ಮಾಧ್ಯಮದವರಿಗೆ ಮೂಗುದಾರ ಹಾಕಲು ಮುಂದಾಗುತ್ತಿದೆಯಾ ರಾಜ್ಯ ಸರ್ಕಾರ..!?

27 Jul 2018 4:28 PM | General
465 Report

ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ದೇ ಹೇಳಲಾಗುತ್ತದೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೂ ಹೇಳುತ್ತಾರೆ. ಈಗ ಅದೇ ಕಾವಲು ನಾಯಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗದೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಧಾನ ಸೌಧಕ್ಕೆ ಮಾಧ್ಯಮಗಳಿಗೆ ಪ್ರವೇಶವನ್ನು ನಿರಾಕರಿಸಬೇಕೆಂದು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿಕೆಯನ್ನು ನೀಡಿದ್ದರು.

ರಾಜ್ಯ ರಾಜಧಾನಿಯ ಆಡಳಿತದ ಶಕ್ತಿ ಕೇಂದ್ರಗಳು ಎಂದು ವಿಧಾನ ಸೌಧ, ವಿಕಾಸ ಸೌಧ, ಶಾಸಕರ ಭವನ, ಲೋಕಾಯುಕ್ತ ಕಚೇರಿ ಹಾಗೂ ಉದ್ಯೋಗ ಸೌಧದ ಸುತ್ತಲಿನ ಪ್ರದೇಶಗಳನ್ನು ಸರ್ಕಾರ ಆಡಳಿತಾತ್ಮಕ ಜಿಲ್ಲೆ ಎಂದೇ ಘೋಷಿಸಿದೆ. ಇದೇ ಕಾರಣದಿಂದಾಗಿ ವಲಯಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿಕೊಡಲಾಗಿದೆ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ನಂತರ ವಿಧಾನ ಸೌಧದಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಇದೇ ಸಂಬಂಧ ಮಾಜಿ ಮತ್ತು ಹಾಲಿ ಸಿಎಂ ನಡುವೆ ಸಾಕಷ್ಟು ಚರ್ಚೆಯನ್ನೂ ಹಾಕಿತ್ತು. ದಲ್ಲಾಳಿಗಳ ಕಾಟವನ್ನು ತಡೆಯುವ ಸಲುವಾಗಿ ಹಾಗೂ ಸಾರ್ವಜನಿಕರ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ.ಏಕೆಂದರೆ ಕಂಡ ಕಂಡ ಕಡೆ ಮಾಧ್ಯಮದವರು ಮೈಕ್ ಹಿಡಿದುಕೊಂಡು ಓಡಾಡುವುದು ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡುತ್ತಿದೆ ಎಂಬ ಕಾರಣವನ್ನೂ ನೀಡಲಾಗಿತ್ತು. ಆದರೆ ಸಂಬಂಧ ಸಮ್ಮಿಶ್ರ ಸರ್ಕಾರದಲ್ಲಿ ಒಂದಷ್ಟು ಅಪಸ್ವರವೂ ಕೇಳಿ ಬಂದಿತ್ತು. ವಿರೋಧ ಪಕ್ಷವಾದ ಬಿಜೆಪಿಯೂ ಕೂಡ ಸಂಬಂಧ ಚಕಾರವನ್ನು ಎತ್ತಿತ್ತು. ಹಾಗಾಗಿ ಪ್ರಸ್ತುತ ನಿಯಮವನ್ನು ಜಾರಿಗೊಳಿಸುವ ಮುನ್ನಾ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಮಾಲೋಚನಾ ಸಭೆಯನ್ನು ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎನ್ನಲಾಗುತ್ತಿದೆ.

Edited By

Manjula M

Reported By

Manjula M

Comments