ಜಾಲಿರೈಡ್’ಗೆ ಎಲ್ಲಿಗೆ ಹೋಗೋದು ಅಂತಾ ಯೋಚನೆ ಮಾಡುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಬೆಸ್ಟ್ ಪ್ಲೇಸ್..!

02 Aug 2018 3:34 PM | General
788 Report

ಈಗ್ ತಾನೆ ಚಳಿಗಾಲ ಶುರುವಾಗಿದೆ.. ಚುಮು ಚುಮು ಚಳಿಗೆ ಬೆಡ್ ಶೀಟ್ ಹೊದ್ಕೊಂಡು ಮಲಗಿಕೊಳ್ಳೋಣ ಅಂತಾ ಕೆಲವರು ಆಸೆ ಪಟ್ಟರೆ ಮತ್ತೆ ಕೆಲವರು ಒಂದು ಲಾಂಗ್ ಜಾಲಿರೈಡ್ ಹೋಗಿ ಖುಷಿ ಪಡೋಣ ಅಂತಾರೆ....ಎಲ್ಲಿಗೋಗೋದು ಅಂತ ಯೋಚನೆ ಮಾಡುತಿರೋರಿಗೆ ಬೆಷ್ಟ್ ಪ್ಲೇಸ್ ಅಂದ್ರೆ ಅದು ಮುಳ್ಳಯ್ಯನ ಗಿರಿ...

ಮುಳ್ಳಯ್ಯನ ಗಿರಿ,,ಕರ್ನಾಟಕ ಜಿಲ್ಲೆಯ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಬಾಬಾ ಬುಡನ್ ಗಿರಿಯ ಬೆಟ್ಟದ ಸಾಲಿನಲ್ಲಿರುವಂತಹ ಒಂದು ಶಿಖರ..1930 ಎತ್ತರದಲ್ಲಿರುವ ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಯ ದೇವಾಲಯವಿದೆ. ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಕೂಡ ಒಂದು.. ಸಮುದ್ರ ಮಟ್ಟದಿಂದ ಸುಮಾರು 6.330 ಅಡಿ ಎತ್ತರವಿದ್ದು, ಹಿಮಾಲಯ ಮತ್ತು ನೀಲಗಿರಿ ಪರ್ವತ ಶ್ರೇಣಿಗಳ ನಡುವಿನ ಅತಿ ಎತ್ತರದ ಪ್ರದೇಶವಾಗಿದೆಕಾಫಿನಾಡು ಚಿಕ್ಕಮಗಳೂರು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಕಲಾವಿದನ ಕುಂಚದಲ್ಲಿ ಮೂಡಿಸುವಂತೆ ಕಾಣಿಸುವ ಕಾಫಿ ಹಾಗೂ ಟೀ ತೋಟಗಳು ದಟ್ಟ ಅರಣ್ಯ ಮತ್ತು ಗಿರಿ ಶಿಖರಗಳು ಇಲ್ಲಿನ ಪ್ರಮುಖ ಆಕರ್ಷಣೆ.. ಇಲ್ಲಿನ ಪರ್ವತಗಳು ಒಂದಕ್ಕಿಂತ ಒಂದು ಮೋಹಕ.

