ಕರ್ನಾಟಕದ ಈ ಊರಿನಲ್ಲಿ ಇರುವವರಿಗೆಲ್ಲ ಒಂದೇ ಹೆಸರು..! ಯಾವ ಊರು ಗೊತ್ತಾ..?

01 Aug 2018 4:07 PM | General
378 Report

ಇದು ಫ್ಯಾಷನ್ ಲೋಕ..ಎಲ್ಲವೂ ಕೂಡ ಪ್ಯಾಷನ್ ಆಗಿಯೇ ಇರಬೇಕು.. ಅದರಲ್ಲು ಹೆಸರುಗಳಲಂತೂ ತುಂಬಾ ವಿಭಿನ್ನವಾಗಿರುತ್ತವೆ. ಒಂದು ಮನೆಯಲ್ಲಿಯೇ ಒಂದೇ ಹೆಸರು ಇಟ್ಟುಕೊಳ್ಳದ ಇಂದಿನ ಕಾಲದಲ್ಲಿ ಇಡೀ ಊರಿನವರ ಹೆಸರು ಒಂದೇ ಎಂದರೆ ಅಚ್ಚರಿಯಾಗದೆ ಇರದು..ಈ ಊರಿನಲ್ಲಿರುವ ಪ್ರತಿಯೊಬ್ಬರ ಹೆಸರೂ ಕೂಡ ಒಂದೇ ಎಂದರೆ ನೀವು ನಂಬಲೇ ಬೇಕು.. ಈ ಊರು ಇರುವುದು ಕೂಡ ನಮ್ಮ ಕರ್ನಾಟಕದಲ್ಲಿ…

ಈ ರೀತಿ ಊರಿನಲ್ಲಿರುವವರಿಗೆಲ್ಲ ಹೆಸರಿಡುವುದಕ್ಕೂ ಕೂಡ ಒಂದು ಐತಿಹಾಸಿಕ ಹಿನ್ನೆಲೆ ಕೂಡ ಇದೆ ಅದು ಏನಂತ ತಿಳಿದುಕೊಳ್ಳೋಣ. ಬಾಗಲಕೋಟೆ ಜಿಲ್ಲೆಯ, ಬದಾಮಿ ತಾಲೂಕಿನ ಹುಲ್ಲೆಕೆರೆ ಎನ್ನುವ ಗ್ರಾಮಾವೇ ಇದು. ಈ ಗ್ರಾಮದಲ್ಲಿ ಸುಮಾರು 500 ಮನೆಗಳಿವೆ. ಇದೇ ಗ್ರಾಮದಲ್ಲಿ ಗ್ರಾಮ ದೇವತೆಯಾಗಿರುವ ಗದ್ದೆಮ್ಮ ಎನ್ನುವ ದೇವಿಯಿದ್ದು ಇಡೀ ಊರು ಈ ದೇವಿಯನ್ನು ಹೆಚ್ಚು ನಂಬುತ್ತದೆ. ಈ ಊರಿನಲ್ಲಿ ಗಂಡು ಮಗು ಜನಿಸಿದರೆ ಗದ್ದೆಪ್ಪ ಎಂದು ಅದೂ ಹೆಣ್ಣು ಮಕ್ಕಳು ಜನಿಸಿಸದರೆ ಗದ್ದೆಮ್ಮ ಎಂದು ಹೆಸರಿಡುತ್ತಾರೆ.ಈ ಆಧುನಿಕ ಕಾಲದಲ್ಲಿಯೂ ಕೂಡ ಜನ ಈ ಪರಿ ದೇವರನ್ನು ನಂಬುತ್ತಾರೆ ಎನ್ನುವ ಪ್ರಶ್ನೆಗೆ ಈ ಊರೇ ನಿದರ್ಶನವಾಗಿದೆ. ಒಂದೇ ಹೆಸರು ಇಟ್ಟುಕೊಂಡ ಊರು ಭಾತರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿ ಹುಡುಕಿದರೂ ಸಿಗುವುದಿಲ್ಲವೇನೋ. ಆದರೆ ನಮ್ಮ ಕರ್ನಾಟಕದ ಹುಲ್ಲೆಕೆರೆ ಮಾತ್ರ ಈ ಕೀರ್ತಿಗೆ ಪಾತ್ರವಾಗಿದೆ ಎನ್ನಬಹುದು.

Edited By

Manjula M

Reported By

Manjula M

Comments