರೆ ಆ ಕೊಕ್ಕು ದೇಹದ ಗಟ್ಟಿ ಭಾಗವಾಗಿದೆ. ಇದು ನೀರೊಳಗಿರುವ ಬಂಡೆಗಳ ಮಧ್ಯೆ ಬಹಳ ಇಕ್ಕಟಾದ ಸೀಳುಗಳ ಮುಖಾಂತರ ತೂರಿಸಿಕೊಂಡು ಹೋಗಲು ಅವುಗಳನ್ನ ಶಕ್ರಗೊಳಿಸುತ್ತದೆ. ಸಾಮಾನ್ಯವಾಗಿ ಆಕ್ಟೋಪಸ್‍ಗಳ ಆಯಸ್ಸಿನ ಪ್ರಮಾಣವು ಇರುತ್ತದೆ.ಕೆಲವು ತಳಿಗಳು ಆರು ತಿಂಗಳಷ್ಟು ಕಡಿಮೆ ಸಮಯ ಬದುಕುತ್ತವೆ..

ಉತ್ತರ ಪೆಸಿಪಿಕ್‍ನಲ್ಲಿರುವ ದೈತ್ಯ ಆಕ್ಟೋಪಸ್‍ಗಳು ಒಳ್ಳೆಯ ಸನ್ನಿವೇಶದಲ್ಲಿ ಐದು ವರ್ಷಗಳ ಕಾಲ ಜೀವಿಸಬಹುದು. ವಂಶಾಭಿವೃದ್ದಿಯು ಕೆಲವೊಮ್ಮೆ ಆಕ್ಟೋಪಸ್‍ನ ಸಾವಿಗೆ ಕಾರಣವಾಗುತ್ತಾನೆ. ಮೊಟ್ಟೆಯಾಗಿ ಮರಿಯಾದ ಕೂಡಲೆ ತಾಯಿ ಆಕ್ಟೋಪಸ್‍ಗಳು ಸಾಯುತ್ತವೆ.ಆಕ್ಟೋಪಸ್‍ಗಳು ಮೂರು ಹೃದಯಗಳನ್ನು ಹೊಂದಿವೆ. ಪ್ರತಿ ಎರಡು ಕಿವಿರುಗಳ ಮೂಲಕ ಎರಡು ರಕ್ತವನ್ನು ಪಂಪ್ ಮಾಡುತ್ತವೆ. ಮೂರನೆಯದು ದೇಹದ ಮುಖಾಂತರ ರಕ್ತವನ್ನು ಪಂಪ್ ಮಾಡಿತ್ತದೆ. ಆಕ್ಟೋಪಸ್‍ನ ರಕ್ತ ಆಮ್ಲಜನಕವನ್ನು ಸಾಗಿಸಲು ಸಮೃದ್ದವಾದ ಪ್ರೋಟಿನ್ ಹೊಂದಿದೆ. ಆಕ್ಟೋಪಸ್‍ನ ಬುದ್ದಿವಂತಿಕೆ ಬೇರೆ ಪ್ರಾಣಿಗಳಿಗಿಂತ ಹೆಚ್ಚು ಚುರುಕು ಬುದ್ದಿಯುಳ್ಳವರು. ಅವುಗಳ ಬುದ್ದಿವಂತಿಕೆ ಮತ್ತು ಕಲಿಯುವ ಸಾಮಥ್ರ್ಯತೆಯನ್ನ ಜೀವಶಾಸ್ತ್ರಜ್ಞರಲ್ಲಿ ಹೆಚ್ಚು ಚರ್ಚಿಸಲ್ಪಡುತ್ತವೆ. ಆಕ್ಟೋಪಸ್‍ಗಳು ತನ್ನ ವರ್ತನೆಯನ್ನು ಸ್ವತಂತ್ರವಾಗಿಯೇ ಕಲಿಯಲ್ಪಡುತ್ತವೆ. ಮರಿ ಆಕ್ಟೋಪಸ್‍ಗಳು ತನ್ನ ತಂದೆ ತಾಯಿಯಿಂದ ಯಾವದೇ ನಡವಳಿಕೆಯನ್ನ ಕಲಿಯುವುದಿಲ್ಲ. ಅವು ಯಾವಾಗಲು ಸ್ವತಂತ್ರವಾಗಿರುತ್ತವೆ.

Edited By

Manjula M

Reported By

Manjula M

Comments