ತ್ರಿವಳಿ ತಲಾಖ್ ನಿಂದ ಪುರುಷರು ಹೆಂಡತಿಯರನ್ನು ಕೊಲ್ಲುವುದು ತಪ್ಪುತ್ತದೆ ಎಂದು ಹೇಳಿದ ಎಸ್’ಪಿ ನಾಯಕ..!

24 Jul 2018 1:30 PM | General
357 Report

ತ್ರಿವಳಿ ತಲಾಖ್ ವಿವಾದವು ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಪಕ್ಷದ ಅಲ್ಪಸಂಖ್ಯಾತ ಸಮಿತಿಯ ಮುಖ್ಯಸ್ಥರಾಗಿರುವ ಎಸ್ಪಿ ನಾಯಕ ರಿಯಾಜ್ ಅಹ್ಮದ್, ‘ಪತ್ನಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾನೂನುಬಾಹಿರ ಸಂಬಂಧ ಹೊಂದಿದ್ದರೆ, ಆಕೆಯ ಪತಿ ಅವಳನ್ನು ಕೊಲ್ಲುವುದು ಅಥವಾ ತ್ರಿವಳಿ ತಲಾಕ್ ನೀಡಬಹುದು’ ಎಂದು ಹೇಳಿದರು.

ಮೂರು ಹಂತಗಳಲ್ಲಿ ತಲಾಕ್ ಅನ್ನು ನೀಡಬೇಕೆಂದು ಶರಿಯಾತ್ ತಿಳಿಸಿದ್ದಾರೆ. ಆದರೆ ತ್ರಿವಳಿ ತಲಾಕ್ ಅನ್ನು ಆಯ್ಕೆಯಾಗಿ ಇರಿಸಲಾಗಿದೆ. ಉದಾಹರಣೆಗೆ, ನಿಮ್ಮ ಹೆಂಡತಿಯನ್ನು ಕಾನೂನುಬಾಹಿರ ಸಂಬಂಧ ರೀತಿಯಲ್ಲಿ ಕಂಡರೆ ಏನು ಮಾಡುತ್ತೀರಿ? ನೀವು ಅವಳನ್ನು ಕೊಲ್ಲುತ್ತಿರಾ ಅಥವಾ ಅವಳನ್ನು ಬಿಟ್ಟು ಬಿಡಲು ತ್ರಿವಳಿ ತಲಾಕ್ ಅನ್ನು ಕೊಡುತ್ತೀರಾ "ಎಂದು ಅಹ್ಮದ್ ತಿಳಿಸಿದ್ದಾರೆ.ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿಚ್ಛೇದನ ಪ್ರಮಾಣವನ್ನು ಹೋಲಿಸಿದರೆ, ಹಿಂದೂಗಳ ಪೈಕಿ ವಿಚ್ಚೇದನ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದಿದ್ದಾರೆ, ಆದರೆ ತ್ರಿವಳಿ ತಲಾಕ್  ಮಾತ್ರ ಎಲ್ಲರ ಗಮನ ಸೆಳೆದಿದೆ ಎನ್ನುತ್ತಾರೆ.ಮಹಿಳಾ ಮೀಸಲಾತಿ ಮಸೂದೆ ಅಡಿಯಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಎಸ್ ಪಿ ಮುಖಂಡರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಸುಪ್ರೀಂಕೋರ್ಟ್ ಕಳೆದ ವರ್ಷ ಅಂದರೆ ಆಗಸ್ಟ್ ನಲ್ಲಿ ತ್ರಿವಳಿ ತಲಾಖ್ ಅನ್ನು ಅಸಂವಿಧಾನಿಕ ಎಂದು ಘೋಷಣೆ ಮಾಡಿತ್ತು.

Edited By

Manjula M

Reported By

Manjula M

Comments