ಮಹಿಳೆಯರು ವ್ಯಾಕ್ಸಿಂಗ್ ಮಾಡಿಕೊಳ್ಳುವುದು ಇನ್ಮುಂದೆ ನಿಷೇಧ ಎಂದು ಫತ್ವಾ ಹೊರಡಿಸಿದ ಇಸ್ಲಾಂ ಧರ್ಮ ಗುರು..!

21 Jul 2018 1:12 PM | General
258 Report

ಇಸ್ಲಾಂ ಧರ್ಮದಲ್ಲಿ ಆಗಾಗ್ಗೆ ಒಂದಷ್ಟು ವಿವಾದಾತ್ಮಕ ಫತ್ವಾ ಹೊರಡಿಸುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ.ಇತ್ತೀಚೆಗೆ ತಲಾಕ್ ವಿರುದ್ಧ ಇಡೀ ದೇಶದ ಇಸ್ಲಾಂ ಹೆಣ್ಣು ಮಕ್ಕಳು ತಿರುಗಿ ಬಿದ್ದಿದ್ದರು. ಸುಪ್ರೀಂ ಕೋರ್ಟ್ ಕೂಡ ತಲಾಕ್ ವಿರುದ್ಧ ಮಹತ್ತರವಾದ ತೀರ್ಪು ನೀಡಿತ್ತು.

ಈಗ ಮುಜಾಫರ್ ನಗರದಲ್ಲಿ ಇಸ್ಲಾಂ ನ ಧಾರ್ಮಿಕ ಗುರು ದಾರುಲ್ ಉಲೂಮ್ ಅವರು ವಿಚಿತ್ರವಾದ ಫತ್ವಾವನ್ನು ಹೊರಡಿಸಿದ್ದಾರೆ. ಅವರು ಹೇಳಿರವಂತೆ ಷರಿಯಾ ಕಾನೂನಿನ ಪ್ರಕಾರ, ಹೆಣ್ಣು ಮಕ್ಕಳು ವ್ಯಾಕ್ಸಿಂಗ್, ಶೇವಿಂಗ್ ಮಾಡಿಕೊಳ್ಳಬಾರದು. ಇದು ಷರಿಯಾ ಕಾನೂನಿಗೆ ವಿರುದ್ಧವಾದುದು ಎಂದು ಫತ್ವಾವನ್ನು ಹೊರಡಿಸಿದ್ದಾರೆ.ಮುಜಾಫರ್ ನಗರದ ಸ್ಥಳೀಯರಾದ ಅಬ್ದುಲ್ ಆಜೀಜ್ ಅವರು ‘ಗಂಡಸರು ಗಡ್ಡ ಬೋಳಿಸುವುದು ಹಾಗೂ ಮಹಿಳೆಯರು ಕೈ ಕಾಲುಗಳಲ್ಲಿ ಇರುವ ರೋಮಗಳನ್ನು ತೆಗೆಸುವುದು ಧರ್ಮದ ಆಚರಣೆಯೇ? ಎಂದು ಕೇಳಿದ್ದರು.ಈ ಪ್ರಶ್ನೆಗೆ ಉತ್ತರಿಸಿದ ಧರ್ಮ ಗುರುಗಳು ಕಂಕುಳು, ಮೀಸೆ ಕೂದಲನ್ನು ಬಿಟ್ಟು ದೇಹದ ಯಾವುದೇ ಭಾಗದಲ್ಲಿ ಇರುವ ಕೂದಲನ್ನು ತೆಗೆಯುವುದು ಷರಿಯಾ ಕಾನೂನಿಗೆ ವಿರುದ್ಧವಾದುದು ಎಂದಿದ್ದಾರೆ.ಪ್ರಸ್ತುತ ಹೊರಡಿಸಿರುವ ಫತ್ವಾ ಸರಿಯಾದುದಾಗಿದೆ. ಷರಿಯಾ ಕಾನೂನಿನ ಪರವಾಗಿಯೇ ಇದೆ. ಆದರೆ ಇಂತಹ ಅಭ್ಯಾಸಗಳನ್ನು ನಿಷೇಧಿಸಿಲ್ಲ ಎಂದು ಇಸ್ಲಾಂ ಧರ್ಮ ಗುರು ಮೌಲಾನಾ ಸಾಲೀಂ ಅಶ್ರಫ್ ಖಾಸ್ಮಿ ಕೂಡ ದೃಢಪಡಿಸಿದ್ದಾರೆ.ಇದಕ್ಕೂ ಮೊದಲು ಇದೇ ಧರ್ಮ ಗುರುಗಳು ಅಪರಿಚಿತ ವ್ಯಕ್ತಿಯಿಂದ ಮೆಹಂದಿ ಹಾಕಿಸಿಕೊಳ್ಳವುದು, ಪುರುಷರಿಂದ ಮಹಿಳೆಯರು ಬಳೆ ತೊಡಿಸಿಕೊಳ್ಳುವುದು ಷರಿಯತ್ ಕಾಯಿದೆಯ ವಿರುದ್ಧವಾದುದು ಎಂದು ಫತ್ವಾ ಹೊರಡಿಸಿದ್ದರು.

Edited By

Manjula M

Reported By

Manjula M

Comments