SSLC ಪಾಸ್  ಹಾಗಿದ್ಯ..? ಹಾಗಾದ್ರೆ ಸಿಕ್ತು ಅನ್ಕೊಳ್ಳಿ 30000 ರೂ..!!

22 Jul 2018 3:54 PM | General
9527 Report

ದೇಶದಲ್ಲಿ ಪ್ರತಿಭಾವಂತ ಯುವಕರಿದ್ದರೂ ಜನಸಂಖ್ಯೆ ಮತ್ತು ಆರ್ಥಿಕ ಸ್ಥಿತಿಗತಿಯ ಕಾರಣ ನಿರುದ್ಯೋಗ ಎನ್ನುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದೇ ಮಾದರಿಯಲ್ಲಿ ಇದೀಗ ಬ್ಯಾಂಕುಗಳು ಕೂಡ ಈ ರೀತಿ ವ್ಯವಸ್ಥೆ ಮಾಡಿವೆ.

ಹೌದು..ಸರ್ಕಾರಿ ಬ್ಯಾಂಕುಗಳು CSP (customer service point) ಅಥವಾ ಸಿಂಪಲ್ ಆಗಿ ಬ್ಯಾಂಕ್ ಮಿತ್ರ ಎನ್ನುವ ಹೊಸ ಉದ್ಯೋಗವೊಂದನ್ನು ಸೃಷ್ಟಿಸಿದೆ. ಈ ಮೂಲಕ 18 ವರ್ಷ ದಾಟಿದ ಮತ್ತು SSLC ಪಾಸ್ ಅದ ಮತ್ತು ಸ್ವಲ್ಪ ಕಂಪ್ಯೂಟರ್ ಜ್ಞಾನವುಳ್ಳ ಯಾವುದೇ ವ್ಯಕ್ತಿ ಕೂಡ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡು ಬ್ಯಾಂಕ್ ನ ಏಜೆಂಟ್ ರೇಪ್ರಸೆಂಟಿವ್ ರೀತಿಯಲ್ಲಿ ಕೆಲಸ ಮಾಡಬಹುದಾಗಿದೆ. ನೀವು ಮಾಡಬೇಕಾದ ಕೆಲಸವೇನೆಂದರೆ, ಕೆಲ ಬ್ಯಾಂಕಿಂಗ್ ಸೇವೆಗಳಾದ ಖಾತೆ ತೆರೆಯುವುದು, ಹಣ ಕಟ್ಟುವುದು, ಮತ್ತು ತೆಗೆಯುವುದು..ಇದಕ್ಕೆ ಯಾವುದೇ ಅನುಭವ ಕೂಡ ಬೇಕಿಲ್ಲ. ಕಂಪ್ಯೂಟರ್, ಇಂಟರ್ನೆಟ್ ಹಾಗೂ ಒಂದು 100sq ft ಆಫೀಸಿನ ಜಾಗ ಇದ್ದರೆ ಸಾಕು, ಈ ಸೌಲಭ್ಯಕ್ಕೆ ಬ್ಯಾಂಕ್ ಕೂಡ ನಿಮಗೆ ಸಾಲವನ್ನು ನೀಡುತ್ತದೆ, ಇದಕ್ಕೆ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಬಳಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವಾಸ್ತವ್ಯ ಪ್ರಮಾಣ ಪತ್ರ, ಡ್ರೈವಿಂಗ್ ಲೈಸನ್ಸ್, ಪೊಲೀಸರಿಂದ ನಡತೆ ಪ್ರಮಾಣ ಪತ್ರ, ವೋಟರ್, ಮತ್ತು ಬ್ಯಾಂಕ್ ವಿವರ ಮತ್ತು ಫೋಟೋಗಳು ನಿಮ್ಮ ಬಳಿ ಇರಬೇಕು ಹಾಗೆ ಒಂದು ಚೆಕ್ ಬುಕ್ ಕೂಡ ಇರಬೇಕು. ಈ ಸೇವಾ ಕೇಂದ್ರದಲ್ಲಿ ಬ್ಯಾಂಕಿಗ್ ಸೌಲಭ್ಯ ಅಲ್ಲದೆ ಇನ್ಸುರೆನ್ಸ್, ಕಿಸಾನ್ ಕಾರ್ಡ್, ಜನ್ ಧನ್ ಖಾತೆ, ಹಾಗೂ FD, ಮುಂತಾದ ಸೇವೆಗಳನ್ನು ಕೂಡ ನೀಡಬಹುದು. ಇಲ್ಲಿ ದಿನನಿತ್ಯ ಎಷ್ಟು ವ್ಯವಹಾರ ನಡೆಯುತ್ತದೆ ಅದರ ಮೇಲೆ ನಿಮಗೆ ಕಮಿಷನ್ ಕೂಡ ಸಿಗುತ್ತದೆ, ಈಗಾಗಲೇ ಹಲವಾರು ಮಂದಿ ಈ ಸೇವೆಯನ್ನ ಪಡೆದುಕೊಂಡಿದ್ದಾರೆ, ಅರ್ಜಿ ಸಲಿಯಿಸಲು ಮತ್ತು ನಿಮ್ಮ ಸಂಬಳದ ಸಂಪೂರ್ಣ ಮಾಹಿತಿಗಾಗಿ bankmitra.org website ಗೆ ಭೇಟಿ ಮಾಡಿ ಸಂಪೂರ್ಣ ವಿವರ ಪಡೆದುಕೊಳ್ಳಿ ಈ ಮಾಹಿತಿ ಇಷ್ಟವಾಗಿದ್ರೆ ಯುವಜನತೆಗೆ ತುಲುಪಿಸಿ.

Edited By

Shruthi G

Reported By

Shruthi G

Comments