ಬಿಗ್ ಬ್ರೇಕಿಂಗ್:ರಾಜ್ಯ ಸರ್ಕಾರದಿಂದ ರೈತರಿಗೆ ಸಿಗಲಿದೆ 3 ಲಕ್ಷ ರೂ..! ಯಾವ ಬ್ಯಾಂಕ್’ಗಳಲ್ಲಿ ಗೊತ್ತಾ..?

26 Jul 2018 10:53 AM | General
14756 Report

ಸಮ್ಮಿಶ್ರ ಸರ್ಕಾರ ಬಂದ ಮೇಲೆ ರೈತರ ಸಾಲಮನ್ನಾ ವಿಷಯವಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ರೈತರ ಸಾಲಮನ್ನಾದ ಬಹುದೊಡ್ಡ ಹೊರೆ ನಡುವೆಯೂ ಕೂಡ ರಾಜ್ಯ ಸರ್ಕಾರ ಹೊಸ ಸಾಲ ನೀಡಲು ಆದೇಶ ಹೊರಡಿಸಿರುವುದು ರೈತರಿಗೆ ಖುಷಿ ತಂದಿದೆ.

ರೈತರಿಗೆ 3 ಲಕ್ಷದವರೆಗಿನ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡಲು ಸಹಕಾರ ಸಂಘಗಳಿಗೆ ಈಗಾಗಲೇ ಸೂಚಿಸಿದೆ. ರೈತರ ಸಾಲಮನ್ನಾದ ಇದೀಗ ಒಂದು ಹಂತಕ್ಕೆ ತಲುಪಿದೆ.  ಈ ಮೂಲಕ ಹೊಸ ಸಾಲದ ಚಿಂತನೆಗೂ ಕೂಡ ಸರ್ಕಾರ ತೆರೆ ಎಳೆದಿರುವುದು ರೈತರಿಗೆ ಸಿಹಿಸುದ್ದಿ ನೀಡಿದಂತಾಗಿದೆ. ಇದಲ್ಲದೇ ರೈತರಿಗೆ 3 ಲಕ್ಷದವರೆಗಿನ ಶೂನ್ಯ ಬಡ್ಡಿ ದರದ ಬೆಳೆ ಸಾಲ ನೀಡಲು ಸಹಕಾರ ಸಂಘಗಳಿಗೆ ಸರ್ಕಾರ ಸೂಚನೆ ನೀಡಿದ್ದು ಇದೇ ವೇಳೆ 3 ಲಕ್ಷಕ್ಕಿಂತ ಜಾಸ್ತಿ ಸಾಲಗಳ ಸಂಪೂರ್ಣ ಮೊತ್ತಕ್ಕೆ ಸಾಮಾನ್ಯ ಬಡ್ಡಿ ದರವನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. 2018 ಏಪ್ರಿಲ್ 1ರಿಂದ 2019 ಮಾರ್ಚ್ 31ರವರೆಗೆ ನೀಡಲಾಗುವ ಕೃಷಿ ಅಲ್ಪಾವಧಿ ಸಾಲಗಳಿಗೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗಲಿದೆ ಎನ್ನಲಾಗಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸಹಕಾರ ಸಂಘಗಳ ನಿಬಂಧಕರು ಈ ಯೋಜನೆಯ ಅಡಿ ಅರ್ಹ ಎಂದು ಗುರುತಿಸುವ ಇತರ ಸಹಕಾರ ಸಂಘಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಟಿಬೇಟಿಯನ್ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿ ದರ ಸಾಲ ದೊರೆಯಲಿದೆ ಸಿಗಲಿದೆ.

Edited By

Manjula M

Reported By

Manjula M

Comments