ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸಿಕ್ತು ಬಂಪರ್ ಆಫರ್..! 

23 Jul 2018 3:56 PM | General
7212 Report

ರಾಜ್ಯ ಸರ್ಕಾರವು ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ, ಕೇವಲ 4,500 ರೂಪಾಯಿಗೆ ಮೈಸೂರು ಸಿಲ್ಕ್ ಸೀರೆಯನ್ನು ಮಾರಾಟ ಮಾಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಅವರು ಕೆಲ ದಿವಸಗಳ ಹಿಂದೆಯೇ ತಿಳಿಸಿದ್ದರು.  

ಗ್ರಾಹಕರಿಗೆ ಒಂದೆ ಒಂದು ಸೀರೆ ಮಾತ್ರ ಸಿಗುವ ಉದ್ದೇಶದಿಂದ ಸೀರೆ ಕೊಳ್ಳುವ ಪ್ರತಿ  ಗ್ರಾಹಕರು ಆಧಾರ್‍ ಸಂಖ್ಯೆಯನ್ನು ನೀಡಿ ಸೀರೆ ಖರೀದಿ ಮಾಡಬೇಕೆಂದು ಸಚಿವ ಸಾ.ರಾ. ಮಹೇಶ್ ಅವರು ಹೇಳಿದ್ದಾರೆ. ಸರ್ಕಾರ ನೀಡುತ್ತಿರುವ ಈ ಭರ್ಜರಿ ಆಫರ್ ಅನ್ನು ಎಲ್ಲರು ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಸಚಿವರು ಸೀರೆ ತೆಗೆದುಕೊಳ್ಳುವವರಿಗೆ ಆಧಾರ್ ಕಡ್ಡಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 

Edited By

Manjula M

Reported By

Manjula M

Comments