ಇವುಗಳಲ್ಲಿ ಮುಳ್ಳಯ್ಯನಗಿರಿ ಚಿಕ್ಕಮಗಳೂರಿನಿಂ ಸುಮಾರು 20.ಕಿಮಿ ದೂರದಲ್ಲಿದ್ದು, ಬೆಟ್ಟದ ತುದಿಯವರೆಗೆ ಉತ್ತಮವಾದ ರಸ್ತೆಯಿದೆ. ರಸ್ತೆ ಕಿರಿದಾದ್ದರಿಂದ ಈ ರಸ್ತೆ ತುಂಬಾ ಅಪಾಯಕಾರಿಯೂ ಹೌದು. ನಡೆದುಕೊಂಡು ಹೋಗುವವರಿಗೆ ಅಥವಾ ಸೈಕಲ್‍ನಲ್ಲಿ ಹೋಗುವವರಿಗೆ ಉತ್ತಮವಾದ ಪ್ರಯಾಣದ ಅನುಭವವನ್ನು ನೀಡುತ್ತದೆ. ಆದರೆ ಕಾರು ಅಥವಾ ಅದಕ್ಕಿಂತ ದೊಡ್ಡ ವಾಹನಗಳು ಇಲ್ಲಿ ಚಲಿಸಬೇಕು ಎಂದರೆ ಕೊಂಚ ಅಪಾಯಕಾರಿಯೇ ಸರಿ. ಏಕೆಂದರೆ ಇಲ್ಲಿನ ರಸ್ತೆಗಳು ಉತ್ತಮವಾಗಿದೆಯಾದರು ತುಂಬಾ ಕಿರಿದಾಗಿದ್ದು ಅಷ್ಟೆ ಅಲ್ಲದೆ ಬೆಟ್ಟದ ಮೇಲೆ ಹೋಗುತ್ತಿದ್ದಂತೆ ಮಂಜುಕವಿದ ವಾತವರಣ ನಿರ್ಮಾಣವಾಗಿದ್ದರಿಂದ ಅಪಘಾತದ ಸಂಭವ ಹೆಚ್ಚು. ಹೀಗಾಗಿ ಕಾರಿನಲ್ಲಿ ಚಲಿಸುವವರು ನಿಧಾನವಾಗಿ ಹೋದರೆ ಒಳ್ಳೆಯದು. ಇಲ್ಲಿನ ರಸ್ತೆಯ ಕಡಿದಾದ ತಿರುವಿನಲ್ಲಿ ಕಾರುಗಳು ಚಲಿಸಲು ಕೇವಲ ಉತ್ತಮ ಚಾಲಕನಿದ್ದರೆ ಸಾಲದು.. ಅನುಭವ ಹಾಗೂ ಸಹನೆ ಕೂಡ ಇರಬೇಕು..ಈ ಗಿರಿಯ ತುದಿಯಲ್ಲಿ ಶ್ರೀ ಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿದ ಗದ್ದುಗೆ ಹಾಗೂ ದೇವಾಲಯವಿದೆ.  ಪುಟ್ಟದಾದ ಬಸವನ ಪ್ರತಿಮೆ ಹಾಗೂ ಪಕ್ಕದಲ್ಲಿ ಗುಹೆಯಂತಹ ರಚನೆಯಿದೆ. ಗದ್ದುಗೆ ಇರುವ ಜಾಗವನ್ನು ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳ ಕಾಲ್ನಡಿಗೆಯಲ್ಲಿ ಸಾಗಬೇಕು. ಇನ್ನೂ ಬೆಟ್ಟದ ತುದಿ ತಲುಪುತಿದ್ದಂತೆಯೇ ಮೋಡವನ್ನು ಚುಂಬಿಸುವಷ್ಟರ ಮಟ್ಟಿಗೆ ಮಂಜು ಆವರಿಸುತ್ತದೆ.ಮೋಡಗಳ ನಡುವೆ ಚಲಿಸುತ್ತಿದ್ದರೆ ಸ್ವರ್ಗದ ದಾರಿಯಲ್ಲಿ ಚಲಿಸುತ್ತಿದ್ದೇವೆಯೆ ಎಂಬ ಅನುಭವ ಎದುರಾಗುತ್ತದೆ. ನಮ್ಮ ಪಕ್ಕದಲ್ಲಿರುವ ವ್ಯಕ್ತಿಗಳು ಅಥವಾ ವಸ್ತುಗಳೇ ಕಾಣದಷ್ಟು ಮಂಜು ಆವರಿಸುವ ಮೂಲಕ ನಮ್ಮನ್ನ ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ.

