ನಿಮ್ಮ ವಯಸ್ಸಿಗೆ ತಕ್ಕಂತೆ ನಿದ್ದೆ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ..!

25 Jul 2018 5:16 PM | General
275 Report

ಪ್ರತಿಯೊಬ್ಬ ಮಾನವನಿಗೂ ಮೂಲಭೂತ ಸೌಕರ್ಯಗಳು ಅವಶ್ಯಕ. ಅದರಂತೆ ಗಾಳಿ, ನೀರು, ನಿದ್ದೆ, ಆಹಾರ ಕೂಡ ಅತ್ಯವಶ್ಯಕ. ಇವುಗಳಲ್ಲಿ ಒಂದಿಲ್ಲ ಎಂದರೂ ಬದುಕಲಾರ ಹಾಗೂ ಒಂದರಲ್ಲಿ ವ್ಯತ್ಯಾಸವಾದರೂ  ಅವನ ಆರೋಗ್ಯ ಕೆಡುತ್ತದೆ.

ನಾವು ಆರೋಗ್ಯದಿಂದ ಇರಲು, ನಮ್ಮ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವಲ್ಲಿ ನಿದ್ದೆಯ ಪಾತ್ರ ದೊಡ್ಡದು. ಸಾಮಾನ್ಯವಾಗಿ ಬಹಳಷ್ಟು ಜನ 7 ರಿಂದ 8 ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕೆಂದು ಹೇಳುತ್ತಾರೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಅವರವರ ವಯಸ್ಸಿಗೆ ತಕ್ಕಂತೆ ನಿದ್ದೆ ಮಾಡುವುದು ಅವಶ್ಯಕ. ತಜ್ಞರ ಪ್ರಕಾರ ಯಾವ ವಯಸ್ಸಿನ ವ್ಯಕ್ತಿ ಎಷ್ಟು ಗಂಟೆ ನಿದ್ದೆ ಮಾಡಬೇಕು ಎನ್ನುದನ್ನು ನಾವಿಲ್ಲಿ ತಿಳಿಸಿಕೊಡುತ್ತಿದ್ದೇವೆ. ನೋಡಿ ಇಂದಿನಿಂದಲೇ ಇದನ್ನ ಅನುಸರಿಸಿ ನಿಮ್ಮ ಆರೋಗ್ಯವನ್ನ ವೃದ್ಧಿಸಿಕೊಳ್ಳಿ.

  • ನವಜಾತ ಶಿಶುವಿಂದ ಮೂರು ತಿಂಗಳವರೆಗೂ ದಿನಕ್ಕೆ 14 ರಿಂದ 17 ಗಂಟೆಗಳ ನಿದ್ದೆ ಅತ್ಯವಶ್ಯಕ.
  • 4 ರಿಂದ 11 ತಿಂಗಳ ಮಕ್ಕಳು 12 ರಿಂದ 15 ಗಂಟೆಗಳ ಕಾಲ ನಿದ್ದೆ ಮಾಡಬೇಕು.
  • 1 ರಿಂದ 2 ವರ್ಷದ ಒಳಗಿನ ಮಕ್ಕಳು 11 ರಿಂದ 14 ಗಂಟೆಗಳ ಕಾಲ ನಿದ್ದೆ ಮಾಡುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
  • 3 ರಿಂದ 5 ವರ್ಷದ ಒಳಗಿನ ಮಕ್ಕಳು 10 ರಿಂದ 13 ಕಾಲ ನಿದ್ದೆ ಮಾಡಬೇಕು.
  • 6 ರಿಂದ 13 ವರ್ಷದ ಮಕ್ಕಳು 9 ರಿಂದ 11 ನಿದ್ದೆ ಮಾಡುವುದು ಉತ್ತಮ.
  • 14 ರಿಂದ 17 ವರ್ಷದ ಮಕ್ಕಳು ದಿನಕ್ಕೆ ಕನಿಷ್ಠ 8 ರಿಂದ 10 ಘಂಟೆಗಳ ಕಾಲ ನಿದ್ದೆ ಮಾಡಬೇಕು.
  • 18 ರಿಂದ 25 ವರ್ಷದ ಯುವಕರು 7 ರಿಂದ 9 ಗಂಟೆಗಳ ಸಮಯ ನಿದ್ದೆ ಮಾಡಬೇಕಾಗುತ್ತದೆ.
  • 26 ರಿಂದ 64 ವರ್ಷ ವಯಸ್ಸಿನವರು 7 ರಿಂದ 9 ಗಂಟೆಗಳ ನಿದ್ದೆ ಮಾಡುವುದು ಉತ್ತಮ.
  • 65 ವರ್ಷ ಮೇಲ್ಪಟ್ಟವರು ದಿನಕ್ಕೆ 7 ರಿಂದ 8 ಗಂಟೆಗಳ ನಿದ್ದೆ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ತಜ್ಣರು ಹೇಳುತ್ತಾರೆ.

Edited By

Manjula M

Reported By

Manjula M

Comments