ರಾಜ್ಯದ ಜನತೆಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್..! ಏನ್ ಗೊತ್ತಾ..?

25 Jul 2018 5:41 PM | General
7185 Report

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಮೊದಲು ಇದ್ದ ಬಜೆಟ್‌ನಲ್ಲಿ 2 ಕೆಜಿ ಅಕ್ಕಿಯನ್ನು ಕಡಿತ ಮಾಡಲಾಗಿತ್ತು, ಇದು ಸಮ್ಮಿಶ್ರ ಸರ್ಕಾರದಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಬಹುತೇಕ ಮಂದಿ ಸಿಎಂ ಕುಮಾರಸ್ವಾಮಿಯವರ ಅಕ್ಕಿ ಕಡಿತದ ನಿರ್ಧಾರಕ್ಕೆ ಬಹಿರಂಗವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ  ಜಮ್ಮೀರ್ ಆಹ್ಮದ್ ಮತ್ತು ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ನಡುವೆ ಮಾತಿನ ಚಕಮಕಿಗೂ ಕೂಡ ಕಾರಣವಾಗಿತ್ತು. ಇದಲ್ಲದೇ ಸಚಿವ ಜಮ್ಮೀರ್ ಆಹ್ಮದ್ ನಾವು 5 ಕೆಜಿ ಅಕ್ಕಿ ನೀಡೋದಿಲ್ಲ ಮೊದಲಿನ ಹಾಗೇ 7 ಕೆ ಜಿ ಅಕ್ಕಿ ನೀಡುವುದಾಗಿ ಹೇಳಿದ್ದರು. ಸಿಎಂ ಕುಮಾರಸ್ವಾಮಿ ಕೊನೆಗೂ ಸಚಿವ ಜಮ್ಮೀರ್ ಅವರ ಒತ್ತಡಕ್ಕೆ ಮಣಿದು 7 ಕೆಜಿ ಅಕ್ಕಿಯನ್ನು ನೀಡುವುದಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದಾರೆ  ಎನ್ನಲಾಗಿದೆ.

Edited By

Manjula M

Reported By

Manjula M

Comments