ಇನ್ನೂ ಬೆಟ್ಟದ ತುತ್ತತುದಿಯಲ್ಲಿರುವ ಒಂದೊಂದೆ ಮೆಟ್ಟಿಲುಗಳನ್ನ ಹತ್ತುತ್ತಿದ್ದರೆ ಸುಯ್ಯನೆ ಬೀಸುವ ಗಾಳಿ ಎಲ್ಲಿ ನಮ್ಮನ್ನೆ ಹೊತ್ತೊಯ್ಯುತ್ತದೆಯೋ ಹೊರತು ಎನ್ನುವ ಭೀತಿ ಕೂಡ ಕಾಡಲಾರಂಭಿಸುತ್ತದೆ. ಆಪ್ರಮಾಣದಲ್ಲಿ ಇಲ್ಲಿ ಗಾಳಿ ಬಿರುಸಾಗಿರುತ್ತದೆ.ಈ ವೇಳೆ ನಮಗೆ ಕಾಣಸಿಗುವ ಗಿರಿ-ಕಂದರಗಳು, ಪ್ರಪಾತಗಳು ಭಯದೊಂದಿಗೆ ಅಪೂರ್ವ ಸಂತೋಷವನ್ನು ಕೂಡ ಉಂಟು ಮಾಡುತ್ತದೆ. ಚಾರಣ ಪ್ರಿಯರ ಸ್ವರ್ಗವೆನಿಸಿಕೊಂಡಿರುವ ಮುಳ್ಳಯ್ಯನಗಿರಿ ದಕ್ಷಿಣ ಭಾರತದಲ್ಲೆ ಪ್ರಮುಖ ಚಾರಣ ಸ್ಥಳಗಳಲ್ಲಿ ಒಂದಾಗಿದೆ. ಮುಳ್ಳಯ್ಯನಗಿರಿ ಮಂಗಳೂರಿನಿಂದ ಸುಮಾರು 172 ಕಿ ಮಿ ದೂರದಲ್ಲಿದೆ. ಉಡುಪಿಯಿಂದ 187 ಕಿ.ಮೀ, ಬೆಂಗಳೂರಿನಿಂದ 264 ಕಿ.ಮೀ , ಉಜಿರೆಯಿಂದ 106 ಕಿಮಿ ದೂರದಲ್ಲಿದೆ. ಮುಳ್ಳಯ್ಯನಗಿರಿಗೆ ಮಂಗಳೂರು,ಉಜಿರೆ,ಚಾರ್ಮಡಿ ಮಾರ್ಗವಾಗಿ ಹೋಗಬಹುದು. ಇದಲ್ಲದೆ ಮಂಗಳೂರು, ಕಾರ್ಕಳ,ಕಳಸ,ಬಾಳೆಹೊನ್ನುರು ಮಾರ್ಗವಾಗಿಯೂ ಇಲ್ಲಿಗೆ ತಲುಪಬಹುದು. ಇಲ್ಲಿಗೆ ಸಾಕಷ್ಟು ಸಂಖ್ಯೆಯ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಸೇವೆ ಲಭ್ಯವಿದೆ.ಇಲ್ಲಿಗೆ ಸಾಕಷ್ಟು ಸಂಖ್ಯೆಯ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್‍ಗಳ ಸೇವೆ ಲಭ್ಯವಿದ. ಚಿಕ್ಕಮಗಳೂರು ಜಿಲ್ಲೆಯಿಂದ ಇಲ್ಲಿಗೆ ಬಾಡಿಗೆ ಟ್ಯಾಕ್ಸಿ ವ್ಯವಸ್ಥೆಯು ಇದೆ. ಸ್ವಂತ ವಾಹನಗಳೂ ಇಲ್ಲದ ಮಂದಿ ಬಾಡಿಗೆ ವಾಹನಗಳನ್ನನು ಮಾಡಿಕೊಂಡು ಈ ಸ್ಥಳಗಳನ್ನು ತಲುಪಬಹುದು..

ಊಟ ತಿಂಡಿ ವ್ಯವಸ್ಥೆ ನಿಮ್ಮದೇ ಆಗಿದ್ದರೆ ತುಂಬ ಒಳ್ಳೇಯದು..ಇನ್ನೂ ಈ ಪ್ರವಾಸಿ ತಾಣದಲ್ಲಿ ಊಟದ ವ್ಯವಸ್ಥೆ ಅಷ್ಟು ಸರಿಯಿಲ್ಲ.. ಬೆಟ್ಟಗಳ ಕೆಳಗೆ ಕೆಲವರು ತಿಂಡಿ ತಿನಿಸುಗಳನ್ನ ಮಾರುತ್ತಿರುತ್ತಾರೆ..ಬೆಟ್ಟಗಳ ಮೇಲ್ಬಾಗದಲ್ಲಿ ಯಾವುದೆ ರೀತಿಯ ತಿಂಡಿ ತಿನಿಸುಗಳು ಸಿಗುವುದು ಸ್ವಲ್ಪ ಕಷ್ಟವಾಗಿರುವುದರಿಂದ ಊಟದ ವ್ಯವಸ್ಥೆಯನ್ನು ನೀವು ಮಾಡಿಕೊಂಡು ಹೋದರೆ ತುಂಬಾ ಒಳಿತು.ಸಾಮಾನ್ಯವಾಗಿ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಹೋಗಬಯಸುವವರು ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ ಪ್ರವಾಸಕ್ಕೆ ಅಣಿಯಾಗಬಹುದು. ಆಸಮಯದಲ್ಲಿ ಈ ಮುಳ್ಳಯ್ಯನಗಿರಿ ಚಾರಣಕ್ಕೆ ಸೂಕ್ತ ಸಮಯವಾಗಿದ್ದು ಬಿಸಿಲಿನಲ್ಲಿಯೂ ಕೂಡ ಚಳಿಯ ಅನುಭವ ವಿಶೇಷವಾಗಿರುತ್ತದೆ.ಗಿರಿಯ ತುದಿಯಲ್ಲಿ ಬಿರುಸಾಗಿ ಬೀಸುವ ಗಾಳಿಗೆ ನಾವೆಲ್ಲಿ ಬಿರುಗಾಳಿಗೆ ಸಿಲುಕಿದ್ದೇವೆಯೋ ಎಂಬ ಭೀತಿ ಆವರಿಸುವಂತೆ ಮಾಡುತ್ತದೆ. ಒಟ್ಟಾರೆ ಚಿಕ್ಕಮಗಳೂರಿನ ಈ ಪ್ರಕೃತಿ ದತ್ತ ತಾಣ ಪ್ರವಾಸಿಗರಿಗೆ ಮುದ ನೀಡುವಲ್ಲಿ ಎರಡು ಮಾತಿಲ್ಲ. ಇನ್ನೂ ಚಿಕ್ಕಮಗಳೂರಿನ ಬಗ್ಗೆ ಹೇಳುವುದಾದರೆ ಚಿಕ್ಕಮಗಳೂರು ಎಂದರೆ ಚಿಕ್ಕ ಮಗಳ ನೆಲ ಎಂದರ್ಥ. ಚಿಕ್ಕಮಗಳೂರು ಪಟ್ಟಣವುಅತಿ ಪುರಾತನ ರೀತಿಯದ್ದಾದರೂ ಇದನ್ನ ಅತ್ಯುತ್ತಮ ವಿಶ್ರಾಂತಿ ನೆಲೆ ಎಂದು ವರ್ಣಿಸಲಾಗಿದೆ. ಇದರ ಸುತ್ತಮುತ್ತಲಿನ ಪ್ರದೇಶವು ವಿವಿಧ ಸ್ವರೂಪದ ಭೂಚಿತ್ರಣವನ್ನು ಹೊಂದಿದೆ.

ಇಳಿಜಾರಿನ ಸಮತಟ್ಟಾದ ಭೂಮಿಯಿಂದ ಹಿಡಿದು ಮಲೆನಾಡಿನ ಬೆಟ್ಟದ ಪ್ರದೇಶಗಳು ಇಲ್ಲಿವೆ. ಜಿಲ್ಲೆಯಲ್ಲಿನ ಬೃಹತ್ ಸಂಖ್ಯೆಯ ಕಾಫಿ ತೋಟಗಳನ್ನ ನೇರವಾಗಿ ಕರ್ನಾಟಕದ ಕಾಫಿ ಬಂಡವಾಳವೆಂದು ಪರಿಗಣಿಸಲಾಗಿದೆ. ಪ್ರಸಿದ್ದವಾದ ಮಹಾತ್ಮಗಾಂಧಿ ಉದ್ಯಾನವನವು ಪಟ್ಟಣದ ಪ್ರಮುಖ ಪ್ರವಾಸಿ ತಾಣವಾಗಿದೆ. ಇನ್ನ ಚಿಕ್ಕಮಗಳೂರು ನಿಮಗೆಲ್ಲಾ ಗೊತ್ತಿರೋ ಹಾಗೆ ಕಾಫಿಯನಾಡು ಅಂತಾನೇ ಫೇಮಸ್.. ಎಲ್ಲಿ ನೋಡಿದರೂ ಕೂಡ ಅಲ್ಲಲ್ಲಿ ಕಾಪೀ ತೋಟಗಳು... ಮುಳ್ಳಯ್ಯನಗಿರಿ ನೋಡೋದಕ್ಕೆ ಎಷ್ಟು ಹಿತ ಅನಿಸುತ್ತೋ ಸಾಗುವ ದಾರಿ ಅಷ್ಟೆ ಕಷ್ಟವೂ ಹೌದು.. ಆ ದಾರಿಯಲ್ಲಿ ಚಲಿಸಬೇಕಾದರೆ ಏಕಾಗ್ರತೆ ತುಂಬಾನೇ ಮುಖ್ಯ..

Edited By

Manjula M

Reported By

Manjula M

Comments