5 ವರ್ಷದ ನಂತರ ತುಂಗಾಭದ್ರಾ ಜಲಾಶಯ ಭರ್ತಿ : ರೈತರ ಮೊಗದಲ್ಲಿ ಮಂದಹಾಸ

19 Jul 2018 11:14 AM | General
562 Report

ಇತ್ತಿಚಿಗೆ ಎಲ್ಲೆಡೆ ಬಾರಿ ಮಳೆಯಾಗಿದ್ದು ಕೆರೆ ಕಟ್ಟೆ ಎಲ್ಲವೂ ತುಂಬಿ ಹೋಗಿದೆ. ತುಂಗಾ ಭದ್ರ ಜಲಾಶಯವು ಐದು ವರ್ಷದ ನಂತರ ಭರ್ತಿಯಾಗಿದ್ದು ಎಲ್ಲರ ಮೊಗದಲ್ಲೂ ಸಂತಸ ತಂದಿದೆ. ಬುಧವಾರ ಸಂಜೆ ಜಲಾಶಯದ ಗೇಟ್ ಮೂಲಕ ನೀರು ಹೊರಕ್ಕೆ ಬಿಡಲಾಗಿದೆ.

ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಜನರ ಜೀವನಾಡಿಯಾಗಿದ್ದ ತುಂಗಭದ್ರಾ ಡ್ಯಾಂ ಕಳೆದ ಐದು ವರ್ಷಗಳಿಂದ ಭರ್ತಿಯಾಗಿರಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿದ್ದು, ತುಂಗಭದ್ರ ಡ್ಯಾಂ ಭರ್ತಿಯಾಗಿದ್ದು, ರೈತರಲ್ಲಿ ಹರ್ಷದ ಹೊನಲನ್ನು  ತಂದಿದೆ. ತುಂಗಾ ಭದ್ರ ಜಲಾಶಯದ 10 ಗೇಟ್ ತೆಗೆಯುವ ಮೂಲಕ 30 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಡ್ಯಾಂ ಆಗಸ್ಟ್ ನಲ್ಲಿ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಮುಂಚಿತವಾಗಿಯೇ ಭರ್ತಿಯಾಗಿದೆ.

Edited By

Manjula M

Reported By

Manjula M

Comments