ಸುಪ್ರಿಂಕೋರ್ಟ್’ನಿಂದ  ವಾಹನ ಮಾಲೀಕರಿಗೆ ಸಿಹಿಸುದ್ದಿ..! ಏನ್ ಗೊತ್ತಾ..?

23 Jul 2018 12:10 PM | General
14628 Report

ಅಪಘಾತವಾದ ವೇಳೆಯಲ್ಲಿ  ಮೂರನೇ ವ್ಯಕ್ತಿ ಮೃತಪಟ್ಟರೆ ಅವರ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗದಿರುವ ಹಿನ್ನಲೆಯಲ್ಲಿ ಇದೀಗ ಸುಪ್ರಿಂಕೋರ್ಟ್ ಮೃತರಿಗೆ ಸಹಾಯ ಮಾಡಲು ನೆರವಾಗಿದೆ.

ದ್ವಿಚಕ್ರ ಸೇರಿದಂತೆ ಎಲ್ಲಾ ವಾಹನಗಳಿಗೂ ಮೂರನೇ​ ಪಾರ್ಟಿ ವಿಮೆ ಕಡ್ಡಾಯ ಎಂದು ಸುಪ್ರೀಂಕೋರ್ಟ್​ ಆದೇಶವನ್ನು ಹೊರಡಿಸಿದೆ . ರಸ್ತೆ ಅಪಘಾತದಲ್ಲಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಸಮಿತಿ ವರದಿಯನ್ನು ಆಧಾರಿಸಿ ಸುಪ್ರೀಂಕೋರ್ಟ್ ಈ ಆದೇಶವನ್ನು ಹೊರಡಿಸಿದೆ ಎಂದು ತಿಳಿದುಬಂದಿದೆ. ನಿವೃತ್ತ ನ್ಯಾಯಮೂರ್ತಿಗಳಾದ ಕೆ.ಎಸ್​ ರಾಧಕೃಷ್ಣನ್​​ ನೇತೃತ್ವದ ನ ಸಮಿತಿಯೂ ಯಾವುದೇ ಕಂಪನಿಯೂ ಗ್ರಾಹಕರಿಗೆ ದ್ವಿಚಕ್ರ ಮತ್ತು ಇತರೆ ವಾಹನಗಳನ್ನು ಮಾರಾಟ ಮಾಡುವಾಗಲೂ ಸಹ ಮೂರನೇ ಪಾರ್ಟಿ ವಿಮೆ ಕಡ್ಡಾಯಗೊಳಿಸಬೇಕು. ಅಷ್ಟೆ ಅಲ್ಲದೇ ಮೂರನೇ ಪಾರ್ಟಿ ವಿಮೆಯನ್ನು ಒಂದು ವರ್ಷದ ಬದಲಿಗೆ, 3 ಮತ್ತು 5 ವರ್ಷಕ್ಕೊಮ್ಮೆ ಮಾಡಿಸಬೇಕು ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments