ಗುಡ್ ನ್ಯೂಸ್ : ರಾಜ್ಯದ ರೈತರಿಗೆ ವಾರದೊಳಗೆ ಸಿಗಲಿದೆ ಸಂತಸದ ಸುದ್ದಿ

29 Jul 2018 9:21 AM | General
7676 Report

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಈ ಕುರಿತ ಆದೇಶ ವಾರದೊಳಗೆ ಹೊರಬೀಳುವ ನಿರೀಕ್ಷೆಯಿದೆ.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಈ ವಿಚಾರವನ್ನು ತಿಳಿಸಿದ್ದು, ಸಹಕಾರಿ ಸಂಸ್ಥೆಗಳಲ್ಲಿರುವ 1 ಲಕ್ಷ ರೂ. ವರೆಗಿನ ರೈತರ ಚಾಲ್ತಿ ಸಾಲ ಮನ್ನಾ ಘೋಷಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಆರ್ಥಿಕ ಇಲಾಖೆ ಆದೇಶ ಹೊರಡಿಸಲಿದೆ ಎಂದಿದ್ದಾರೆ. ರಾಜ್ಯ ಸರ್ಕಾರ ಸಾಲ ಮನ್ನಾದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲು ತೀರ್ಮಾನಿಸಿದ್ದು, ಈ ಕುರಿತು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದಿರುವ ಬಂಡೆಪ್ಪ ಕಾಶೆಂಪುರ, ಅರ್ಹ ರೈತರಿಗೆ ಋಣ ಮುಕ್ತ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.

 

Edited By

Shruthi G

Reported By

Shruthi G

Comments