ಇನ್ಮುಂದೆ ಬೆಂಗಳೂರಿನ ಮಾಲ್ ಗಳಲ್ಲೂ ಸಿಗಲಿದೆ ಸಾವಯವ ಕೃಷಿ ಉತ್ಪನ್ನಗಳು..!

19 Jul 2018 12:48 PM | General
437 Report

ಭಾರತ ಹಳ್ಳಿಗಳ ದೇಶ. ಕೃಷಿಯೇ ಇಲ್ಲಿ ಪ್ರಧಾನವಾದದ್ದು ಸಾವಯವ ಕೃಷಿ ಉತ್ಪನ್ನಗಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಎಲ್ಲಾ ಮಾಲ್ ಗಳಲ್ಲಿ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಕೃಷಿ ಇಲಾಖೆ ಹಾಗೂ ಕೃಷಿಕರ ಒಕ್ಕೂಟ ನಗರದಲ್ಲಿರುವ ಸೂಪರ್ ಮಾರುಕಟ್ಟೆ ಜೊತೆ ಕೈ ಜೋಡಿಸಿದೆ. ರಾಜ್ಯದಲ್ಲಿ ಸುಮಾರು 95,000ಕ್ಕೂ ಅಧಿಕ ನೋಂದಾಯಿತ ಸಾವಯವ ಕೃಷಿಕರು ಇದ್ದಾರೆ. ಹಣ್ಣು, ತರಕಾರಿ, ಏಕದಳ, ಎಣ್ಣೆ ಕಾಳು, ದ್ವಿಗಳ ಧಾನ್ಯಗಳು ಕೂಡ ಲಭ್ಯವಿದೆ. ಈ ಎಲ್ಲಾ ಬೆಳೆಗಳನ್ನು ಸಾವಯವ ಕೃಷಿಯ ಮೂಲಕವೇ ಬೆಳೆಯಲಾಗುತ್ತದೆ.

ಆದರೆ ರಾಜ್ಯದಲ್ಲಿ ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯಿಲ್ಲದೇ ನರಳುತ್ತಿದ್ದವು. ಹಾಗಾಗಿಯೇ ರೈತರು ಸಾವಯವ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಕೆಲವು ಸೂಪರ್ ಮಾರ್ಕೇಟ್ ಗಳಲ್ಲಿ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದರೂ ಕೂಡ ನಿರೀಕ್ಷೆಯಷ್ಟು ಆದಾಯ ಸಾವಯವ ಕೃಷಿ ಉತ್ಪನ್ನಗಳಿಂದ ಬರುತ್ತಿಲ್ಲ.ಈ ಮೊದಲು ಬೆಂಗಳೂರಿನ ಬಿಗ್ ಬಜಾರ್, ಫುಡ್ ವರ್ಲ್ಡ್, ಮೆಗಾ ಮೋರ್, ಸ್ಟಾರ್ ಬಜಾರ್, ರಿಲಯನ್ಸ್ ಮಾರ್ಟ್ ಸೇರಿದಂತೆ ಅನೇಕ ಸೂಪರ್ ಮಾರುಕಟ್ಟೆಗಳಲ್ಲಿ ಸಾವಯವ ಉತ್ಪನ್ನಗಳು ಲಭ್ಯವಿರಲಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಈ ಕಡೆಗಳಲ್ಲೂ ಕೂಡ ಸಾವಯವ ಕೃಷಿ ಉತ್ಪನ್ನಗಳು ಸಿಗಲಿದೆ. ಹಳ್ಳಿಗಳಲ್ಲಿ ಪ್ರದೇಶಗಳಲ್ಲಿ ಸಾವಯವ ಬೇಸಾಯ ಮಾಡುವ ಕೃಷಿಕರ ಒಕ್ಕೂಟಗಳನ್ನು ರಚನೆ ಮಾಡಲಾಗಿದೆ. ಈ ಒಕ್ಕೂಟಕ್ಕೆ ಸಾವಯವ ಕೃಷಿಕರು ನೋಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ನೋಂದಾಯಿಸಲ್ಪಟ್ಟ ರೈತರು ಸಾವಯವ ಕೃಷಿಯನ್ನು ಅನುಸರಿಸುವುದು ಕಡ್ಡಾಯವಾಗಿದೆ. ಸಾವಯವ ರೈತರು 5 ಅಥವಾ 10 ರೂ. ಷೇರುಗಳನ್ನು ಹಾಕಿ ಸ್ಥಳೀಯ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡು ವ್ಯವಹಾರ ನಡೆಸಲಾಗುತ್ತದೆ.

Edited By

Manjula M

Reported By

Manjula M

Comments