ನಗು ನಗುತಾ ಜೀವನ ಸಾಗಿಸಿದರೆ  ಕಾಯಿಲೆಗಳಿಗೆ ಹೇಳಬಹುದು ಗುಡ್ ಬೈ..!

21 Jul 2018 3:58 PM | General
464 Report

ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ | ನಗುವ ಕೇಳುತ ನಗುವುದಶಿಯದ ಧರ್ಮ || ನಗುವ ನಗಿಸುವ ನಗಿಸಿ ನಗುತ ಬಾಳುವ ವರವ | ಮಿಗೆನೀನು ಬೇಡಿಕೊಳೊ ಮಂಕುತಿಮ್ಮ || ನಗುತ್ತಾ ಜೀವನವನ್ನು ನಡೆಸುವುದು ಸಹಜವಾದ ಧರ್ಮ. ಇತರರನ್ನು ನಗಿಸುವುದು ಉತ್ತಮವಾದ ಧರ್ಮವಾಗುತ್ತದೆ. ನಗುವನ್ನು ಕೇಳುತ್ತಾ ಇರುವುದು ಅತಿಶಯವಾದ ಗುಣ. ನಗುತ್ತಾ ಜೀವನವನ್ನು ಸಾಗಿಸಿ ಇತರರನ್ನು ನಗಿಸಿ ತಾನೂ ನಗುತ್ತಾ ಬಾಳುವವರನ್ನು ಅಧಿಕವಾಗಿ ನೀಡೆಂದು ದೇವರಲ್ಲಿ ಬೇಡಿಕೊ ಎಂದಿದ್ದಾರೆ ಮಾನ್ಯ ಗುಂಡಪ್ಪನವರು.

ನಗುವೇ ಎಲ್ಲದಕ್ಕೂ ಔಷಧಿ. ನಗುತ್ತಾ ಜೀವನ ಸಾಗಿಸಿದರೆ ಜೀವನದಲ್ಲಿ ಎಲ್ಲವೂ ಸಲೀಸು ಎನಿಸುತ್ತದೆ. ಅದೇನೇ ಕಷ್ಟ ಸುಖ ಬಂದರೂ ಜೀವನದಲ್ಲಿ ಮನಸಾರೆ ಸುಮ್ಮನೆ ನಕ್ಕುಬಿಡಿ. ಕ್ಷಣ ಮಾತ್ರದಲ್ಲಿ ಎಲ್ಲಾ ಕಷ್ಟಗಳು ಮಾಯವಾದಂತೆ ಬಾಸವಾಗುತ್ತದೆ. ಮುಖ ಸಣ್ಣಗೆ ಮಾಡಿಕೊಂಡಿರಬೇಡಿ. ಸುಮ್ಮನೇ ಮನಸಾರೆ ನಕ್ಕುಬಿಡಿ.ಇಂದು ನಗಲಿಕ್ಕಾಗಿಯೇ ಲಾಫ್ಟರ್ ಕ್ಲಬ್ ಗಳಿಗೆ ಹೋಗುತ್ತಾರೆ. ಅಲ್ಲಿ ಹೋಗಿ ಅಸಹಜವಾಗಿ ನಗುವುದರಿಂದ ಮನಸ್ಸಿನ ಕಷ್ಟ ನಿವಾರಣೆಯಾಗುವುದಿಲ್ಲ. ಬದಲಾಗಿ ಒಮ್ಮೆ ಮುಕ್ತ ಮನಸ್ಸಿನಿಂದ ನಕ್ಕುಬಿಡಿ. ಆಗ ಮನಸ್ಸಿಗೆ ಆಗುವ ಸಂತೋಷವನ್ನು ನೀವೇ ಅನುಭವಿಸಿ.ವಾಟ್ಸಾಪ್, ಫೇಸ್ ಬುಕ್ ನಲ್ಲಿ ಬರುವ ಕಾಮಿಡಿಗಳನ್ನು ನೋಡಿ ಅಥವಾ ಓದಿ ಮನಸಾರೆ ನಗಿ. ನಗುವುದಕ್ಕಾಗಿಯೇ ಪ್ರಸಾರವಾಗುವ ಕಾಮಿಡಿ ಶೋಗಳನ್ನು ನೋಡಿ ಒಂದು ಸಣ್ಣ ಸ್ಮೈಲ್ ಮಾಡಿ ಸಾಕು. ಆರೋಗ್ಯ ವೃದ್ಧಿಯಾಗುತ್ತದೆ.ಅಷ್ಟೇ ಅಲ್ಲದೇ, ನಗುವುದರಿಂದ ಸಾಕಷ್ಟು ಅನುಕೂಲಗಳೂ ಇವೆ.ಹೆಚ್ಚು ನಗುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮ ಬಳಿ ಸಾರುವುದಿಲ್ಲ.ಕೆಲಸ ಮಾಡುವಾಗ ಒತ್ತಡ ಇದ್ದೇ ಇರುತ್ತದೆ. ಒತ್ತಡದ ಮಧ್ಯೆ ಒಮ್ಮೆ ನಕ್ಕುಬಿಡಿ. ಎಷ್ಟೋ ಹಗುರವೆನಿಸುತ್ತದೆ.ನಕ್ಕಾದ ಮುಖದ ಸ್ನಾಯುಗಳಿಗೂ ವ್ಯಾಯಾಮವಾಗುತ್ತದೆ.ಇನ್ನೊಂದು ಟಿಪ್ ಏನೆಂದರೆ ಪ್ರತಿದಿನ ನಿಮಗೆ ವ್ಯಾಯಾಮ ಮಾಡಲು ಆಗದಿದ್ದರೆ ಹೊಟ್ಟೆ ನೋವಾಗುವಷ್ಟು ನಕ್ಕು ಬಿಡಿ ಅಂದಿನ ವ್ಯಾಯಾಮ ಮಾಡಿದಂತಾಗುತ್ತದೆ.ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದರೆ ಅಥವಾ ರಕ್ತದಲ್ಲಿ ಪ್ಲೇಟಲೇಟ್ ಕಡಿಮೆಯಾಗಿದ್ದರೆ ಇಮ್ಯೂನಿಟಿ ಪವರ್ ಹೆಚ್ಚು ಮಾಡಲು ಕೂಡ ಸಹಕಾರಿಯಾಗಿದೆ.ಅಂದರೆ ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ಒದಗಿಸುವ ಶಕ್ತಿ ನಗುವಿಗಿದೆ. ಜೋರಾಗಿ ನಕ್ಕರೆ ದೇಹದ ನೋವನ್ನೂ ವಾಸಿ ಮಾಡುತ್ತದೆ. ಒಟ್ಟಾರೆಯಾಗಿ ನಗು ಜೀವನದ ಪರಮೋಚ್ಛ ಔಷಧಿ ಎಂದರೆ ತಪ್ಪಾಗಲಾರದು.

 

 

Edited By

Manjula M

Reported By

Manjula M

Comments