ಇಂದು ಕಾರ್ಗಿಲ್ ವಿಜಯೋತ್ಸವದ ಸಂಭ್ರಮ..!

26 Jul 2018 9:57 AM | General
281 Report

ಅಂದು ೧೯೯೯ ರ ಜುಲೈ ೨೬ ಆದಿನ "ಭಾರತ ಗೆದ್ದಿತ್ತು" ಅಮೇರಿಕಾದ ಎದೆಯಲ್ಲಿ ನಡುಕ ಹುಟ್ಟಿತ್ತು,ಪಾಕಿಸ್ತಾನ ಎಂಬ ಪಾಪಿಸ್ತಾನ ಮಕಾಡೆ ಮಲಗಿತ್ತು. Operation_Vijay ಯಶಸ್ವಿಯಾಗಿತ್ತು, ಭಾರತದ ಸೇನಾ ಶಕ್ತಿಯ ದರ್ಶನ ವಿಶ್ವದ ಅದೆಷ್ಟೋ ರಾಷ್ಟ್ರಗಳಿಗೆ ನಡುಕ ಹುಟ್ಟಿಸಿತ್ತು. ಆದರೆ ಭಾರತೀಯರು ನಾವು ಕಾಶ್ಮೀರ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ಫಲ ನೀಡಿತ್ತು.

ಅದೆಷ್ಟೋ ಜನ ಸೈನಿಕರು ಪ್ರಾಣವನ್ನೇ ಭಾರತಮಾತೆಗೆ ಅರ್ಪಿಸಿದ್ದರು. ದೇಶಕ್ಕಾಗಿ ತಮ್ಮ ಅಮೂಲ್ಯ ಪ್ರಾಣವನ್ನೇ ಒತ್ತೆ ಇಟ್ಟು ಹೋರಾಡಿದರು.ಅಂದಿನ ಪ್ರಧಾನಿ ಅಟಲ್ ಜಿ ಮತ್ತು ರಕ್ಷಣಾ ಮಂತ್ರಿ ಜಾರ್ಜ್ಪ ಪರ್ನಾಂಡೀಸ್ ಗಟ್ಟಿ ನಿರ್ದಾರಗಳು ಸೈನಿಕರಲ್ಲಿ ಹಂತ ಹಂತವಾಗಿ ಧೈರ್ಯ ತುಂಬುತ್ತಿತ್ತು. ಅಹಂಕಾರಿ ಪರ್ವೇಜ್ ಮುಷರಪ್ ನ ಅಧಿಪತ್ಯ ಮತ್ತು ಅಹಂಕಾರ ಕುಸಿದು ಬಿದ್ದಿತ್ತು.ಇಡೀ ಭಾರತ ದೇಶದ ಜನರುಗಳ ಹಾರೈಕೆ ಮತ್ತು ಪ್ರೀತಿ ಸೈನಿಕರಿಗೆ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಿತ್ತು.ಜುಲೈ ೨೬,೧೯೯೯ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನಾವಾಯ್ತು. ಗೆಳೆಯರೇ ಬನ್ನಿ ಈ ಒಂದುದಿನವನ್ನು ಹಬ್ಬದಂತೆ ಆಚರಿಸೋಣ, ಪ್ರತೀ ಮನೆಯಲ್ಲಿಯೂ ಗೆಲುವಿನ ದೀಪ ಹಚ್ಚೋಣ.ಯುದ್ದದಲ್ಲಿ ಮಡಿದ ಆ ಸೈನಿಕರ ಅತ್ಮಗಳಿಗೆ ಭಾವಪೂರ್ಣ ನಮನ ಸಲ್ಲಿಸೋಣ. ಗೆಳೆಯರೇ ಈ ದೇಶಕ್ಕಾಗಿ ಮಡಿದ ನಮ್ಮ ಸೈನಿಕರ ಹೆಸರ ನೆನಪಿಸಿ ಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲರಿಗೂ ಕಾರ್ಗಿಲ್ ವಿಜಯೋತ್ಸವದ ಶುಭಾಷಯಗಳು

Edited By

Manjula M

Reported By

Manjula M

Comments